Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಜ.19ರಂದು ಕುಂಜತ್ತೂರಿನಲ್ಲಿ CAPS ಫೌಂಡೇಶನ್ ವತಿಯಿಂದ ಕೃಷ್ಣ SMUK ಸೈನ್ಸ್ ಪಾರ್ಕ್ 4.0 ಉದ್ಘಾಟನೆ

UllalaVaniBy UllalaVaniJanuary 16, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಕ್ಯಾಪ್ಸ್‌ ಫೌಂಡೇಶನ್ ವತಿಯಿಂದ ಕೃಷ್ಣ ಎಸ್‌ಎಂಯುಕೆ ಸೈನ್ಸ್ ಪಾರ್ಕ್ 4.0ರ ಇದರ ಉದ್ಘಾಟನಾ ಸಮಾರಂಭ ಜನವರಿ 19 ರ ಸೋಮವಾರ ಬೆಳಿಗ್ಗೆ 9.30ಕ್ಕೆ ಎಸ್ ಎಂ ವಿ ಕೆ, ಕುಂಜತ್ತೂರು ನಲ್ಲಿ ನಡೆಯಲಿದೆ. ರಾಷ್ಟ್ರ ನಿರ್ಮಾಣದ ದೃಷ್ಟಿಕೋನ ಹೊಂದಿರುವ ಈ ಯೋಜನೆ, ಹೊರಾಂಗಣ ಪ್ರಯೋಗಗಳು ಹಾಗೂ ವೈಜ್ಞಾನಿಕ ಉಪಕರಣಗಳ ಮೂಲಕ ಪ್ರಾಯೋಗಿಕ ಅಧ್ಯಯನಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ ಎಂದು ಕ್ಯಾಪ್ಸ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಸಿಎ ಚಂದ್ರಶೇಖರ ಶೆಟ್ಟಿ ಮುಂಡ್ಕೂರು ತಿಳಿಸಿದ್ದಾರೆ.

ತೊಕ್ಕೊಟ್ಟು ಸೇವಾಸೌಧದಲ್ಲಿನ ಉಳ್ಳಾಲ ತಾಲೂಕು ಪತ್ರಕರ್ತರ ಸಂಘದಲ್ಲಿ ಆಯೋಜಿಸಲಾದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣದ ಗುರಿಯೊಂದಿಗೆ ವಿಜ್ಞಾನವನ್ನು ಆಟದ ಮೂಲಕ ಕಲಿಸುವ ಉದ್ದೇಶದಿಂದ ಕಟೀಲು, ಕೋಟ, ರಾಮಕುಂಜದಲ್ಲಿ ಭಾಗಗಳಲ್ಲಿ ಯಶಸ್ಸಿನ ಕಾರ್ಯಕ್ರಮವನ್ನು ನಡೆಸಿದೆ. 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಿಜ್ಞಾನ ವನ ಸೈನ್ಸ್ ಪಾರ್ಕ್ ಅಪಾರ ಜನಪ್ರತಿಕ್ರಿಯೆ ಪಡೆದುಕೊಂಡಿದೆ. ವಿಜ್ಞಾನವನ್ನು ಮನರಂಜನೆಯೊಂದಿಗೆ ಮಕ್ಕಳಿಗೆ ಪರಿಚಯಿಸುವ ಈ ಪಾರ್ಕ್ ಕಳೆದ ಒಂದೂವರೆ ವರ್ಷಗಳಲ್ಲಿ ಸುಮಾರು 30,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೀಕ್ಷಣೆ ನಡೆಸಿದ್ದಾರೆ. “ಆಟದ ಜೊತೆ ಕಲಿಯುವ ವಿಜ್ಞಾನ” ಎಂಬ ಪರಿಕಲ್ಪನೆಯೊಂದಿಗೆ ಆರಂಭಗೊಂಡ ಈ ವಿಜ್ಞಾನ ವನಕ್ಕೆ ಕಟೀಲಿನಲ್ಲಿಯೇ ಉತ್ತಮ ಸ್ಪಂದನೆ ದೊರೆತಿದ್ದು, ಮಕ್ಕಳಲ್ಲಿ ವಿಜ್ಞಾನ ಪ್ರೀತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದೊಡ್ಡ ವಿಜ್ಞಾನಿಗಳಾಗಬೇಕು ಎಂಬ ಕನಸು ಮಕ್ಕಳಲ್ಲಿ ಮೂಡಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಜನವರಿ 19ರಂದು ಕ್ಯಾಪ್ಸ್ ಫೌಂಡೇಶನ್ ವತಿಯಿಂದ Edu
Utsav ಕಾರ್ಯಕ್ರಮವನ್ನು ವಿಜ್ಞಾನ ವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ 70ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಸಂದರ್ಭ ಮಕ್ಕಳಿಗೆ ಸ್ಟೇಷನರಿ, ಬಟ್ಟೆ ಚೀಲ ಹಾಗೂ ಸ್ಟೀಲ್ ಬಾಟಲ್ ವಿತರಿಸುವ ಮೂಲಕ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸುವ ಅರಿವು ಮೂಡಿಸಲಾಗುವುದು. ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಬಡ ಮಕ್ಕಳ ಶಾಲೆಗಳಿಗಾಗಿ ಬಸ್ ಪ್ರಯಾಣ ವೆಚ್ಚವನ್ನು ಸಹ ಸಂಸ್ಥೆ ಭರಿಸಲಿದೆ. ವಿಜ್ಞಾನ ವನವನ್ನು ಪ್ರತಿವರ್ಷ ನಿರಂತರವಾಗಿ ನಡೆಸುವ ಯೋಜನೆಯೂ ಇದೆ. ವಿಜ್ಞಾನ ಪಾರ್ಕ್ ಉದ್ಘಾಟನೆಯೊಂದಿಗೆ ಸಾರ್ವಜನಿಕರಿಗೆ ವೀಕ್ಷಣೆಯ ಅವಕಾಶ ಕಲ್ಪಿಸಲಾಗಿದೆ. ಕಳೆದ ೨ ವರ್ಷದ ಪ್ರಯತ್ನದಲ್ಲಿ ಕಟೀಲಿನ ಪ್ರಜ್ವಲ್ ನಾಯಕ್ ಎಂಬ ವಿದ್ಯಾರ್ಥಿ 625ರಲ್ಲಿ 622 ಅಂಕ ಗಳಿಸಿ ಸಾಧನೆ ಮಾಡಿದ ಯಶೋಗಾಥೆ ಮಕ್ಕಳಿಗೆ ಪ್ರೇರಣೆಯಾಗಿದೆ. ಹೈಸ್ಕೂಲ್‌ನಿಂದ ಪಿಯುಸಿ ಮಟ್ಟದ ವಿದ್ಯಾರ್ಥಿಗಳಿಗೆ ಇಲ್ಲಿ ಭಾಗವಹಿಸಬಹುದು .
ಇವೆಲ್ಲದರ ಜೊತೆಗೆ ಸಂಸ್ಥೆ ಉತ್ತರ ಕರ್ನಾಟಕ ಭಾಗದಲ್ಲಿ ವನವಾಸಿ ಯೋಜನೆ, ಕೊಂಡೆವೂರು ಮಠದ ವ್ಯಾಪ್ತಿಯಲ್ಲಿ ಸಾಮಾಜಿಕ ಸೇವೆಗಳು, ಬಡವರಿಗೆ ಶೌಚಾಲಯ ನಿರ್ಮಾಣ, ಸಾಮೂಹಿಕ ವಿವಾಹ ಸೇರಿದಂತೆ ಹಲವು ಜನಹಿತ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ನಡೆಸುವ ಯೋಜನೆ ರೂಪಿಸಿಕೊಂಡಿದೆ ಎಂದರು.

ಉದ್ಘಾಟನೆಯ ಅಂಗವಾಗಿ 70ಕ್ಕೂ ಹೆಚ್ಚು ಶಾಲೆಗಳ ಪಾಲ್ಗೊಳ್ಳುವಿಕೆಯೊಂದಿಗೆ “ಎಡು ಉತ್ಸವ” ನಡೆಯಲಿದ್ದು, ವಿದ್ಯಾರ್ಥಿಗಳಲ್ಲಿ ವಿಜ್ಞಾನಾಸಕ್ತಿ ಮತ್ತು ಅನುಭವಾಧಾರಿತ ಕಲಿಕೆಯನ್ನು ಬೆಳೆಸಲಿದೆ.
ಕಾರ್ಯಕ್ರಮವು ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂದೇವೂರು ಮಠ ಅವರ ಆಶೀರ್ವಾದದೊಂದಿಗೆ ನಡೆಯಲಿದ್ದು, ಉದ್ಯಮಿ ಡಾ. ಕನ್ಯಾನ ಸದಾಶಿವ ಶೆಟ್ಟಿ , ಅಖಿಲ ಭಾರತ CAPS ರ್ಯಾಂಕರ್ ಹಾಗೂ ಮಾಜಿ ಅಧ್ಯಕ್ಷರು, MLR, ICAI ಸಿಎ ಪ್ರಸನ್ನ ಶೆಣೈ, ಮುಖ್ಯ ಆತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಹಾಲಿಂಗೇಶ್ವರ ವಿದ್ಯಾನಿಕೇತನ, ಕುಂಜತ್ತೂರು ಇದರ ಅಧ್ಯಕ್ಷ ಸುರೇಶ್ ಶೆಟ್ಟಿ,
ಶ್ರೀ ಮಹಾಲಿಂಗೇಶ್ವರ ವಿದ್ಯಾನಿಕೇತನ ಕುಂಜತ್ತೂರು ಇದರ ಪ್ರಾಂಶುಪಾಲರಾದ ಕುಸುಮಾ,
ಕೋಶಾಧಿಕಾರಿ ದಿನೇಶ್ ಶೆಟ್ಟಿ , ಕ್ಯಾಪ್ಸ್ ಫೌಂಡೇಶನ್ ನ ಸದಸ್ಯೆ
ಪೂರ್ಣಿಮಾ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

By UllalaVaniFebruary 5, 20260

ಉಳ್ಳಾಲ: ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು, ಮಂಜನಾಡಿ ಇದರ ಆಶ್ರಯದಲ್ಲಿ ಹಾಗೂ ಭಾರತ ಸರ್ಕಾರದ ಆಯುಷ್…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026

ಫೆ, 8.ಹಿದಾಯತ್ ನಗರ ಹುಸೈನಿಯಾ ದರ್ಸ್ ವಾರ್ಷಿಕ ಮಹ್ಳರತುಲ್ ಬದ್ರಿಯಾ

February 4, 2026
1 2 3 … 1,793 Next
Automatic YouTube Gallery

ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ

ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ;ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ತೊಕ್ಕೊಟ್ಟುವಿನಲ್ಲಿ ಯೋಗ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ.ಪುನೀತ್ ರಾಘವೇಂದ್ರ ಮಾಹಿತಿ

#ullalavani #news #latestnews #ullala #yenapoya #prsmt
ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ
Now Playing
ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ
ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ...
ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ;ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ತೊಕ್ಕೊಟ್ಟುವಿನಲ್ಲಿ ಯೋಗ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ.ಪುನೀತ್ ರಾಘವೇಂದ್ರ ಮಾಹಿತಿ

#ullalavani #news #latestnews #ullala #yenapoya #prsmt
||HISTORY|| ಕಾಪಿಕಾಡ್ ಪ್ರದೇಶದಲ್ಲಿ ನೆಲೆ ನಿಂತ ಉಮಾಮಹೇಶ್ವರಿ ದೇವಿ....!
Now Playing
||HISTORY|| ಕಾಪಿಕಾಡ್ ಪ್ರದೇಶದಲ್ಲಿ ನೆಲೆ ನಿಂತ ಉಮಾಮಹೇಶ್ವರಿ ದೇವಿ....!
ನನ್ನ ಮನೆಗೂ ಬಂದಿತ್ತು ನಾಗರಹಾವುಗಳು; ಹೈವೆಯಲ್ಲಿ ನಡೆಯುತ್ತಿತ್ತಂತೆ ಅಪಘಾತಗಳು ...
ನನ್ನ ಮನೆಗೂ ಬಂದಿತ್ತು ನಾಗರಹಾವುಗಳು; ಹೈವೆಯಲ್ಲಿ ನಡೆಯುತ್ತಿತ್ತಂತೆ ಅಪಘಾತಗಳು

ದೇವಳದ ಆಡಳಿತ ಮೋಕ್ತೆಸರರಾದ ಎ.ಜೆ.ಶೇಖರ್ ಹೇಳಿದ್ರೂ ಅಂದಿನ ಕಥನ

#ullalavani #news #tulunad #latestnews #ullala #kapikad #umamaheshwaridevi #history
Follow us on Facebook
Recent Editions
JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d