ಹರೇಕಳ: ಜೀವನದಲ್ಲಿ ಮುಖ್ಯವಾಗಿ ಬೇಕಾದುದು ವಿದ್ಯೆ. ಇದರಿಂದ ಜೀವನದ ಸುಖವನ್ನು ಗಳಿಸಿಕೊಳ್ಳಲು ಸಾಧ್ಯ, ಸುಖದ ಅನುಭವ ಮಕ್ಕಳಿಗೆ ಸಿಗಬೇಕಾದರೆ ಕಷ್ಟದ ಅರಿವೂ ಇರಬೇಕು. ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ವಿಯೆಯ ಬೆಲೆಯನ್ನು ತಿಳಿಸುವ ಜವಬ್ದಾರಿ ಶಿಕ್ಷಕರದ್ದಾಗಿದೆ. ನಾವು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಏರಿದರೂ ನಾವು ಬೆಳೆದು ಬಂದ ದಾರಿ, ಬೇರುಗಳನ್ನು ಮರೆಯದೆ ಮುನ್ನಡೆಯಬೇಕು ಎಂದು ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಧೀಶರಾದ ಡಾ.ಟಿ.ಎನ್.ಇನ್ನವಳ್ಳಿ ಅವರು ಅಭಿಪ್ರಾಯಪಟ್ಟರು.

ಇವರು ಹರೇಕಳ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ, ಪ್ರಾಥಮಿಕ ಶಾಲೆಯ ಪ್ರತಿಭೋತ್ಸವ-೨೦೨೫ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೊಲೀಸ್ ಸ್ಟೇಷನ್, ಕೋರ್ಟ್ ಮೊದಲಾದವುಗಳನ್ನು ನೋಡದೆ ನಾವು ಬೆಳೆಯಬಹುದು. ಆದರೆ ನೀರು, ಆಹಾರ, ರೈತನನ್ನು ನೋಡದೆ ಬೆಳೆಯಲು ಖಂಡಿತಾ ಸಾಧ್ಯವಿಲ್ಲ. ಆದ್ದರಿಂದ ವಿದ್ಯೆಯೊಂದಿಗೆ ಜೀವನ ಸತ್ವವನ್ನು ಮರೆಯಬಾರದು. ಇಂದು ಹತ್ತು ಹನ್ನೆರಡು ವರ್ಷದ ಮಕ್ಕಳು ಆತ್ಮಹತ್ಯೆ ಮಾಡುತ್ತಾ ಇದ್ದಾರೆ. ಇದಕ್ಕೆಲ್ಲ ಎಳವೆಯಲ್ಲಿ ಮಕ್ಕಳಿಗೆ ಜೀವನದ ಶಿಕ್ಷಣ ಸಿಗದಿರುವುದೇ ಮುಖ್ಯ ಕಾರನ. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮಹತ್ತರವಾದುದು ಎಂದರು.
ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ.ಎನ್ ಆಳ್ವ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಕ್ಕಳಿಗೆ ಭಾಷಾ ಜ್ಞಾನ ಮಾತ್ರವಲ್ಲ ಬದುಕಿನ ಜ್ಞಾನವನ್ನು ಬೆಳೆಸಬೇಕು. ಇದರಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು ಎಂದರು
ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಕರಾದ ಗೋಪಾಲಕೃಷ್ಣ ಭಂಡಾರಿ, ಕಾರ್ಯದರ್ಶಿ ರಾಜ್‌ಕುಮಾರ್ ಶೆಟ್ಟಿ, ಕಡೆಂಜ ಸೋಮಶೇಖರ ಚೌಟ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಲತಾ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಮೋಹಿನಿ ಅವರು ಸ್ವಾಗತಿಸಿದರು. ಶಿಕ್ಷಕರಾದ ಕೃಷ್ಣಶಾಸ್ತಿç ಅವರು ವಂದಿಸಿದರು.
ದೈಹಿಕ ಶಿಕ್ಷಕರಾದ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
ಹರೇಕಳ ರಾಮಕೃಷ್ಣ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ನನಗೆ ಮುಂದೆ ಹೈಸ್ಕೂಲ್ ಟೀಚರ್, ಉಪನ್ಯಾಸಕ ಆಗಬೇಕೇಂಬ ಕನಸು ಇತ್ತು. ಇದಕ್ಕಾಗಿ ಪಿಯುಸಿಯಲ್ಲಿ ಕಲಾವಿಭಾಗವನ್ನು ಆಯ್ಕೆ ಮಾಡಿದ್ದೆ.ಬಳಿಕ ತಂದೆಯ ಕನಸಿನಂತೆ ಲಾ ಕಾಲೇಜಿಗೆ ಸೇರಿ ಇದೀಗ ಉಚ್ಛನ್ಯಾಯಾಲಯದ ನ್ಯಾಯಾಧೀಶನಾಗಿದ್ದೇನೆ. ಹಳ್ಳಿಯಿಂದ, ಕನ್ನಡ ಮಾಧ್ಯಮ ಕಲಿತು ಬಂದವರೂ ಶೈಕ್ಷಣಿಕ ಸಾಧನೆಯಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯೆ
ನ್ಯಾ.ಟಿ.ಎನ್.ಇನ್ನವಳ್ಳಿ


