ಕೋಟೆಕಾರ್ ಅಜ್ಜಿನಡ್ಕ ಸಮೀಪದ ಮರ್ಕಝುಲ್ ಹಿದಾಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಆಯಿಶಾ ಶೆರೀನಾ ಅವರು 2025-26ನೇ ಸಾಲಿನ ಎಸೆಸೆಲ್ಸೀ ಪರೀಕ್ಷೆಯಲ್ಲಿ 545 ಅಂಕಗಳನ್ನು ಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ.

ತಲಪಾಡಿ ಗ್ರಾಮದ ಹೊಸನಗರ ನಿವಾಸಿಗಳಾದ ಅಹ್ಮದ್ ರಿಝ್ವಾನ್ ಮತ್ತು ಸಾಜಿದಾಬಾನು ದಂಪತಿಯ ಪುತ್ರಿಯಾದ ಇವರು, ತಮ್ಮ ಪರಿಶ್ರಮ ಮತ್ತು ಅಧ್ಯಯನದ ಮೂಲಕ ಈ ಯಶಸ್ಸು ಸಾಧಿಸಿದ್ದಾರೆ.
ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಬಂಧುಬಳಗದವರು ಆಯಿಶಾ ಶೆರೀನಾಳ ಸಾಧನೆಗೆ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.

