ಹವ್ಯಾಸಿ ರಂಗಭೂಮಿ ಕಲಾವಿದ ಮಿಥುನ್ ಪೂಜಾರಿ(40) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ನಡೆದಿದೆ.

ಮೃತ ಮಿಥುನ್ ಪೂಜಾರಿ ಉಳ್ಳಾಲ ತಾಲೂಕಿನ ಇರಾ ಗ್ರಾಮದ ಪಾತ್ರಾಡಿ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಮೇಸ್ತಿçಯಾಗಿದ್ದರು. ಅದಲ್ಲದೇ ಸ್ಥಳೀಯವಾಗಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಇರಾದಲ್ಲಿ ಹೊಸ ಮನೆ ನಿರ್ಮಿಸಿದ ಬಳಿಕ ಇವರು ಮಂಚಿ ಸಮೀಪದಲ್ಲಿದ್ದ ತಮ್ಮ ಹಳೆಯ ಮನೆಗೆ ತೋಟಕ್ಕೆ ನೀರು ಬಿಡಲು ತೆರಳುತ್ತಿದ್ದರು ಎನ್ನಲಾಗಿದೆ. ಎಂದಿನAತೆ ಸೋಮವಾರ ಬೆಳಗ್ಗೆ ಮನೆಯಿಂದ ಹೋದವರು ಸಂಜೆಯಾದರೂ ವಾಪಾಸಾಗದಿದ್ದಾಗ ಅನುಮಾನಗೊಂಡ ಸ್ಥಳೀಯರು ಹಾಗೂ ಸಂಬAಧಿಕರು ಹಳೆಯ ಮನೆಗೆ ತೆರಳಿ ಪರಿಶೀಲಿಸಿದ್ದಾರೆ. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ಹವ್ಯಾಸಿ ಕಲಾವಿದರಾಗಿದ್ದ ಮಿಥುನ್ ಪೂಜಾರಿ ಅವರು ಸ್ಥಳೀಯ ಹಲವು ನಾಟಕ ತಂಡಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು. ಮೃತರು ಪತ್ನಿ ಹಾಗೂ ಎರಡು ವರ್ಷದ ಪುಟ್ಟ ಮಗುವನ್ನು ಅಗಲಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

