ಉಳ್ಳಾಲ:ವೀರರಾಣಿ ಅಬ್ಬಕ್ಕ ಪ್ರಶಸ್ತಿ ಹಾಗೂ ವೀರರಾಣಿ ಅಬ್ಬಕ್ಕ ಪುರಸ್ಕಾರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹೌದು, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ 2026ರ ಫೆಬ್ರವರಿ 14ರಂದು ನಡೆಯಲಿರುವ ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ಓರ್ವ ಮಹಿಳಾ ಸಾಧಕರಿಗೆ ವೀರರಾಣಿ ಅಬ್ಬಕ್ಕ ಪ್ರಶಸ್ತಿ ಮತ್ತು ಓರ್ವ ಮಹಿಳಾ ಸಾಧಕರಿಗೆ ವೀರರಾಣಿ ಅಬ್ಬಕ್ಕ ಪುರಸ್ಕಾರಗಳನ್ನು ನೀಡಲಾಗುತ್ತದೆ.

ತುಳುನಾಡಿನಲ್ಲಿ ಹುಟ್ಟಿ ಸಾಹಿತ್ಯ, ಸಂಸ್ಕೃತಿ ಮತ್ತು ಸಂಶೋಧನಾ ವಿಭಾಗಗಳಲ್ಲಿ ಗಣನೀಯ ಸಾಧನೆ ಮಾಡಿದ ಓರ್ವ ಮಹಿಳೆಗೆ ಈ ಪ್ರಶಸ್ತಿ ಮೀಸಲಾಗಿದೆ. ನಡು, ನುಡಿ ಹಾಗೂ ಪರಂಪರೆಗೆ ನೀಡಿದ ಮಹತ್ವದ ಸೇವೆಯನ್ನು ಗಮನಿಸಿ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ವೀರರಾಣಿ ಅಬ್ಬಕ್ಕ ಪುರಸ್ಕಾರವನ್ನು ತುಳು ಸಂಸ್ಕೃತಿಯ ಹಿನ್ನೆಲೆಯೊಂದಿಗೆ ಕಲೆ, ಕ್ರೀಡೆ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ ಮಹಿಳೆಯೋರ್ವರಿಗೆ ಅಬ್ಬಕ್ಕ ಪುರಸ್ಕಾರ ನೀಡಲು ಉದ್ದೇಶಿಸಲಾಗಿದೆ. ಚಲನಚಿತ್ರ, ನಾಟಕ, ಲಲಿತ ಕಲೆಗಳು, ಕ್ರೀಡಾರಂಗ, ನಾಟಿವೈದ್ಯ, ಜಾನಪದ ಪ್ರಕಾರಗಳಲ್ಲಿರುವ ಪರಿಶ್ರಮಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.
ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ಅರ್ಹತೆ ಹೊಂದಿದವರು ಜನವರಿ ೧೫ರ ಒಳಗೆ ಈ ಕೆಳಗೆ ನೀಡಿರುವಂತಹ ವಿಳಾಸಕ್ಕೆ ಮಾಹಿತಿಯನ್ನು ನೀಡಬಹುದಾಗಿದೆ.
ಸಂಪರ್ಕಿಸಬಹುದಾದ ವಿಳಾಸ; ದಿನಕರ ಉಳ್ಳಾಲ್
ಅಧ್ಯಕ್ಷರು, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ
ಅಪ್ಪಯ್ಯ ಮೆನ್ಷನ್, ಪೆರ್ಮನ್ನೂರು ಅಂಚೆ, ಮಂಗಳೂರು
ಮೊಬೈಲ್ ಸಂಖ್ಯೆ; 9880088333/ 9343343888
ಇ-ಮೇಲ್- deeceecon@yahoo.co.in
ವಿಶೇಷ ಸೂಚನೆ ; ಈ ಹಿಂದೆ ಪ್ರಶಸ್ತಿಗಾಗಿ ವಿವರಗಳನ್ನು ಕಳುಹಿಸಿ ಕೊಟ್ಟವರು ಪುನಃ ಕಳುಹಿಸಿಕೊಡುವ ಅವಶ್ಯಕತೆಯಿರುವುದಿಲ್ಲ


