ಉಳ್ಳಾಲ: ದೇವರು ನೆನೆಸಿದ ಕಾರ್ಯವನ್ನು ತಡೆಯಲು ಮನುಷ್ಯನ ಹಣ, ಆಸ್ತಿ, ಸಂಪತ್ತು, ಅಹಂಕಾರದಿಂದ ಸಾಧ್ಯವಿಲ್ಲ. ಪ್ರಸ್ತುತ ನಡೆಯುತ್ತಿರುವ ಯುದ್ಧದಿಂದ ಎಲ್ಲರೂ ಸಂಕಷ್ಟದಲ್ಲಿದ್ದು ವಿಶ್ವ ಶಾಂತಿಗಾಗಿ ಪ್ರತಿಯೊಬ್ಬರೂ ನಿರಂತರ ಪ್ರಾರ್ಥನೆ ನಡೆಸಬೇಕು ಎಂದು ಕುಟ್ಯಾಡಿ ಸಿರಾಜುಲ್ ಹುದಾ ಸಂಸ್ಥೆಯ ಸ್ಥಾಪಕ ಶೈಖುನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್ ಕರೆ ನೀಡಿದರು.

ಕೈರಂಗಳ ಗ್ರಾಮದ ವಿದ್ಯಾನಗರ ಅನ್ಸಾರುಲ್ ಹುದಾ ರಿಫಾಯಿ ಮಸೀದಿ ಅಧೀನದ ಮದ್ರಸಾ ಕಟ್ಟಡ ಮತ್ತು ಪ್ರವೇಶ ದ್ವಾರ ಉದ್ಘಾಟಿಸಿ ಮಾತನಾಡಿದರು.
ಸೇವೆಯ ವಿಷಯದಲ್ಲಿ ಜಾತಿ, ಧರ್ಮದ ಅಡ್ಡಿಯಾಗದು. ಮನುಷ್ಯ ಮನಶಾಂತಿಯಿಂದ ಮುಂದಿನ ಜೀವನ ನಡೆಸಬೇಕಾದರೆ ಎಳೆ ಪ್ರಾಯದಲ್ಲೇ ಧಾರ್ಮಿಕ ವಿಚಾರಗಳು, ಜೀವನ ಕ್ರಮ ಕಲಿಯಲು ಮದ್ರಸಾ ಶಿಕ್ಷಣ ಅನಿವಾರ್ಯ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಅನ್ಸಾರುಲ್ ಹುದಾ ರಿಫಾಯಿ ಮಸೀದಿಯ ಅಧ್ಯಕ್ಷ ಹೈದರ್ ಕೈರಂಗಳ ಮಾತನಾಡಿ, 20 ವರ್ಷಗಳ ಹಿಂದೆ 20 ಯುವಕರು ಧಾರ್ಮಿಕ ಸೇವೆಯ ರೂಪದಲ್ಲಿ ನಮಾಝ್ ಮಸೀದಿ ಆರಂಭಿಸಿದ್ದರು, ಸ್ಥಳೀಯ ಭಾಗದ ಸಣ್ಣ ಮಕ್ಕಳು ಧಾರ್ಮಿಕ ಶಿಕ್ಷಣಕ್ಕೆ ದೂರದ ಮದ್ರಸಾಕ್ಕೆ ಹೋಗಲು ಕಷ್ಟಪಡುವುದನ್ನು ಗಮನಿಸಿ ದಾನಿಗಳಿಬ್ಬರು ಮದ್ರಸಾ ಕಟ್ಟಡ ಮತ್ತು ಪ್ರವೇಶ ದ್ವಾರ ನಿರ್ಮಿಸಿಕೊಟ್ಟಿದ್ದಾರೆ ಎಂದರು.
ಸಯ್ಯಿದ್ ತಲಕ್ಕಿ ತಂಙಳ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ತೋಟಾಲ್ ಮಾಅತ್ ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ, ಖತೀಬ್ ಮುಹಿಯುದ್ದೀನ್ ಸಅದಿ, ಸಾಮನಿಗೆ ಮಸೀದಿ ಖತೀಬ್ ಅಬೂಬಕ್ಕರ್ ಮದನಿ, ಹಿರಿಯರಾದ ಉಮ್ಮರ್ ಸಿದ್ದೀಕ್ ಸುಟ್ಟ, ಇಂಜಿನಿಯರ್ ಮಹಮ್ಮದ್ ಶರೀಫ್ ಸುಟ್ಟ, ಮೋಂಟುಗೋಳಿ ಜಮಾಅತ್ ಅಧ್ಯಕ್ಷ ಸುಲೈಮಾನ್, ಮುದುಂಗಾರು ಜಮಾಅತ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಬಾಳೆಪುಣಿ ಗ್ರಾ.ಪಂ. ನಿಕಟಪೂರ್ವ ಸದಸ್ಯ ಯಾಕೂಬ್, ಜಮಾಅತ್ ಕೋಶಾಧಿಕಾರಿ ಮೂಸ ಕುಂಞಿ ಹಾಜಿ ಪಾರೆ, ಕಾರ್ಯದರ್ಶಿ ಅಬೂಬಕ್ಕರ್, ಉಪಾಧ್ಯಕ್ಷ ಹೈದರ್ ಗೋಳಿಯಡಿ, ಜತೆಕಾರ್ಯದರ್ಶಿಗಳಾದ ನಾಸೀರ್ ಸಿ.ಎಂ., ರಝಾಕ್ ಸುಟ್ಟ, ಮಾಜಿ ಅಧ್ಯಕ್ಷರಾದ ಹೈದರ್ ಮಲಿ, ಇಬ್ರಾಹಿಂ ಕಲ್ಲಾಂಡ, ಖಲೀಲ್ ಡಿ.ಎಸ್., ಅಲ್ ಮದೀನ ವ್ಯವಸ್ಥಾಪಕ ಖಾದರ್ ಸಖಾಫಿ, ಇಸ್ಮಾಯಿಲ್ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.
ಇಮಾಮ್ ಸಅದ್ ಮರ್ಝೂಕಿ ಸ್ವಾಗತಿಸಿದರು. ಮದ್ರಸಾ ಅಧ್ಯಾಪಕ ಸ್ವಾಧಿಕ್ ಸಖಾಫಿ ನಿರೂಪಿಸಿದರು.

