ಮಂಗಳೂರು: ನೈಋತ್ಯ ರೈಲ್ವೆಯಲ್ಲಿ ಭಾರೀ ಬದಲಾವಣೆಯನ್ನು ಇಲಾಖೆ ತಂದಿದೆ. ತುರ್ತು ಹಳಿ ನಿರ್ವಹಣಾ ಕಾರ್ಯ ನಿಗದಿಯಾಗಿರುವುದರಿಂದ, ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವೆ ಕಾರ್ಯನಿರ್ವಹಿಸುವ ಪ್ರಯಾಣಿಕ ರೈಲು ಸೇವೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ.

ಮಂಗಳೂರು ಸೆಂಟ್ರಲ್ ಮತ್ತು ಸುಬ್ರಹ್ಮಣ್ಯ ಮಾರ್ಗವಾಗಿ ಸಂಚಾರಿಸುವ ಪ್ಯಾಸೆಂಜರ್ ರೈಲುಗಳನ್ನು ಒಟ್ಟು 35 ದಿನಗಳವರೆಗೆ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 56629 (ಮಂಗಳೂರು – ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್) ಮತ್ತು ರೈಲು ಸಂಖ್ಯೆ 56630 (ಸುಬ್ರಹ್ಮಣ್ಯ ರಸ್ತೆ – ಮಂಗಳೂರು ಪ್ಯಾಸೆಂಜರ್) ಮಾರ್ಚ್ 23 ರಿಂದ ಏಪ್ರಿಲ್ 14 ರವರೆಗೆ ಮತ್ತು ಮತ್ತೆ ಜೂನ್ 10 ರಿಂದ ಜೂನ್ 21 ರವರೆಗೆ ರದ್ದು ಮಾಡಲಾಗಿದೆ.
ಪ್ರಿಲ್ ತಿಂಗಳಲ್ಲಿ ಹಲವಾರು ಎಕ್ಸ್ಪ್ರೆಸ್ ರೈಲುಗಳ ಸಮಯದಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ. ಯಶವಂತಪುರ – ಕಾರವಾರ (16515), ಯಶವಂತಪುರ – ಮಂಗಳೂರು (16575), ಮತ್ತು ಯಶವಂತಪುರ – ಮಂಗಳೂರು (16539) ಎಕ್ಸ್ಪ್ರೆಸ್ ರೈಲುಗಳು ಸುಮಾರು 20 ನಿಮಿಷಗಳ ಕಾಲ ವಿಳಂಬವಾಗುತ್ತವೆ. ಮಂಗಳೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು (56229) ಏಪ್ರಿಲ್ 21 ರಿಂದ ಜೂನ್ 9 ರವರೆಗೆ 55 ನಿಮಿಷಗಳ ಕಾಲ ವಿಳಂಬವಾಗಲಿದೆ.
ದಕ್ಷಿಣ ಮಧ್ಯ ರೈಲ್ವೆಯಲ್ಲಿ ರದ್ದತಿ:
ಕರ್ನೂಲ್ – ಕಾಚಿಗೂಡ ಮತ್ತು ರಾಯಚೂರು – ಕಾಚಿಗೂಡ ಮಾರ್ಗಗಳಲ್ಲಿ ಮಾರ್ಚ್ ಮಧ್ಯದಿಂದ ಏಪ್ರಿಲ್ 1 ರವರೆಗೆ ರೈಲು ಮಾರ್ಗಗಳ ದುರಸ್ಥಿ ಇರುವ ಕಾರಣ, ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಸಲಹಾ ಸಮಿತಿಯ ಮಾಜಿ ಸದಸ್ಯ ಡಾ. ಬಾಬುರಾವ್ ಹೇಳಿದ್ದಾರೆ. ಕರ್ನೂಲ್ ನಗರ – ಕಾಚಿಗೂಡ (17436) ಮತ್ತು ಕಾಚಿಗೂಡ – ಕರ್ನೂಲ್ ನಗರ (17435) ಮಾರ್ಚ್ 12 ರಿಂದ ಏಪ್ರಿಲ್ 1 ರವರೆಗೆ ರದ್ದಾಗಿವೆ. ಕಾಚಿಗೂಡ – ರಾಯಚೂರು (67787, 17693) ಮತ್ತು ರಾಯಚೂರು – ಕಾಚಿಗೂಡ (67788, 17694) ಮಾರ್ಚ್ 11 ರಿಂದ ಮಾರ್ಚ್ 31 ರವರೆಗೆ ರದ್ದುಗೊಳಿಸಲಾಗಿದೆ. ಗದ್ವಾಲ್ – ರಾಯಚೂರು (67784) ಮತ್ತು ರಾಯಚೂರು – ಗದ್ವಾಲ್ (67783) ಮಾರ್ಚ್ 11 ರಿಂದ ಮಾರ್ಚ್ 31 ರವರೆಗೆ ರದ್ದಾಗಿದೆ.

