ವಿಶ್ವ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕರಾದ ಕೆ.ಎಂ.ಕೆ. ಮಂಜನಾಡಿ ಅವರು, ಸಮಾನತೆಗಾಗಿ ಹೋರಾಡಿದ ಅಂಬೇಡ್ಕರ್ ತಮ್ಮ ಅಸಾಮಾನ್ಯ ವ್ಯಕ್ತಿತ್ವದಿಂದ ಜಗತ್ತನ್ನು ಬೆಳಗಿದ ಮಹನೀಯರು ಎಂದು ಹೇಳಿದರು. ಇಡೀ ಜಗತ್ತೇ ಸಮಾನತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಾಡಿದ ಅವರು, ಸಮಾಜದ ಆಶಾಕಿರಣವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.


“ಯಾವ ಧರ್ಮವು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲ್ಪಿಸುತ್ತದೆಯೋ ಅದೇ ನಿಜವಾದ ಧರ್ಮ. ಕಲ್ಪನೆಗಿಂತ ಜ್ಞಾನವೇ ಶಕ್ತಿಯುತ. ಸಮಾನತೆ ಮತ್ತು ಸಹೋದರತ್ವ ಶಾಂತಿಯುತ ಜೀವನಕ್ಕೆ ನಾಂದಿ” ಎಂದು ಅಂಬೇಡ್ಕರ್ ಜಗತ್ತಿಗೆ ಸಾರಿದ ಸಂದೇಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರಾದ ಸಪ್ನಾ, ಬಬಿತಾ ಸೆಲಿನ್ ಡಿಸೋಜಾ, ಹಸೀನ್ ತಾಜ್, ವೀಣಾ, ರಮ್ಲಾ ಬಾನು, ಶಕೀಲಾ, ಸುಮನ್, ಸೌಮ್ಯ, ಶಶಿಕಲಾ, ಕುಮಾರಿ ಅರ್ಪಿತ ರೈ, ವಿದ್ಯಾ ರಾವ್, ಕುಮಾರಿ ಮೋನಿಷಾ, ಸುಮಾ, ಅಸ್ಮ ಹಾಗೂ ಅಂಗನವಾಡಿ ಸಹಾಯಕಿ ಕಮಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

