ಮಂಗಳೂರು: ರಕ್ತದ ಕ್ಯಾನ್ಸರಿನಿಂದ ಬಳಲುತ್ತಿರುವ 5ರ ಹರೆಯದ ಶಿವಾಂಶಿಗೆ ವಿಷನ್ ಕುಡ್ಲ ಟ್ರಸ್ಟ್ ಅಧ್ಯಕ್ಷರಾದ ಜಿತೇಂದ್ರ ರಾವ್ ಇವರ ನೇತೃತ್ವದ ತಂಡದಿಂದ ಸಹಾಯಧನ ವನ್ನು ಮಂಗಳೂರಿನ ಜ್ಯೋತಿ ಕೆಎಂಸಿ ಆಸ್ಪತ್ರೆಯಲ್ಲಿ ಹೆತ್ತವರ ಮೂಲಕ ವಿತರಿಸಲಾಯಿತು.

5 ವರ್ಷದ ಬಾಲಕಿ ಶಿವಾಂಶಿ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಸುಮಾರು 25 ಲಕ್ಷ ತಗಲಲಿದೆ. ಸಹೃದಯಿಗಳಿಂದ ಸಹಾಯ ಹಸ್ತವನ್ನು ಕುಟುಂಬ ಯಾಚಿಸಿದ್ದು, ಅದರಂತೆ ಟ್ರಸ್ಟ್ ವತಿಯಿಂದ ಸಹಾಯಧನ ವಿತರಿಸಲಾಗಿದೆ.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಂತೋಷ್ ಕುಮಾರ್, ಕೋಶಾಧಿಕಾರಿ ರಾಮಚಂದ್ರ ಗಟ್ಟಿ, ದೇವಿಪ್ರಸಾದ್ ಶೆಟ್ಟಿ ಹಾಗೂ ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.


