Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಸೌಹಾರ್ದಕ್ಕೆ ಸಾಕ್ಷಿಯಾದ ಪಿಲಾರು ನಾಗಬ್ರಹ್ಮ ಕ್ಷೇತ್ರ ವಾರ್ಷಿಕೋತ್ಸವ

UllalaVaniBy UllalaVaniFebruary 3, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಪಿಲಾರು: ಭಾರತೀಯ ಪರಂಪರೆಯ ಉಸಿರು ಭಕ್ತಿ. ಸರ್ವಧರ್ಮದವರು ಅವರವರ ಭಕ್ತಿಯನ್ನು ಆಚರಣೆ ಮಾಡುತ್ತಾರೆ. ದೇಶವೇ ಭಕ್ತಿ ಮೇಲೆ ನಿಂತಿದೆ. ಭಗವಂತನ ಇಚ್ಛೆ ಇಲ್ಲದಿದ್ದರೆ ಹುಲ್ಲು ಕಡ್ಡಿಯೂ ಅಲುಗಾಡದು ಎಂದು ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಾದ ಗೋಪಾಲಕೃಷ್ಣ ಅಸ್ರಣ್ಣರು ಹೇಳಿದರು.

ಇವರು ಶ್ರೀ ನಾಗಬ್ರಹ್ಮ ಕ್ಷೇತ್ರ ಪಿಲಾರು ಲಕ್ಷಿö್ಮÃ ಗುಡ್ಡೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ಕೀರ್ತಿಶೇಷ ಬ್ರಹ್ಮಶ್ರೀ ವೇದಮೂರ್ತಿ ಬಿ.ಕೇಶವ ಜೋಗಿತ್ತಾಯ ಬಂಗಳಾಯಿ ಆಶೀರ್ವಾದಗಳೊಂದಿಗೆ ನಡೆದ 17ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಈ ಮಣ್ಣಿನಲ್ಲಿ ಸರ್ವಧರ್ಮದ ಐಕ್ಯಮತಿಯನ್ನು ದೇವರಿಗೆ ಕಾಣುವ ಇಚ್ಛೆಯಿಂದ ಈ ಜಾಗ ಅಬ್ದುಲ್ ಕುಂಞ್ ಅವರ ಕೈ ಸೇರಿದೆ. ಆ ಮೂಲಕ ನಾವೆಲ್ಲರೂ ಒಂದಾಗಿ ಪುಣ್ಯಕಾಯಕದಲ್ಲಿ ತೊಡಗಿಸಿಕೊಳ್ಳುವಂತೆ ಆಯಿತು. ಮುಂದೆ ನಡೆಯುವ ಪ್ರತೀ ವರ್ಧಂತ್ಯೋತ್ಸವದಲ್ಲಿ ಒಂದು ಗಿಡವನ್ನು ನೆಡುವಂತಹ ಕಾರ್ಯಕ್ರಮ ನಡೆಯಲಿ ಎಂದು ನುಡಿದರು.

ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂ| ಫಾ.ಡೋನಾಲ್ಡ್ ನಿಲೇಶ್ ಕ್ರಾಸ್ತಾ ಮಾತನಾಡಿ, ಇದೊಂದು ಸೌಹಾರ್ದಮಯ ಕಾರ್ಯಕ್ರವಾಗಿದೆ. ನಾವೆಲ್ಲರೂ ಕಾರ್ಯಕ್ರಮದಲ್ಲಿ ಮಾನವೀಯತೆಯ ಏಕತೆಯಿಂದ ಪಾಲ್ಗೊಂಡಿದ್ದೇವೆ. ಧರ್ಮಗಳು ಮಾನವೀಯತೆ ಬೆಳೆಸಲು ಬಂದಿದೆಯೇ ಹೊರತೂ ವಿಭಜಿಸಲು ಅಲ್ಲ. ಸರ್ವಧರ್ಮವೂ ಪ್ರೀತಿಸು, ದ್ವೇಷ ಬಿಡು ಎಂಬುವುದನ್ನು ಹೇಳುತ್ತದೆ. ಬಿದ್ದವರನ್ನು ಮೇಲಕ್ಕೆತ್ತುವುದು ನಿಜವಾದ ಧರ್ಮ. ಇಂತಹ ಕಾರ್ಯಕ್ರಮದಲ್ಲಿ ನಾವು ಸಂದೇಶವನ್ನು ಸಾರಬೇಕಾಗುತ್ತದೆ. ಭೂಮಿಯಲ್ಲಿ ಪ್ರೀತಿ ಗೆಲ್ಲಬೇಕು, ದ್ವೇಷ ಸೋಲಬೇಕು. ಶಾಂತಿ ಗೆಲ್ಲಬೇಕು, ಹಿಂಸೆ ಸೋಲಬೇಕು. ಮಕ್ಕಳಿಗೆ ಭಯದ ಸಮಾಜವಲ್ಲ ಭರವಸೆಯ ಸಮಾಜವನ್ನು ಸೃಷ್ಠಿಸಬೇಕು. ಧರ್ಮ ಯಾವತ್ತೂ ಸಾಯಲು ಹೇಳುವುದಿಲ್ಲ. ಒಗ್ಗಟ್ಟಿನಿಂದ ಬದುಕಿ ಎಂದು ಹೇಳುತ್ತದೆ. ಮನುಷ್ಯತ್ವ ನಿಜವಾದ ಧರ್ಮ. ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಮೂರು ಧರ್ಮಗಳು ಸಾರುವುದು ಒಂದೇ ಅದು ಬೆಳಕು. ಅಂತಹ ಬೆಳಕನ್ನು ನಾವೆಲ್ಲರೂ ಪ್ರಪಂಚಕ್ಕೆ ನೀಡೋಣ ಆ ಮೂಲಕ ಸಾಮರಸ್ಯದ ಬದುಕನ್ನು ಕಟ್ಟೋಣ ಎಂದು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಬುದ್ದಿವಂತರ ಜಿಲ್ಲೆ ಅನ್ನುವ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ನಾವುಗಳು ಶಾಂತಿಯಿAದ ಇರಲು ಇಬ್ಬರು ಪೊಲೀಸ್ ಅಧಿಕಾರಿಗಳು ಕಾರಣಕರ್ತರು. ತುಳುನಾಡಿನ ದೈವವು ಸೌಹಾರ್ದಮಯ ಜೀವನ ನಡೆಸಿ ಎಂಬುವುದನ್ನು ಸಾರುತ್ತದೆ. ಕೇವಲ ವೇದಿಕೆಯಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದ ಇದ್ದರೆ ಸಾಲದು. ಅದನ್ನು ಪೋಷಕರು ಅಳವಡಿಸಿಕೊಳ್ಳುವ ಜೊತೆಗೆ ಮಕ್ಕಳಿಗೂ ಕಲಿಸಿಕೊಡುವಂತಾಗಬೇಕು. ತುಳುನಾಡಿನ ಪಾರಂಪರಿಕತೆಯನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಬದುಕಿ ಬಾಳಬೇಕು ಎಂಬ ಸಂದೇಶವನ್ನು ಸಾರಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯೇನಪೋಯ ಆಸ್ಪತ್ರೆಯ ಡಾ.ಪುನೀತ್ ಅವರು, ಮಂಗಳೂರಿಗೆ ಬಂದು 3ವರ್ಷ ಕಳೆದಿದೆ. ಇಲ್ಲಿನ ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ಆದ ಕಾರಣ ಗಿಡವನ್ನು ನೆಟ್ಟು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ. ವಾತವಾರಣವನ್ನು ಸರಿಪಡಿಸಿಕೊಳ್ಳುವುದರ ಜೊತೆಗೆ ಮಾನವೀಯತೆಯನ್ನು ಬೆಳೆಸಿಕೊಳ್ಳುವುದು ಮುಖ್ಯ. ಭಗವಂತ ಪ್ರತೀ ಅಣುಅಣುವಿನಲ್ಲೂ ನೆಲೆಸಿರುತ್ತಾನೆ. ಆಗಿರುವಾಗ ಸರ್ವಧರ್ಮದವರಲ್ಲೂ ಆರೋಗ್ಯಯುತ ಸ್ನೇಹ ಬೆಳೆಸುವ ಮೂಲಕ ಸೌಹಾರ್ದತೆಯನ್ನು ಬೆಳೆಸಿಕೊಳ್ಳಬೇಕು. ದ್ವೇಷವನ್ನು ಬಿಟ್ಟರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.

ಸೇವಾ ಸಮಿತಿಯ ಕಾರ್ಯಾಧ್ಯಕ್ಷರಾದ ಸಂಜೀವ ಪಿಲಾರ್ ಪ್ರಾಸ್ತಾವಿಕವಾಗಿ ಮಾತನಾಡಿ, 17ವರ್ಷದ ಹಿಂದೆ ಈ ಜಾಗವನ್ನು ಹಾಜಿ ಯೆನೆಪೋಯ ಅಬ್ದುಲ್ ಕುಂಞ ಅವರು ಖರೀದಿಸಿ, ಜೆಸಿಬಿ ಮೂಲಕ ಗುಡ್ಡ ಪ್ರದೇಶವನ್ನು ಸಮತಟ್ಟುಗೊಳಿಸಲಾಗಿತ್ತು. ಆ ಕಾಲದಲ್ಲಿ ನಾಗರಹಾವುಗಳು ಜೆಸಿಬಿಯಲ್ಲಿ ಕಂಡು ಬಂದ ಹಿನ್ನಲೆ ಇಲ್ಲಿ ನಾಗಬ್ರಹ್ಮನ ಕ್ಷೇತ್ರದ ವಿಚಾರ ಬಯಲಿಗೆ ಬಂತು. ನಾಗನ ಆರಾಧನೆಗಾಗಿ ದೊಡ್ಡ ಮಟ್ಟದ ಮೊತ್ತದಲ್ಲಿ ಖರೀದಿಸಿದ ಜಾಗವನ್ನು ಕುಂಞ್ ಅವರು ಬಿಟ್ಟುಕೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷರಾದ ಸವಿತಾ ವೇಣುಗೋಪಾಲ್, ಕಾರ್ಯದರ್ಶಿ ಅರುಣ ದೇವರಾಜ್, ಕೋಶಾಧಿಕಾರಿ ಮಮತಾ ಉಪೇಂದ್ರ ದಾಸ್, ಸೇವಾ ಸಮಿತಿಯ ಅಧ್ಯಕ್ಷರಾದ ಈಶ್ವರ್ ಶೆಟ್ಟಿ, ಕಾರ್ಯದರ್ಶಿಯಾದ ಚಂದ್ರಹಾಸ್, ಕೋಶಾಧಿಕಾರಿಯಾದ ಲೋಕೇಶ್ ಶೆಟ್ಟಿ ಪಿಲಾರ್, ಸಮಿತಿ ಸರ್ವಸದಸ್ಯರು ಹಾಗು ಊರಿನವರು ಉಪಸ್ಥಿತರಿದ್ದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

ಇಬ್ಬರು ಸಾಧಕರಿಗೆ ಸನ್ಮಾನ

ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರವೀಣ್ ಶೆಟ್ಟಿ ಮೇಗಿನಮನೆ ಅವರ ಪರವಾಗಿ ತಾಯಿ ಮೀನಾಕ್ಷಿ ಶೆಟ್ಟಿ ಮೇಗಿನಮನೆಯವರನ್ನು ಹಾಗು ಕ್ರೀಡಾ ಪ್ರತಿಭೆ ವಾಲಿಬಾಲ್ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಿಶಾಂತ್ ಪಿಲಾರ್ ಲಕ್ಷಿö್ಮÃಗುಡ್ಡೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026

ಫೆ, 8.ಹಿದಾಯತ್ ನಗರ ಹುಸೈನಿಯಾ ದರ್ಸ್ ವಾರ್ಷಿಕ ಮಹ್ಳರತುಲ್ ಬದ್ರಿಯಾ

February 4, 2026

ಪಟ್ಲ ಫೌಂಡೇಶನ್ ಟ್ರಸ್ಟ್: ಕೇಂದ್ರೀಯ ಮಹಿಳಾ ಘಟಕದ ವಾರ್ಷಿಕೋತ್ಸವ

February 4, 2026

Comments are closed.

Advertise
ಸಂಪರ್ಕಿಸಿ

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025

ಕ್ಯಾನ್ಸರ್ ಹಾಗೂ ಸ್ತ್ರೀ ರೋಗ ಜಾಗ್ರತಿ ಅರಿವು

November 11, 2025
suddi

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

By UllalaVaniFebruary 4, 20260

ದೇರಳಕಟ್ಟೆ : ಧನಾತ್ಮಕ ಚಿಂತನೆಯೊAದಿಗೆ ಕೆನರಾ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನನಗೆ ಅಪಾರ ಸಂತೋಷ ಮತ್ತು ಗೌರವದ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಫೆ, 8.ಹಿದಾಯತ್ ನಗರ ಹುಸೈನಿಯಾ ದರ್ಸ್ ವಾರ್ಷಿಕ ಮಹ್ಳರತುಲ್ ಬದ್ರಿಯಾ

February 4, 2026

ಪಟ್ಲ ಫೌಂಡೇಶನ್ ಟ್ರಸ್ಟ್: ಕೇಂದ್ರೀಯ ಮಹಿಳಾ ಘಟಕದ ವಾರ್ಷಿಕೋತ್ಸವ

February 4, 2026

ನ್ಯಾಯಾಲಯದಿಂದ ತಪ್ಪಿಸಿಕೊಂಡಿದ್ದ ಮುಕ್ಕಚ್ಚೇರಿ ನಿವಾಸಿ 14 ವರ್ಷಗಳ ಬಳಿಕ  ಸೆರೆ

February 4, 2026
1 2 3 … 1,792 Next
Automatic YouTube Gallery

ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ

ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ಕಾರ್ಯಕ್ರಮಕ್ಕೆ ಚಾಲನೆ

ಕಟೀಲು ಕ್ಷೇತ್ರದ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣರಿಂದ ಆಶೀವರ್ಚನ
ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
Now Playing
ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ...
ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ಕಾರ್ಯಕ್ರಮಕ್ಕೆ ಚಾಲನೆ

ಕಟೀಲು ಕ್ಷೇತ್ರದ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣರಿಂದ ಆಶೀವರ್ಚನ
ಮಹಿಷಾಸುರನ್ ಕೆರ್ನಗ ದೇವಿಗ್ ಬೇಜಾರ್..??
Now Playing
ಮಹಿಷಾಸುರನ್ ಕೆರ್ನಗ ದೇವಿಗ್ ಬೇಜಾರ್..??
ಮಹಿಷಾಸುರನ ಜೊತೆ ತಾಯಿ 9 ದಿನ ಯುದ್ಧ ಮಾಡಿದ ಕಾರಣವೇ ರೋಚಕ.. ಸ್ವರ್ಗದತ್ತ ಮಹಿಷಾ ...
ಮಹಿಷಾಸುರನ ಜೊತೆ ತಾಯಿ 9 ದಿನ ಯುದ್ಧ ಮಾಡಿದ ಕಾರಣವೇ ರೋಚಕ..

ಸ್ವರ್ಗದತ್ತ ಮಹಿಷಾ ಹೋಗಲು ಇದೇ ಕಾರಣ; ಕಟೀಲು ಅಸ್ರಣ್ಣರಿಂದ ಅದ್ಭುತ ವಿವರಣೆ
Follow us on Facebook
Recent Editions
JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d