ಎಸ್ ವೈ ಎಸ್, ಎಸ್ ವೈ ಎಸ್ಎಸ್ಎಫ್ ಹಾಗೂ ಕೆ ಎಮ್ ಜೆ ಕೆ ಸಿ ನಗರ ಯುನಿಟ್ ವತಿಯಿಂದ “ಸುನ್ನೀ ಆದರ್ಶ ಸಂಗಮ” ಕಾರ್ಯಕ್ರಮವು ಮೇ 8ರಂದು ಶುಕ್ರವಾರ ಸಂಜೆ 5 ಗಂಟೆಗೆ ಕೆ ಸಿ ನಗರ ಜಂಕ್ಷನ್ನಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ಉದ್ಘಾಟಿಸಲಿದ್ದು, ಮುಖ್ಯ ಭಾಷಣವನ್ನು ವಹ್ಹಾಬ್ ಸಖಾಫಿ ಮಾಂಬಾಡ್ ನೆರವೇರಿಸಲಿದ್ದಾರೆ. ಅಬ್ದುರ್ರಶಿದ್ ಝೈನಿ ಸಖಾಫಿ ತಲಪಾಡಿ ಹಾಗೂ ಮುನೀರ್ ಸಖಾಫಿ ಕೆ ಸಿ ರೋಡ್ ಉಪಸ್ಥಿತರಿರುವರು.
ಸಲಫಿಗಳ ಪೊಳ್ಳು ವಾದಗಳಿಗೆ ತಕ್ಕ ಉತ್ತರ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

