ತೊಕ್ಕೊಟ್ಟು; ತೊಕ್ಕೊಟ್ಟುವಿನಲ್ಲಿ ಆರೀಫ್ ಹತ್ಯೆ ನಡೆಸಿದ ಹಂತಕರ ಇನೋವಾ ಕಾರು ವಿಟ್ಲ ಠಾಣಾ ವ್ಯಾಪ್ತಿಯ ಬುಡೋಳಿಯಲ್ಲಿ ಪತ್ತೆಯಾಗಿತ್ತು. ಮೆಲ್ನೋಟಕ್ಕೆ ಹಂತಕರು ಬೆಂಗಳೂರು ಕಡೆ ತೆರಳಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ನಸುಕಿನ 4.30 ಸುಮಾರಿಗೆ ಕೃತ್ಯ ಎಸಗಿದ ತಂಡ ಬಳಿಕ ಎಸ್ಕೇಪ್ ಆಗಿದೆ. ಹಲವು ತಂಡಗಳ ಮೂಲಕ ಆರೋಪಿಗಳ ಪತ್ತೆಗೆ ಬೆನ್ನು ಬಿದ್ದಿರುವ ಮಂಗಳೂರು ಪೊಲೀಸರು ಆರೋಪಿಗಳ ಸುಳಿವು ಲಭ್ಯವಾಗಿರುವುದಾಗಿಯೂ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.
ಬೌನ್ಸರ್ ಆಗಿಯೂ ತೆರಳುತ್ತಿದ್ದ ಆರೀಫ್
ಬೌನ್ಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ಆರೀಫ್ ದೃಢಕಾಯದ, ಬಲಿಷ್ಠ ಶರೀರ ಹೊಂದಿದ್ದ ಯುವಕರಲ್ಲಿ ಒಬ್ಬನಾಗಿದ್ದ. ನಗರದಲ್ಲಿ ನಡೆಯುತ್ತಿದ್ದ ಅನೇಕ ಸಮಾರಂಭಗಳಲ್ಲಿ ಅವನು ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದನು. ವಿಶೇಷವಾಗಿ ಮಂಗಳೂರು ದಸರಾ, ಹುಲಿ ವೇಷದಂತಹ ಜನಸಂದಣಿ ಹೆಚ್ಚಿರುವ ಕಾರ್ಯಕ್ರಮಗಳಲ್ಲಿ ಅವನ ಹಾಜರಾತಿ ಗಮನಾರ್ಹವಾಗಿತ್ತು.

