ಉಳ್ಳಾಲ: ತೊಕ್ಕೊಟ್ಟು, ಕಾಪಿಕಾಡುವಿನ ಶ್ರೀ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಫೆ.1ರಿಂದ 6ರ ತನಕ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಆ ಪ್ರಯುಕ್ತ ಕ್ಷೇತ್ರದಲ್ಲಿ ಚಪ್ಪರ ಮುಹೂರ್ತದ ಧಾರ್ಮಿಕ ವಿಧಿ ವಿಧಾನಗಳು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ಪರಮೇಶ್ವರ ಜೋಷಿ ನೇತೃತ್ವದಲ್ಲಿ ನಡೆಯಿತು.




ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎ.ಜೆ.ಶೇಖರ್, ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ದಿನೇಶ್, ಕೆ.ಅತ್ತಾವರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಕುಂಪಲ, ಕಾರ್ಯಾಧ್ಯಕ್ಷ ಸುರೇಶ್ ಭಟ್ನಗರ, ಗೌರವ ಸಲಹೆಗಾರ ಕೆ.ಟಿ.ಸುವರ್ಣ, ಉಪಾಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್, ಪ್ರಶಾಂತ್ ಕಾಪಿಕಾಡು, ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಕಾಪಿಕಾಡು, ಕ್ಷೇತ್ರದ ಮೊಕ್ತೇಸರರಾದ ಡಾ.ರಾಮಕೃಷ್ಣ ಶೆಟ್ಟಿ, ರಘುರಾಮ ಶೆಟ್ಟಿ ಕೊಸಪ್ಪ ಗಟ್ಟಿ, ನಿರ್ಮಲಾ ಕುಂಙಬು, ಉಗ್ರಾಣ ಸಮಿತಿ ಅಧ್ಯಕ್ಷ ದಿನೇಶ್ ಕಾಜವ, ಸ್ವಾಗತ ಸಮಿತಿ ಸಂಚಾಲಕ ಪ್ರಶಾಂತ್ ಚೌಟ, ಅಂಕಿತ್ ಉಳ್ಳಾಲ, ಕಮಲಾಕ್ಷ ಪಿಲಾರ್, ಸಭಾ ಕಾರ್ಯಕ್ರಮ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಸ್ವಯಂ ಸೇವಕ ಸಮಿತಿ ಅಧ್ಯಕ್ಷ ಸಂದೀಪ್ ಅಂಬ್ಲಮೊಗರು, ಪ್ರಧಾನ ಸಂಚಾಲಕ ದೀಕ್ಷಿತ್ ನಿಸರ್ಗ, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ರವಿಶಂಕರ್ ಸೋಮೇಶ್ವರ, ಅಲಂಕಾರ ಸಮಿತಿ ಅಧ್ಯಕ್ಷ ಸಂತೋಷ್ ಕಾಪಿಕಾಡ್, ಪ್ರಧಾನ ಸಂಚಾಲಕ ಸುದೇಶ್ ಕಾಪಿಕಾಡ್, ಪ್ರಚಾರ ಸಮಿತಿ ಅಧ್ಯಕ್ಷ ಜಗದೀಶ್ ಆಚಾರ್ಯ, ಅನ್ನಸಂತರ್ಪಣೆ ಸಮಿತಿ ಪ್ರಧಾನ ಸಂಚಾಲಕ ಮೋಹನ್ ದಾಸ್ ಕಾಪಿಕಾಡ್, ಪ್ರಮುಖರಾದ ಉಮೇಶ್ ಗಟ್ಟಿ, ಗೋಪಾಲ ಆಚಾರ್ಯ, ಪ್ರಕಾಶ್ ಕಾಪಿಕಾಡ್, ಸಂಪತ್ ಶೆಟ್ಟಿ, ಉಮಾಮಹೇಶ್ವರಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಮಹಿಳಾ ವಿಭಾಗ ಸಮಿತಿ ಸದಸ್ಯರಾದ ವಿಲಾಸಿನಿ, ಶ್ಯಾಮಲಾ, ಸುನೀತಾ ಬಾಬು, ಪವಿತ್ರಾ ಗಟ್ಟಿ, ರೇವತಿ, ನೂತನ ಪ್ರಕಾಶ್, ಸುಜತಾ ಮೊದಲಾದವರು ಉಪಸ್ಥಿತರಿದ್ದರು.







