Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ರಸ್ತೆ ಅಗಲೀಕರಣಕ್ಕಿಲ್ಲ ಮುಕ್ತಿ: ಎನ್.ಎಚ್ 66 ಕಾಮಾಗಾರಿಯಲ್ಲಿ ಜನಪ್ರತಿನಿಧಿಗಳ ಕಡೆಗಣನೆ

UllalaVaniBy UllalaVaniOctober 2, 2015No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಕುಂದಾಪುರ ಟು ತಲಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಆರಂಭವಾಗಿ ವರ್ಷಗಳು ಸಂದು ರಸ್ತೆ ಕಾಮಗಾರಿ ಪೂರ್ಣವಾಗದೆ, ಅದರ ಅವ್ಯವಸ್ಥೆಗೆ ಜೀವಗಳು ಮಾತ್ರ ಬಲಿಯಾಗುತ್ತಲೇ ಇವೆ. ಆದರೂ ಗಮನಹರಿಸಬೇಕಾದ ಜನಪ್ರತಿನಿಧಿಗಳು ಜನರ ಧ್ವನಿಗೆ ಪ್ರತಿಕ್ರಿಯಿಸದೆ ತಮ್ಮ ಪಾಲಿಗೆ ಮುಂದುವರಿಯುತ್ತಿರುವ ನಡೆ ಹಲವು ಸಂಶಯಗಳಿಗೆ ಕಾರಣವಾಗುತ್ತಿದೆ.

ಮಂಗಳೂರಿನಿಂದ ತಲಪಾಡಿಯವರೆಗೂ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಅಗಲೀಕರಣ ಕಾಮಗಾರಿಯ ಟೆಂಡರ್ ಮೇ. 2008ರಲ್ಲಿ ಕರೆಯಲಾಗಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಒಂದೇ ವರ್ಷ ಅಂದರೆ 2009ರಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಯಿತು. ಆದರೆ ಈವರೆಗೆ ಕಾಮಗಾರಿ ಪೂರ್ಣವಾಗದೆ ಸರಿಸುಮಾರು 7 ವರ್ಷಗಳು ಪೂರ್ಣವಾಗುತ್ತಾ ಬಂದಿದೆ. ಈ ನಡುವೆ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆ ಕಂಪೆನಿಗಳಿಂದ ಜನಪ್ರತಿನಿಧಿಗಳು ಕಮೀಷನ್ ಪಡೆದುಕೊಂಡು ಕಾಮಗಾರಿ ವಿಳಂಬವಾದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಅನ್ನುವ ಆರೋಪವೂ ಕೇಳಿಬಂದಿದೆ.

Dyfi (10)

Dyfi (11) (1)

Dyfi (11)

Dyfi (22)ಲೆಕ್ಕವಿಲ್ಲದ ಅಪಘಾತಗಳು :

ಕುಂದಾಪುರದಿಂದ ತಲಪಾಡಿವರೆಗೆ ಹಲವೆಡೆ ಕಾಮಗಾರಿಗಳು ಪೂರ್ಣವಾಗಿದೆ. ಪಡುಬಿದ್ರಿ, ಮುಲ್ಕಿ, ಕುಳಾಯಿ, ನಂತೂರು, ಪಂಪ್‍ವೆಲ್, ಕಲ್ಲಾಪು, ತೊಕ್ಕೊಟ್ಟು, ಉಚ್ಚಿ¯, ತಲಪಾಡಿ ಭಾಗಗಳಲ್ಲಿ ರಸ್ತೆ ಕಾಮಗಾರಿ ನಡೆಯದೆ ರಸ್ತೆ ಹೊಂಡ-ಗುಂಡಿಗಳಿಂದ ಕೂಡಿದೆ. ಕಾಮಗಾರಿ ಸಂದರ್ಭದಲ್ಲಿ ನೀಡುವ ಡೈವರ್ಷನ್ ಗಳು ದಿನದಲ್ಲಿ ಹಲವು ಜೀವಗಳನ್ನು ಬಲಿ ಪಡೆಯುತ್ತಲೇ ಇದೆ. ಕುಂದಾಪುರದಿಂದ ತಲಪಾಡಿವರೆಗೆ ಬಲಿಯಾದ ಜೀವಗಳ ಸಂಖ್ಯೆ ಲೆಕ್ಕವಿಲ್ಲದಷ್ಟು. ಆದರೆ ಸಾವಿನ ಹೊಣೆಯನ್ನು ಹೊರಬೇಕಾದ ಹೆದ್ದಾರಿ ಪ್ರಾಧಿಕಾರ ಕಾಮಗಾರಿಯನ್ನು ಇನ್ನಷ್ಟು ಮಂದಗತಿಯಲ್ಲಿ ನಡೆಸುತ್ತಿದ್ದರೆ, ಇಲಾಖೆಯನ್ನು ನಿರ್ವಹಿಸಬೇಕಾದ ಜನಪ್ರತಿನಿಧಿ ಕಣ್ಣಿದ್ದೂ ಕುರುಡನಂತಾಗಿದ್ದಾರೆ.

ತೊಕ್ಕೊಟ್ಟು ಫ್ಲೈಓವರಿಗಿಲ್ಲ ಮುಕ್ತಿ:

ಹೆದ್ದಾರಿ ಕಾಮಗಾರಿ ಆರಂಭವಾದ ಕೆಲವೇ ತಿಂಗಳುಗಳಲ್ಲಿ ತೊಕ್ಕೊಟ್ಟು ಫ್ಲೈಓವರಿಗೆ ಯೋಜನೆ ರೂಪಿಸಲಾಯಿತು. ಅದಕ್ಕಾಗಿ ದಿನದಲ್ಲಿ ಸಾವಿರಗಟ್ಟಲೆ ವಾಹನ ಸಂಚರಿಸುವ ಜಂಕ್ಷನ್ನಿನಲ್ಲಿ ಏಕಮುಖ ಸಂಚಾರವನ್ನು ಆರಂಭಿಸಲಾಯಿತು. ಮತ್ತೆ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಸೆಟೆದು ನಿಂತ ಪಕ್ಷವೊಂದರ ಕಾರ್ಯಕರ್ತರು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸುವಂತೆ ತಡೆಯೊಡ್ಡಿ ಮತ್ತೆ ಹೊಸ ಯೋಜನೆ ರೂಪಿಸುವಂತೆ ಒತ್ತಡ ಹೇರಿದ್ದರು. ಇದರಿಂದಾಗಿ ಮತ್ತೆ ಕೆಲ ವರ್ಷಗಳ ಕಾಲ ಕಾಮಗಾರಿ ಸ್ಥಗಿತಗೊಂಡು ವಾಹನಸವರರೂ ಸಂಕಷ್ಟಕ್ಕೀಡಾದರು. ಕೆಲ ತಿಂಗಳ ಹಿಂದೆ  ಮತ್ತೆ ಕಾಮಗಾರಿ ಆರಂಭಗೊಂಡರೂ ಮುಕ್ತಿ ಇನ್ನೂ ದೊರೆತಿಲ್ಲ. ಇದರಿಂದಾಗಿ ಗಂಟೆಗಟ್ಟಲೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ, ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಸಮಯಕ್ಕೆ ಸರಿಯಾಗ ಕಾರ್ಯಕ್ಷೇತ್ರಕ್ಕೆ ತಲುಪಬೇಕಾದವರು ತಲುಪದೆ ತೊಂದರೆಗೀಡಾಗುತ್ತಿರುವುದು ಸಾಮಾನ್ಯವಾಗಿದೆ. ಆಂಬ್ಯುಲೆನ್ಸ್ ವಾಹನಗಳು ಸಂಚಾರದಲ್ಲಿ ಅಡ್ಡಿಯುಂಟಾಗಿ ರೋಗಿಗಳು ಸಾವನ್ನಪ್ಪಿರುವ ಉದಾಹರಣೆಗಳು ಗಂಭೀರ ವಿಷಯವಾದರೆ, ವಿಮಾನ, ರೈಲನ್ನೇರುವ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಸ್ಟೇಷನ್ ಅಥವಾ ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗದೆ ಬಾಕಿಯಾದ ಉದಾಹರಣೆಗಳು ಅನೇಕ ಇದೆ. ನೇತ್ರಾವತಿ ಸೇತುವೆ ಕಾಮಗಾರಿ ವೇಳೆ ಇಂತಹದ್ದೇ ಘಟನೆಗಳು ನಡೆಯುತ್ತಿತ್ತು, ಇದೀಗ ನೂತನ ಸೇತುವೆ ಉದ್ಘಾಟನೆಗೊಂಡಾಗಿನಿಂದ ಸಮಸ್ಯೆ ಈಡೇರಿದ್ದರೆ, ಮತ್ತೆ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯಿಂದ ದೇರಳಕಟ್ಟೆ, ಕೇರಳ, ಉಳ್ಳಾಲ, ಕೋಟೆಕಾರು ಭಾಗದ ಜನ ತೊಂದರೆ ಅನುಭವಿಸುತ್ತಿದ್ದಾರೆ.

ಪಾದಚಾರಿಗಳಿಗೂ ತೊಂದರೆ:

ತೊಕ್ಕೊಟ್ಟುನಿಂದ ತಲಪಾಡಿಯ ಮಧ್ಯೆ ಭಾಗದಲ್ಲಿ ಅಂದರೆ ಬೀರಿ ಜಂಕ್ಷನ್ ನಲ್ಲಿ ಇದೀಗ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಆದರೆ ಇಲ್ಲಿ ರಸ್ತೆ ದಾಟಲು ಸರಿಯಾದ ವ್ಯವಸ್ಥೆಗಳಿಲ್ಲದೆ ಜನರು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿದೆ. ಬೆಳಿಗ್ಗೆ ಕೆಲಸ ನಿಮಿತ್ತ ತೆರಳುವ ಮಾಡೂರು, ಮಡ್ಯಾರ್, ಕೋಟೆಕಾರ್, ಹಾಗೂ ಸ್ಥಳೀಯ ನಿವಾಸಿಗಳು ಈ ಜಂಕ್ಷನ್‍ಗೆ ಬರಬೇಕಾಗಿದ್ದು ಪ್ರತಿ ದಿನ ನೂರಾರು ಜನರು ಇಲ್ಲಿ ಸಂಚರಿಸಿರುತ್ತಾರೆ. ಇನ್ನು ದೇರಳಕಟ್ಟೆಯಿಂದ ಮಡ್ಯಾರು, ಮಾಡೂರು ಕಡೆಗೆ ಹೋಗುವ ಬಸ್ ಹಾಗೂ ಇತರ ವಾಹನಗಳು ಇದೇ ರಸ್ತೆಯನ್ನು ಸಂಪರ್ಕಿಸುವುದರಿಂದ ಮೂರು ಕಡೆಗಳಲ್ಲಿ ವಾಹನಗಳು ಬರುವ ಸಂದರ್ಭ ಜನರು ರಸ್ತೆ ದಾಟಲು ಪೇಚಾಗಿ ಹೋಗುತ್ತಿದ್ದಾರೆ. ತೊಕ್ಕೊಟ್ಟು ಜಂಕ್ಷನ್ನಿನಲ್ಲಿಯೂ ಇದೆ ಸ್ಥಿತಿಯಾಗಿದೆ.
ಒಂದು ಕಡೆಯಲ್ಲಿ ಕಾಮಗಾರಿ ಇನ್ನೊಂದು ಕಡೆಯಲ್ಲಿ ಕಾಸರಗೋಡಿನಿಂದ ಮಂಗಳೂರಿಗೆ ವಿಮಾನದಂತೆ ಸಾಗುವ ಕೆಎಸ್‍ಎರ್‍ಟಿಸಿ ಬಸ್ಸುಗಳು, ಕಾಮಗಾರಿ ನಡೆಯುತ್ತಿದೆ ಎಂದು ತಿಳಿದರೂ ಸಹ ಅದಕ್ಕೆ ಕ್ಯಾರೆ ಅನ್ನದೇ ತಮಗೆ ಇಷ್ಟ ಬಂದಂತೆ ಸಾಗುವ ವಾಹನ ಸವಾರರಿಂದಾಗಿ ರಸ್ತೆ ಬದಿಯಲ್ಲಿ ನಿಲ್ಲುವುದೆಂದರೆ ಭಯವಾಗುತ್ತದೆ ಅನ್ನೋದು ಅನೇಕ ಜನರ ಮಾತು. ಇನ್ನು ಈ ಪ್ರದೇಶದ ಸುತ್ತಮುತ್ತಲಿನಲ್ಲಿ ಶಾಲೆಗಳಿರುವುದರಿಂದ ಮಕ್ಕಳಿಗೂ ಕೂಡ ಈ ರಸ್ತೆಯನ್ನು ದಾಟಲು ಕಷ್ಟವಾಗುತ್ತಿದೆ. ರಸ್ತೆ ದಾಟುವ ವೇಳೆ ಅನೇಕ ಅಪಘಾತಗಳು ನಡೆಯುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಪರಿಹಾರವನ್ನು ನೀಡಬೇಕೆಂಬುದು ಇಲ್ಲಿನ ಜನರ ಅಭಿಪ್ರಾಯ.

ಈ ಪ್ರದೇಶದಲ್ಲಿ ಇದುವರೆಗೆ ಯಾವುದೇ ರೀತಿಯಾದ ಬ್ರಾರಿಗೇಡ್ ಆಗಲಿ ಟ್ರಾಫಿಕ್ ಪೊಲೀಸರನ್ನಾಗಲಿ ಆಯೋಜಿಸಿಲ್ಲ. ಬೆಳಿಗ್ಗಿನ ಹಾಗೂ ಸಂಜೆಯ ಹೊತ್ತಿನಲ್ಲಿ ಈ ಪ್ರದೇಶದಲ್ಲಿ ರಸ್ತೆ ದಾಟುವುದೆ ಜಬರಿಗೆ ವಿರ್ಪಯಾಸವಾಗಿದೆ. ಶಾಲಾ ಮಕ್ಕಳ ಹಾಗೂ ಪಾದಾಚಾರಿಗಳ ಹಿತ ರಕ್ಷಣೆಗಾಗಿ ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಈ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರ ಅಗತ್ಯವಿದೆ.

ವಜ್ರ ಗುಜರನ್ ಮಾಡೂರು

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠಕ್ಕೆ ಆನಂದ ಕೆ. ಅಸೈಗೋಳಿ ನೂತನ ಸದಸ್ಯರಾಗಿ ನೇಮಕ

June 26, 2026

ಬಹುಮುಖ ಪ್ರತಿಭೆಯ ಸುರೇಶ್ ಕೆ. ರಾವ್ ಅವರಿಗೆ ಪ್ರತಿಷ್ಠಿತ ಡಾ. ವಿಷ್ಣುವರ್ಧನ್ ಪ್ರಶಸ್ತಿ

June 25, 2026

ಪ್ರತೀ ಗಲ್ಲಿಗಳ ಅಭಿವೃದ್ಧಿ, ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಬಿಜೆಪಿ ಧ್ಯೇಯ,ಉದ್ದೇಶ; ಎಂಎಲ್ಸಿ ಕಿಶೋರ್ ಕುಮಾರ್

June 25, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
All News

ಮಾತೃಶ್ರೀ ಬಡಾವಣೆಯ ಮಮತಾ ಶೆಟ್ಟಿ ಮತ್ತು ಅಗಸ್ಟಿನ್ ರ ಮನೆಯ ದಾರಿಗೆ ಅನುದಾನ ಮಂಜೂರಾದರೂ, ಟೆಂಡರ್‌ ಪೂರ್ಣಗೊಂಡಿಲ್ಲ : ಕೌನ್ಸಿಲರ್‌ ಹರೀಶ್‌ ರಾವ್‌ ಮಡ್ಯಾರ್

By UllalaVaniJune 26, 20260

ಕೋಟೆಕಾರು: 11ನೇ ವಾರ್ಡಿನ ಶಾಸ್ತಾವು ಮಾತೃಶ್ರೀ ಬಡಾವಣೆಯ ನಿವಾಸಿ ಮಮತಾ ಶೆಟ್ಟಿ ಮತ್ತು ಅಗಸ್ಟಿನ್ ಅವರ ಮನೆಗೆ ಹೋಗಲು ಇರುವ…

ʻಶಾಸಕರು ಅರ್ಧ ಬಿಟ್ಟ ಕಾಂಕ್ರೀಟಿಕರಣವನ್ನು ನಾನೇ ಪೂರ್ಣಗೊಳಿಸುತ್ತೇನೆ ʼ : ಅಧ್ಯಕ್ಷೆ ದಿವ್ಯಾ ಸತೀಶ್‌ ಶೆಟ್ಟಿ , ಕೋಟೆಕಾರು ರಾಮಾಶ್ರಯ ರಸ್ತೆ ಉದ್ಘಾಟನೆಯಲ್ಲಿ ಭರವಸೆ

June 26, 2026

ಗ್ಯಾಸ್ ಮಾಫಿಯಾ ವಿರುದ್ಧ ಕಠಿಣ ಕ್ರಮ ಅಗತ್ಯ – ಅಡುಗೆ ಅನಿಲವನ್ನು ಮೂಲಭೂತ ಹಕ್ಕಾಗಿ ಘೋಷಿಸಲಿ

June 26, 2026

ಮಂಗಳೂರು: ಡ್ರಗ್ ಸರಬರಾಜು ಮಾಡುತ್ತಿದ್ದ ಓರ್ವ ಆರೋಪಿಯ ಸೆರೆ

June 26, 2026
1 2 3 … 1,986 Next
Automatic YouTube Gallery

ಶಾಸಕರು ರಸ್ತೆ ಮಧ್ಯಭಾಗದಲ್ಲೇ ಕಾಮಗಾರಿ ನಡೆಸದೇ ಇರುವುದು ಧರ್ಮಬೇಧವಲ್ಲವೇ? : ದಿವ್ಯಾ ಸತೀಶ್‌ ಶೆಟ್ಟಿ | Ullalavani

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಶಾಸಕರು ರಸ್ತೆ ಮಧ್ಯಭಾಗದಲ್ಲೇ ಕಾಮಗಾರಿ ನಡೆಸದೇ ಇರುವುದು ಧರ್ಮಬೇಧವಲ್ಲವೇ? : ದಿವ್ಯಾ ಸತೀಶ್‌  ಶೆಟ್ಟಿ | Ullalavani
Now Playing
ಶಾಸಕರು ರಸ್ತೆ ಮಧ್ಯಭಾಗದಲ್ಲೇ ಕಾಮಗಾರಿ ನಡೆಸದೇ ಇರುವುದು ಧರ್ಮಬೇಧವಲ್ಲವೇ? : ದಿವ್ಯಾ ಸತೀಶ್‌ ಶೆಟ್ಟಿ | Ullalavani
📍 Ullal | Dakshina Kannada | Coastal Karnataka News Update ಉಳ್ಳಾಲ, ...
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
೫ ಲಕ್ಷ ರೂ.ಸಣ್ಣ  ರಸ್ತೆ ಕಾಮಗಾರಿಗೆ   ಸಚಿವ ಯು.ಟಿ.ಖಾದರ್‌ ಅವರು   ರಾಜಕೀಯ ಪ್ರದರ್ಶನಕ್ಕಾಗಿ ಬರುವುದು ಬೇಡ.
Now Playing
೫ ಲಕ್ಷ ರೂ.ಸಣ್ಣ ರಸ್ತೆ ಕಾಮಗಾರಿಗೆ ಸಚಿವ ಯು.ಟಿ.ಖಾದರ್‌ ಅವರು ರಾಜಕೀಯ ಪ್ರದರ್ಶನಕ್ಕಾಗಿ ಬರುವುದು ಬೇಡ.
📍 Ullal | Dakshina Kannada | Coastal Karnataka News Update ಉಳ್ಳಾಲ, ...
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version