Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಮಿತ್ತಬಾಗಿಲು ಬಿ.ಕೆ ದೇವರಾಯರಿಗೆ ರೈತಪೀಠ ಪ್ರಶಸ್ತಿ ಘೋಷಣೆ: ರೈತರಿಗಾಗಿ ಪ್ರಶಸ್ತಿ ಸ್ಥಾಪಿಸಿದ ಎಸ್ಕೆಎಫ್ ಎಲಿಕ್ಸರ್ ಸಂಸ್ಥೆಯ ಮುಖ್ಯಸ್ಥರಾದ ಡಾ. ರಾಮಕೃಷ್ಣ ಆಚಾರ್ ಅವರಿಂದ ಮಾದರಿ ನಡೆ

UllalaVaniBy UllalaVaniFebruary 7, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು ಫೆ.07: ದೇಶದ ರೈತರಿಗೆ ಗೌರವ ಸಲ್ಲಬೇಕು, ಕೃಷಿ ಕೆಲಸಕ್ಕೆ ಪ್ರೋತ್ಸಾಹ ದೊರೆಯಬೇಕು ಎಂಬ ಉದ್ದೇಶದಿಂದ ದಕ್ಷಿಣ ಕನ್ನಡದ ರೈತ ಉದ್ಯಮಿ, ಎಸ್ಕೆಎಫ್ ಎಲಿಕ್ಸರ್ ಸಂಸ್ಥೆಯ ಮುಖ್ಯಸ್ಥರಾದ ಡಾ.ರಾಮಕೃಷ್ಣ ಆಚಾರ್ ಅವರು ಒಂದು ಲಕ್ಷ ರೂಪಾಯಿ ಮೊತ್ತದ ವಿನೂತನ ರೈತಪೀಠ ಪ್ರಶಸ್ತಿ ಯನ್ನು ಸ್ಥಾಪಿಸಿದ್ದಾರೆ. ಪ್ರತೀ ವರ್ಷವೂ ರೈತರನ್ನು ಪುರಸ್ಕರಿಸಿ ಗೌರವಿಸುವ ಉದ್ದೇಶದಿಂದ ಸ್ಥಾಪಿಸಲಾದ ಈ ಪ್ರಶಸ್ತಿಗೆ 200ಕ್ಕೂ ಹೆಚ್ಚು ಅಪರೂಪದ ಭತ್ತದ ತಳಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿರುವ ಅಪರೂಪದ ರೈತ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಬಿ.ಕೆ. ದೇವರಾಯ ಮಿತ್ತಬಾಗಿಲು ಅವರು ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಬಹಳಷ್ಟು ಕಡೆಗಳಲ್ಲಿ ಭತ್ತದ ಕೃಷಿ ಕ್ಷೀಣಿಸುತ್ತಿದ್ದರೂ 80ರ ಹರೆಯದ ಬಿ.ಕೆ ದೇವರಾಯರು 200ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಉಳಿಸಿ ಬೆಳೆಸುತ್ತಾ ಬಂದಿದ್ದಾರೆ. ‘ಕಾಲದ ಹೊಡೆತಕ್ಕೆ ಮರೆಯಾಗಿಹೋಗಬಹುದಾಗಿದ್ದ ಅಪರೂಪದ ತಳಿಗಳನ್ನು ಮುಂದಿನ ಪೀಳಿಗೆಗೆ ಉಳಿಸಿರುವುದಲ್ಲದೇ, ಕೃಷಿಯಲ್ಲಿ ಇತರರಿಗೂ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಕೆ. ದೇವರಾಯರಿಗೆ ಮತ್ತು ಅವರ ಶ್ರೇಷ್ಠ ಬದುಕಿಗೆ ಗೌರವ ನೀಡುವ ಸಲುವಾಗಿ ಮೊದಲ ವರ್ಷದ ರೈತಪೀಠ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡುತ್ತಿದ್ದೇವೆ’ ಎಂದು ಡಾ. ರಾಮಕೃಷ್ಣ ಆಚಾರ್ ತಿಳಿಸಿದ್ದಾರೆ.

ಮೂಡಬಿದ್ರಿ ಸಮೀಪದಲ್ಲಿರುವ ಎಸ್ಕೆಎಫ್ ಎಲಿಕ್ಸರ್ ಸಂಸ್ಥೆಯ ಮುಖ್ಯಸ್ಥರಾಗಿ, ಉದ್ಯಮಿಯಾಗಿ ಸಾಕಷ್ಟು ಕೆಲಸ ಮಾಡಿರುವ ಡಾ. ರಾಮಕೃಷ್ಣ ಆಚಾರ್ ಇದೀಗ ಕೃಷಿಗೆ, ರೈತರಿಗೆ ಪ್ರೋತ್ಸಾಹ ನೀಡಲು ಮುಂದಾಗಿರುವುದು ಮಾದರಿ ನಡೆಯಾಗಿದೆ. ಮುಂದಿನ ಪೀಳಿಗೆ ಕೃಷಿಯತ್ತ ಆಕರ್ಷಿತರಾಗುವಂತೆ ಮಾಡುವ, ಮಣ್ಣಿನ ಸಂರಕ್ಷಣೆ ಮಾಡುವ, ಕೃಷಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಡಾ. ರಾಮಕೃಷ್ಣ ಆಚಾರ್ ಅವರ ಈ ನಿಲುವು ಅತ್ಯಂತ ಮಹತ್ವದ್ದಾಗಿದೆ.
ರೈತಪೀಠ ಪ್ರಶಸ್ತಿಯನ್ನು ಫೆ.20ರಂದು ಪಶ್ಚಿಮ ಘಟ್ಟದ ಬುಡದಲ್ಲಿರುವ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಮುನಿಯಾಲಿನಲ್ಲಿರುವ ಗೋ-ಧಾಮ ತೋಟದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸಮಾರಂಭದಲ್ಲಿ ಮಹಾರಾಷ್ಟ್ರ ಕೊಲ್ಹಾಪುರದ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಬೆಳಗಾವಿ ನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಉಪಸ್ಥಿತರಿರುತ್ತಾರೆ. ಇದೇ ಸಂದರ್ಭದಲ್ಲಿ ಗೋ-ಧಾಮದಲ್ಲಿ ಕೃಷಿ ಜಾಗೃತಿ ಮೂಡಿಸುವ ಕೃಷಿ ಮಂಡಲ ಕಾರ್ಯಕ್ರಮ ಮತ್ತು ಏಕಪವಿತ್ರ ಶ್ರೀಮನ್ನಾಗಮಂಡಲ ಕಾರ್ಯಕ್ರಮ ಜರುಗಲಿದೆ.

ಡಾ.ರಾಮಕೃಷ್ಣ ಆಚಾರ್ ಅವರು ತಮ್ಮ ಉದ್ದೇಶದ ಕುರಿತು, ‘ನಮ್ಮ ದೇಶದಲ್ಲಿ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್, ಡಾಕ್ಟರ್, ಉದ್ಯಮಿಗಳಿಗೆ ಸಿಗುವಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಗೌರವ ರೈತನಿಗೂ ಸಲ್ಲಬೇಕು. ಆತನಿಗೆ ಘನತೆಯಿಂದ ಬದುಕುವ ವಾತಾವರಣ ನಿರ್ಮಿಸಬೇಕು. ಜೊತೆಗೆ ಹಲವಾರು ರಾಜ್ಯಗಳಿಗೆ ಹೋಗಿ ರೈತರ ಜೊತೆ ಒಡನಾಡಿದ ಕಾರಣದಿಂದ ತಿಳಿದುಬಂದ ವಿಚಾರವೆಂದರೆ ಮಣ್ಣಿನ ಫಲವತ್ತತೆ ನಿಧಾನಕ್ಕೆ ಕಡಿಮೆಯಾಗುತ್ತಿದೆ. ಮುಂದಿನ ಪೀಳಿಗೆಗೆ ಮಣ್ಣಿನ ಫಲವತ್ತತೆ ಉಳಿಯಬೇಕೆಂದರೆ ಕೃಷಿ ಕೆಲಸ ಉಳಿಯಬೇಕು, ಹೆಚ್ಚಾಗಬೇಕು. ಹಾಗಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡಲು ಮುಂದಾಗಿದ್ದೇನೆ. ಈ ಉದ್ದೇಶದ ಒಂದು ಭಾಗವಾಗಿ ಪ್ರಶಸ್ತಿ ಸ್ಥಾಪನೆಯಾಗಿದೆ. ಇನ್ನುಳಿದಂತೆ ಮುಂದಿನ ಪೀಳಿಗೆಯ ಮಕ್ಕಳಿಗೆ ಕೃಷಿ ಪರಿಚಯಿಸುವ ಸಲುವಾಗಿ ಗೋಧಾಮ ಎಂಬ ಮಾದರಿ ಕೃಷಿ ತೋಟ ನಿರ್ಮಿಸಿದ್ದೇನೆ. ಇದರ ಹೊರತಾಗಿಯೂ ಸಾಕಷ್ಟು ಯೋಜನೆಗಳಿವೆ’ ಎನ್ನುತ್ತಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಅಂಬ್ಲಮೊಗರು ಗ್ರಾ.ಪಂ. ಆಡಳಿತಾವಧಿಯ ಕೊನೆಯ ಗ್ರಾಮಸಭೆ

February 10, 2026

ರಾಮ ಮಂದಿರ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಆರೋಪಿ; ಜೈಲಿನಲ್ಲೇ ಕೊಲೆ

February 10, 2026

ಕಾಸರಗೋಡು: ಜನಪ್ರಿಯ ಸೋಷಿಯಲ್ ಮೀಡಿಯ ಇನ್ಫ್ಲ್ಯುಯೆನ್ಸರ್ ಆದೂರು ಚಿನ್ನು ಪಾಪು ಆತ್ಮಹತ್ಯೆ

February 10, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
ಬೆಳ್ತಂಗಡಿ

ವಿದ್ಯಾರ್ಥಿನಿ ಅಪಹರಣ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​..!

By UllalaVaniFebruary 10, 20260

ಬೆಳ್ತಂಗಡಿ,ಫೆ. 10 :  ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿದ್ಯಾರ್ಥಿನಿ ಅಪಹರಣ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. …

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ದಿಢೀರ್ ಬೆಂಕಿ- ಪ್ರಯಾಣಿಕರು ಅಪಾಯದಿಂದ ಪಾರು..!!

February 10, 2026

ಅಂಬ್ಲಮೊಗರು ಗ್ರಾ.ಪಂ. ಆಡಳಿತಾವಧಿಯ ಕೊನೆಯ ಗ್ರಾಮಸಭೆ

February 10, 2026

ರಾಮ ಮಂದಿರ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಆರೋಪಿ; ಜೈಲಿನಲ್ಲೇ ಕೊಲೆ

February 10, 2026
1 2 3 … 1,799 Next
Automatic YouTube Gallery

ರಸ್ತೆಗಾಗಿ ಕುರ್ನಾಡು ಗ್ರಾಮ ಪಂಚಾಯತ್‌ ಮುಂಭಾಗ ಪ್ರತಿಭಟನೆ; ಕಣ್ಣೀರಿಟ್ಟ ಮಹಿಳೆ

ರಸ್ತೆಗಾಗಿ ಕುರ್ನಾಡು ಗ್ರಾಮ ಪಂಚಾಯತ್‌ ಮುಂಭಾಗ ಪ್ರತಿಭಟನೆ; ಕಣ್ಣೀರಿಟ್ಟ ಮಹಿಳೆ

#ullalavani #Kurnadu #Road #GramaPanchayath
ರಸ್ತೆಗಾಗಿ ಕುರ್ನಾಡು ಗ್ರಾಮ ಪಂಚಾಯತ್‌ ಮುಂಭಾಗ ಪ್ರತಿಭಟನೆ; ಕಣ್ಣೀರಿಟ್ಟ ಮಹಿಳೆ
Now Playing
ರಸ್ತೆಗಾಗಿ ಕುರ್ನಾಡು ಗ್ರಾಮ ಪಂಚಾಯತ್‌ ಮುಂಭಾಗ ಪ್ರತಿಭಟನೆ; ಕಣ್ಣೀರಿಟ್ಟ ಮಹಿಳೆ
ರಸ್ತೆಗಾಗಿ ಕುರ್ನಾಡು ಗ್ರಾಮ ಪಂಚಾಯತ್‌ ಮುಂಭಾಗ ಪ್ರತಿಭಟನೆ; ಕಣ್ಣೀರಿಟ್ಟ ಮಹಿಳೆ ...
ರಸ್ತೆಗಾಗಿ ಕುರ್ನಾಡು ಗ್ರಾಮ ಪಂಚಾಯತ್‌ ಮುಂಭಾಗ ಪ್ರತಿಭಟನೆ; ಕಣ್ಣೀರಿಟ್ಟ ಮಹಿಳೆ

#ullalavani #Kurnadu #Road #GramaPanchayath
ಗ್ರಾಮಸೌಧ ಕೇವಲ ಕಟ್ಟಡವಲ್ಲ, ಗ್ರಾಮದ ಹೃದಯ ಎಂದ ಸ್ಪೀಕರ್ ಯು.ಟಿ.ಖಾದರ್
Now Playing
ಗ್ರಾಮಸೌಧ ಕೇವಲ ಕಟ್ಟಡವಲ್ಲ, ಗ್ರಾಮದ ಹೃದಯ ಎಂದ ಸ್ಪೀಕರ್ ಯು.ಟಿ.ಖಾದರ್
ಪಾವೂರು ಗ್ರಾ.ಪಂ.ನವೀಕೃತ ಕಟ್ಟಡ 'ಗ್ರಾಮ ಸೌಧ' ಲೋಕಾರ್ಪಣೆ;ಉದ್ಘಾಟನೆಗೊಳಿಸಿದ ...
ಪಾವೂರು ಗ್ರಾ.ಪಂ.ನವೀಕೃತ ಕಟ್ಟಡ 'ಗ್ರಾಮ ಸೌಧ' ಲೋಕಾರ್ಪಣೆ;ಉದ್ಘಾಟನೆಗೊಳಿಸಿದ ಸ್ಪೀಕರ್ ಯು.ಟಿ.ಖಾದರ್

ಒಗ್ಗಟ್ಟಿನಿಂದ ಗ್ರಾಮದ ಗೌರವ ವೃದ್ಧಿ; ಸ್ಪೀಕರ್

#Ullalavani #News #package #Pavooru #Speaker #UtKhader #Gramapanchayat
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d