ಮಂಗಳೂರು; ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಕಶಾರ್ಪ್ ಫಿಟ್ನೆಸ್ ವತಿಯಿಂದ ರಾಷ್ಟç ಮಟ್ಟದ ಸಿನೀಯರ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಮಾ.24 ರಿಂದ 28ರವರೆಗೆ ನಡೆಯಲಿದೆ ಎಂದು ಚಾಂಪಿಯನ್‌ಶಿಪ್ ನಿರ್ದೇಶಕರಾದ ಸತೀಶ್ ಕುಮಾರ್ ಕುದ್ರೋಳಿ ಹೇಳಿದ್ರು.

ಇವರು ಮಂಗಳೂರಿನಲ್ಲಿ ಮಾತನಾಡಿ ಟಿವಿ ರಮಣ ಪೈ ಸಭಾಂಗಣದಲ್ಲಿ ನಡೆಯಲಿರುವ ಐದು ದಿನಗಳ ಈ ಕ್ರೀಡಾ ಕೂಟದಲ್ಲಿ ವಿವಿಧ ರಾಜ್ಯಗಳ 300ಕ್ಕೂ ಅಧಿಕ ಪುರುಷ ಹಾಗೂ ಮಹಿಳಾ ಪವರ್ ಲಿಫ್ಟರ್‌ಗಳು ಭಾಗವಹಿಸಲಿದ್ದಾರೆ. ಸ್ಪರ್ಧೆಯಲ್ಲಿ ಸ್ಕಾ÷್ವಟ್, ಬೆಂಚ್‌ಪ್ರೆಸ್ ಮತ್ತು ಡೆಡ್‌ಲಿಫ್ಟ್ ವಿಭಾಗಗಳಿದ್ದು, ಮಾ.24 ರಂದು ಬೆಳಗ್ಗೆ 10ಗಂಟೆಗೆ ಉದ್ಘಾಟನೆ ನಡೆಯಲಿದೆ. ಈ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತರು ಲಿಥುವೇನಿಯಾದಲ್ಲಿ ಜೂನ್‌ನಲ್ಲಿ ನಡೆಯಲಿರುವ ವಿಶ್ವ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಲಿದ್ದಾರೆ ಎಂದ್ರು.
ಅಂತರಾಷ್ಟಿçÃಯ ಮಟ್ಟದ ಮಾನದಂಡಗಳಡಿ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ಎಲ್ಲಾ ರೀತಿಯ ಸೌಲಭ್ಯಗಳನ್ನು ಸಂಸ್ಥೆ ವತಿಯಿಂದ ಒದಗಿಸಲಾಗುವುದು ಎಂದು ಕಶಾರ್ಪ್ ಫಿಟ್ನೆಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಪ್ರದೀಪ್ ಕುಮಾರ್ ತಿಳಿಸಿದ್ರು.
ಇನ್ನು ಈ ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿಯ ಉಮೇಶ್ ಗಟ್ಟಿ, ಜಯರಾಂ ಶೆಟ್ಟಿಗಾರ್, ಮಧುಚಂದ್ರ ಎಂ, ಕಶಾರ್ಪ್ ಫಿಟ್ನೆಸ್ ಸಂಸ್ಥೆಯ ನಿರ್ದೇಶಕರಲೊಬ್ಬರಾದ ಡಾ.ಸನಿಲ್ ಉಪಸ್ಥಿತರಿದ್ದರು.


