ಅಸೈಗೋಳಿ; ಯಕ್ಷಮಿತ್ರರು ಅಸೈಗೋಳಿ ಸಾದರ ಪಡಿಸಿದ “ಗರುಡೋದ್ಭವ” ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಯಕ್ಷಸೇವೆಯ ರಜತಪರ್ವದಲ್ಲಿ ಮಿಂಚುತ್ತಿರುವ ಮೋಹನ್ ಬೆಳ್ಳಿಪಾಡಿ ಇವರನ್ನು ಬೆಳ್ಳಿಯ ಪದಕದೊಂದಿಗೆ ಮತ್ತು ರಮೇಶ್ ಪಟ್ರಮೆ ಹಾಗೂ ಪಾಕತಜ್ಞ ಹರೀಶ್ ಭಟ್ ಅಸೈಗೋಳಿ ಇವರನ್ನು ಆಯೋಜಕರ ವತಿಯಿಂದ ಗಣ್ಯರ ಉಪಸ್ಥಿತಿಯಲ್ಲಿ ಸಂಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಪಾವಂಜೆ ಮೇಳದ ಸಂಚಾಲಕರು- ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗೌರವಿಸಲಾಯಿತು.


