ಉಳ್ಳಾಲ ನಗರ ಸಭೆ ವತಿಯಿಂದ ಶೇ.24.10 ಅಮೃತನಗರೋತ್ಥಾನ ಉಳ್ಳಾಲ ನಗರ ಸಭಾ ನಿಧಿ, ಎಸ್.ಎಫ್,ಸಿ ನಿಧಿಯಡಿ ಫಲಾನುಭವಿಗಳಿಗೆ ಹೊಸಮನೆ ನಿರ್ಮಾಣ, ಮನೆ ದುರಸ್ತಿ, ಶೌಚಾಲಯ ರಚನೆ, ಸ್ವ-ಉದ್ಯೋಗದ ಫಲಾನುಭವಿಗಳಿಗೆ ಮಂಜೂರಾದ ಆದೇಶ ಪತ್ರ ಕಾಮಗಾರಿ ಆದೇಶ ಪತ್ರ ವಿತರಣೆ, ಶೇ.5ರ ಯೋಜನೆಯಡಿ ಫಲಾನುಭವಿಗಳಿಗೆ ಮನೆ ದುರಸ್ತಿಗೆ ಮಂಜೂರಾತಿ ಪತ್ರ ವಿತರಣೆ ಮತ್ತು ಉಳ್ಳಾಲ ನಗರ ಸಭೆಯ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಉಳ್ಳಾಲ ನಗರ ಸಭಾ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಕರ್ನಾಟಕ ರಾಜ್ಯ ವಿಧಾನ ಸಭಾ ಸಭಾಧ್ಯಕ್ಷರಾದ ಯು.ಟಿ ಖಾದರ್ ಒಟ್ಟು 78 ಫಲಾನುಭವಿಗಳಿಗೆ 62,07000 ಸಹಾಯ ಧನವನ್ನು ವಿತರಿಸಿದರು ಹಾಗೂ ಉಳ್ಳಾಲ ನಗರ ಸಭೆಯ ಪೌರಕಾರ್ಮಿಕರನ್ನು ಸನ್ಮಾನಿಸಿದರು ಬಳಿಕ ಮಾತನಾಡಿದ ಅವರು ಕಳೆದ 5 ವರ್ಷದಲ್ಲಿ ತಮ್ಮ ಅಧಿಕಾರದ ಅವಧಿಯಲ್ಲಿ ಉಳ್ಳಾಲ ನಗರ ಸಭೆ ದ.ಕ ಕನ್ನಡ ಜಿಲ್ಲೆಯಲ್ಲಿ ಅತ್ಯತ್ತಮವಾದ ನಗರ ಸಭೆಯೆಂಬ ಗೌರವ ಪಡೆದಿದೆ.

ಅಧಿಕಾರಿಗಳು, ಸಿಬ್ಬಂಧಿಗಳು ಮತ್ತು ಪೌರಕಾರ್ಮಿಕರು ಇದಕ್ಕೆ ಕಾರಣರಾಗಿದ್ದಾರೆ, ತಳಮಟ್ಟದಲ್ಲಿ ಸಮರ್ಪಕವಾಗಿ ಕೆಲಸ ಕಾರ್ಯವನ್ನು ಮಾಡುವವರು ಪೌರಕಾರ್ಮಿಕರಾಗಿದ್ದಾರೆ, ಆದ್ದರಿಂದ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅತ್ಯತ್ತಮ ಸ್ಥಾನಕ್ಕೆ ಹೋಗುವಂತಹ ಕನಸನ್ನು ನೀವು ಕಾಣಬೇಕು ಎಂದರು.

ಈ ಸಂದರ್ಭದಲ್ಲಿ ಉಳ್ಳಾಲ ನಗರ ಸಭೆಯ ನಿಕಟಪೂರ್ವ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಗರ ಸಭೆಯ ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು, ಫಲಾನುಭವಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು.
ಉಳ್ಳಾಲ ನಗರ ಸಭೆಯ ಪೌರಾಯುಕ್ತ ಸಂತೋಷ್ ಎಸ್.ಡಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ಕಂದಾಯ ಅಧಿಕಾರಿ ನವೀನ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.




