ಮಂಗಳೂರು: ಕೆಲಿಝಿಯಂ ಜಿಮ್ ಸೆಂಟರ್ ಜಿಮ್ನಾಸ್ಟಿಕ್ ಜತೆಗೆ ಜಿಮ್, ಆಟ ಎಲ್ಲವನ್ನೂ ಒಂದೇ ವೇದಿಕೆಯಲ್ಲಿ ಸ್ಥಾಪಿಸಿರುವಂತಹ ವಿಭಿನ್ನ ಪ್ರಯತ್ನ. ಈ ಮೂಲಕ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಸ್ವಸ್ಥ್ಯ ಸಮಾಜದ ನಿರ್ಮಾಣವಾಗಲಿ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.



ಅವರು ಕುದ್ರೋಳಿ, ಅಳಕೆ, ಕೂಳೂರು ಫೆರಿ ರಸ್ತೆಯ ನ್ಯೂಚಿತ್ರ ಟಾಕೀಸ್ ಬಳಿಯ ಕೋಮಲ್ಸ್ ಪುಷ್ಪಾಂಜಲಿ ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಯಲ್ಲಿ ಸ್ಥಾಪಿಸಿದ “ಗೇಮ್ ಗ್ರಿಡ್” ಮತ್ತು “ಕೆಲಿಝಿಯಮ್ ಫಿಟ್ನೆಸ್” ಸೆಂಟರ್ ಅನ್ನು ಉದ್ಘಾಟಿಸಿ ಮಾತನಾಡಿದರು.
ಸಂದೀಪ್ ಮತ್ತು ರಾಹುಲ್ ಸೇರಿಕೊಂಡು ಇಬ್ಬರೂ ಮಂಗಳೂರಿನಲ್ಲೇ ಹೊಸ ಮಾದರಿಯ ನಾವೀನ್ಯತೆಯ ಕೆಲಿಝಿಯಂ ಜಿಮ್ ಸೆಂಟರ್ ಸ್ಥಾಪಿಸುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದು, ಸರ್ವರ ಪ್ರೋತ್ಸಾಹ ಅಗತ್ಯ. ಆರೋಗ್ಯವನ್ನು ಕಾಪಾಡುವ ಮೂಲಕ ಸ್ವಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದಾರೆ. ರಾಹುಲ್ ಅವರು ತಮ್ಮ ಕೌಶಲ್ಯವನ್ನು ಸ್ಥಾಪಿಸುತ್ತಾ ಸಂದೀಪ್ ಅವರ ಅನುಭವಗಳನ್ನು ಕ್ರೂಢೀಕರಿಸಿಕೊಂಡು ಸರ್ವರೂ ಸಂತೋಷದಿಂದ ತರಬೇತಿಯನ್ನು ಪಡೆಯುವಂತಹ ವಾತಾವರಣ ಈ ಮೂಲಕ ನಿರ್ಮಾಣಗೊಳ್ಳಲಿ. ಮೊದಲ ಬ್ರಾಂಚ್ ಆರಂಭವನ್ನು ಯಶಸ್ವಿಯಾಗಿ ನಡೆಸುತ್ತಾ ಭವಿಷ್ಯದಲ್ಲಿ ಸರ್ವರೂ ಒಪ್ಪುವಂತಹ ಹಲವು ಬ್ರಾಂಚ್ ಗಳನ್ನು ಸ್ಥಾಪಿಸಿಕೊಂಡು ರಾಜ್ಯ ರಾಷ್ಟ್ರಮಟ್ಟದ ಬ್ರಾಂಡ್ ಆಗಿ ಪರಿವರ್ತನೆಯಾಗಲಿ ಎಂದು ಶುಭಹಾರೈಸಿದರು.
“ಗೇಮ್ ಗ್ರಿಡ್ ಗೆ ಚಾಲನೆ ನೀಡಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಮಂಗಳೂರಿನ್ಲಲೇ ಹೊಸ ಕಾನ್ಸೆಪ್ಟ್ ಉದ್ಘಾಟನೆಯಾಗಿದೆ. ಜನರಿಗೆ ಆರೋಗ್ಯವನ್ನು ಕಾಪಾಡಲೆಂದು ಇರುವ ಹಲವು ವಿಭಿನ್ನ ಪ್ರಯತ್ನಗಳ ನಡುವೆ ಕೆಲಿಝಿಯಂ ಹೊಸ ತರದ ಯೋಜನೆಯನ್ನು ಆರೋಗ್ಯ ಸಂಬಂಧ ಮಂಗಳೂರಿಗೆ ಪರಿಚಯಿಸುತ್ತಿದೆ. ಇರುವ ತೂಕದಲ್ಲೇ ಯಾವ ರೀತಿಯಲ್ಲಿ ದೇಹವನ್ನು ಸೌಂದರ್ಯಯುತವಾಗಿ, ಆರೋಗ್ಯಯುತವಾಗಿ ರೂಪಿಸುವ ತರಬೇತಿಯ ಸೆಂಟರ್ ಇದಾಗಿದೆ. ಶಾಸಕನಾಗಿ ತೀವ್ರ ಒತ್ತಡಗಳಿದ್ದರೂ ಅದರ ನಡುವೆ ನಾನು ಕೂಡಾ ಇದೇ ಜಿಮ್ನೆಷಿಯಂ ನಲ್ಲಿ ತರಬೇತು ಪಡೆಯಲು ಸೇರುತ್ತೇನೆ ಅನ್ನುತ್ತಾ ನೂತನ ಸಂಸ್ಥೆಗೆ ಶುಭಹಾರೈಸಿದರು.
ಹೊಸ ರೀತಿಯ ಮನರಂಜನೆ ಮತ್ತು ಆರೋಗ್ಯ ಸೇವೆಗಳೆರಡನ್ನೂ ಒಂದೇ ಕಟ್ಟಡದಲ್ಲಿ ಪರಿಚಯಿಸುವ ವಿಶೇಷ ಕೇಂದ್ರ “ಗೇಮ್ ಗ್ರಿಡ್” ಮತ್ತು “ಕೆಲಿಝಿಯಮ್ ಫಿಟ್ನೆಸ್” ಸೆಂಟರ್ ಆಗಿದೆ. ಗೇಮ್ ಗ್ರಿಡ್ ಮೂಲಕ ಯುವಜನತೆ ಮತ್ತು ಮಕ್ಕಳಿಗೆ ಆಧುನಿಕ ಗೇಮಿಂಗ್ ಅನುಭವ, ವಿಭಿನ್ನ ಆಟಗಳು, ಡೆಸರ್ಟ್ ಸವಿಯುವ ಅವಕಾಶ ಹಾಗೂ ಕ್ಯಾನ್ವಾಸ್ ಪೇಂಟಿಂಗ್ ಸೃಜನಾತ್ಮಕ ಚಟುವಟಿಕೆಗಳ ಸೌಲಭ್ಯ ಮಕ್ಕಳಿಂದ ವಯಸ್ಕರ ತನಕ ಎಲ್ಲರಿಗೂ ಸೂಕ್ತವಾಗುವ ಜಿಮ್ ಹಾಗೂ ಕ್ಯಾಲಿಸ್ಥೆನಿಕ್ಸ್ ತರಬೇತಿ, ಸಂರಚಿತ ಗುಂಪು ತರಬೇತಿ ಕಾರ್ಯಕ್ರಮಗಳನ್ನು ಸಂಸ್ಥೆಯಲ್ಲಿ ಆರಂಭಿಸಲಾಗಿದೆ.
ಸಂಸ್ಥೆಯ ಪಾಲುದಾರರ ಹೆತ್ತವರು, ಹಿರಿಯರು ದೀಪ ಬೆಳಗಿಸುವ ಮೂಲಕ ಶುಭಹಾರೈಸಿದರು. ಸಂಸ್ಥೆಯ ಪಾಲುದಾರರಾದ ಸಂದೀಪ್ ಪುತ್ರನ್, ರಾಹುಲ್ ಕೋಟ್ಯಾನ್, ಮೇಘನಾ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

