ಕ್ಯಾಪ್ಸ್ ಫೌಂಡೇಶನ್ ವತಿಯಿಂದ ಕೃಷ್ಣ ಎಸ್‌ಎಂಯುಕೆ ಸೈನ್ಸ್ ಪಾರ್ಕ್ 4.0ರ ಇದರ ಉದ್ಘಾಟನಾ ಸಮಾರಂಭ ಜನವರಿ 19 ರ ಸೋಮವಾರ ಬೆಳಿಗ್ಗೆ 9.30ಕ್ಕೆ ಎಸ್ ಎಂ ವಿ ಕೆ, ಕುಂಜತ್ತೂರು ನಲ್ಲಿ ನಡೆಯಲಿದೆ. ರಾಷ್ಟ್ರ ನಿರ್ಮಾಣದ ದೃಷ್ಟಿಕೋನ ಹೊಂದಿರುವ ಈ ಯೋಜನೆ, ಹೊರಾಂಗಣ ಪ್ರಯೋಗಗಳು ಹಾಗೂ ವೈಜ್ಞಾನಿಕ ಉಪಕರಣಗಳ ಮೂಲಕ ಪ್ರಾಯೋಗಿಕ ಅಧ್ಯಯನಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ ಎಂದು ಕ್ಯಾಪ್ಸ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಸಿಎ ಚಂದ್ರಶೇಖರ ಶೆಟ್ಟಿ ಮುಂಡ್ಕೂರು ತಿಳಿಸಿದ್ದಾರೆ.
ತೊಕ್ಕೊಟ್ಟು ಸೇವಾಸೌಧದಲ್ಲಿನ ಉಳ್ಳಾಲ ತಾಲೂಕು ಪತ್ರಕರ್ತರ ಸಂಘದಲ್ಲಿ ಆಯೋಜಿಸಲಾದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣದ ಗುರಿಯೊಂದಿಗೆ ವಿಜ್ಞಾನವನ್ನು ಆಟದ ಮೂಲಕ ಕಲಿಸುವ ಉದ್ದೇಶದಿಂದ ಕಟೀಲು, ಕೋಟ, ರಾಮಕುಂಜದಲ್ಲಿ ಭಾಗಗಳಲ್ಲಿ ಯಶಸ್ಸಿನ ಕಾರ್ಯಕ್ರಮವನ್ನು ನಡೆಸಿದೆ. 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಿಜ್ಞಾನ ವನ ಸೈನ್ಸ್ ಪಾರ್ಕ್ ಅಪಾರ ಜನಪ್ರತಿಕ್ರಿಯೆ ಪಡೆದುಕೊಂಡಿದೆ. ವಿಜ್ಞಾನವನ್ನು ಮನರಂಜನೆಯೊಂದಿಗೆ ಮಕ್ಕಳಿಗೆ ಪರಿಚಯಿಸುವ ಈ ಪಾರ್ಕ್ ಕಳೆದ ಒಂದೂವರೆ ವರ್ಷಗಳಲ್ಲಿ ಸುಮಾರು 30,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೀಕ್ಷಣೆ ನಡೆಸಿದ್ದಾರೆ. “ಆಟದ ಜೊತೆ ಕಲಿಯುವ ವಿಜ್ಞಾನ” ಎಂಬ ಪರಿಕಲ್ಪನೆಯೊಂದಿಗೆ ಆರಂಭಗೊಂಡ ಈ ವಿಜ್ಞಾನ ವನಕ್ಕೆ ಕಟೀಲಿನಲ್ಲಿಯೇ ಉತ್ತಮ ಸ್ಪಂದನೆ ದೊರೆತಿದ್ದು, ಮಕ್ಕಳಲ್ಲಿ ವಿಜ್ಞಾನ ಪ್ರೀತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದೊಡ್ಡ ವಿಜ್ಞಾನಿಗಳಾಗಬೇಕು ಎಂಬ ಕನಸು ಮಕ್ಕಳಲ್ಲಿ ಮೂಡಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಜನವರಿ 19ರಂದು ಕ್ಯಾಪ್ಸ್ ಫೌಂಡೇಶನ್ ವತಿಯಿಂದ Edu
Utsav ಕಾರ್ಯಕ್ರಮವನ್ನು ವಿಜ್ಞಾನ ವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ 70ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಸಂದರ್ಭ ಮಕ್ಕಳಿಗೆ ಸ್ಟೇಷನರಿ, ಬಟ್ಟೆ ಚೀಲ ಹಾಗೂ ಸ್ಟೀಲ್ ಬಾಟಲ್ ವಿತರಿಸುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ಅರಿವು ಮೂಡಿಸಲಾಗುವುದು. ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಬಡ ಮಕ್ಕಳ ಶಾಲೆಗಳಿಗಾಗಿ ಬಸ್ ಪ್ರಯಾಣ ವೆಚ್ಚವನ್ನು ಸಹ ಸಂಸ್ಥೆ ಭರಿಸಲಿದೆ. ವಿಜ್ಞಾನ ವನವನ್ನು ಪ್ರತಿವರ್ಷ ನಿರಂತರವಾಗಿ ನಡೆಸುವ ಯೋಜನೆಯೂ ಇದೆ. ವಿಜ್ಞಾನ ಪಾರ್ಕ್ ಉದ್ಘಾಟನೆಯೊಂದಿಗೆ ಸಾರ್ವಜನಿಕರಿಗೆ ವೀಕ್ಷಣೆಯ ಅವಕಾಶ ಕಲ್ಪಿಸಲಾಗಿದೆ. ಕಳೆದ ೨ ವರ್ಷದ ಪ್ರಯತ್ನದಲ್ಲಿ ಕಟೀಲಿನ ಪ್ರಜ್ವಲ್ ನಾಯಕ್ ಎಂಬ ವಿದ್ಯಾರ್ಥಿ 625ರಲ್ಲಿ 622 ಅಂಕ ಗಳಿಸಿ ಸಾಧನೆ ಮಾಡಿದ ಯಶೋಗಾಥೆ ಮಕ್ಕಳಿಗೆ ಪ್ರೇರಣೆಯಾಗಿದೆ. ಹೈಸ್ಕೂಲ್‌ನಿಂದ ಪಿಯುಸಿ ಮಟ್ಟದ ವಿದ್ಯಾರ್ಥಿಗಳಿಗೆ ಇಲ್ಲಿ ಭಾಗವಹಿಸಬಹುದು .
ಇವೆಲ್ಲದರ ಜೊತೆಗೆ ಸಂಸ್ಥೆ ಉತ್ತರ ಕರ್ನಾಟಕ ಭಾಗದಲ್ಲಿ ವನವಾಸಿ ಯೋಜನೆ, ಕೊಂಡೆವೂರು ಮಠದ ವ್ಯಾಪ್ತಿಯಲ್ಲಿ ಸಾಮಾಜಿಕ ಸೇವೆಗಳು, ಬಡವರಿಗೆ ಶೌಚಾಲಯ ನಿರ್ಮಾಣ, ಸಾಮೂಹಿಕ ವಿವಾಹ ಸೇರಿದಂತೆ ಹಲವು ಜನಹಿತ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ನಡೆಸುವ ಯೋಜನೆ ರೂಪಿಸಿಕೊಂಡಿದೆ ಎಂದರು.
ಉದ್ಘಾಟನೆಯ ಅಂಗವಾಗಿ 70ಕ್ಕೂ ಹೆಚ್ಚು ಶಾಲೆಗಳ ಪಾಲ್ಗೊಳ್ಳುವಿಕೆಯೊಂದಿಗೆ “ಎಡು ಉತ್ಸವ” ನಡೆಯಲಿದ್ದು, ವಿದ್ಯಾರ್ಥಿಗಳಲ್ಲಿ ವಿಜ್ಞಾನಾಸಕ್ತಿ ಮತ್ತು ಅನುಭವಾಧಾರಿತ ಕಲಿಕೆಯನ್ನು ಬೆಳೆಸಲಿದೆ.
ಕಾರ್ಯಕ್ರಮವು ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂದೇವೂರು ಮಠ ಅವರ ಆಶೀರ್ವಾದದೊಂದಿಗೆ ನಡೆಯಲಿದ್ದು, ಉದ್ಯಮಿ ಡಾ. ಕನ್ಯಾನ ಸದಾಶಿವ ಶೆಟ್ಟಿ , ಅಖಿಲ ಭಾರತ CAPS ರ್ಯಾಂಕರ್ ಹಾಗೂ ಮಾಜಿ ಅಧ್ಯಕ್ಷರು, MLR, ICAI ಸಿಎ ಪ್ರಸನ್ನ ಶೆಣೈ, ಮುಖ್ಯ ಆತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಹಾಲಿಂಗೇಶ್ವರ ವಿದ್ಯಾನಿಕೇತನ, ಕುಂಜತ್ತೂರು ಇದರ ಅಧ್ಯಕ್ಷ ಸುರೇಶ್ ಶೆಟ್ಟಿ,
ಶ್ರೀ ಮಹಾಲಿಂಗೇಶ್ವರ ವಿದ್ಯಾನಿಕೇತನ ಕುಂಜತ್ತೂರು ಇದರ ಪ್ರಾಂಶುಪಾಲರಾದ ಕುಸುಮಾ,
ಕೋಶಾಧಿಕಾರಿ ದಿನೇಶ್ ಶೆಟ್ಟಿ , ಕ್ಯಾಪ್ಸ್ ಫೌಂಡೇಶನ್ ನ ಸದಸ್ಯೆ
ಪೂರ್ಣಿಮಾ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು