Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ದಾಮೋದರ್ ಆರ್ ಸುವರ್ಣ ಎಜುಕೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಕೀರ್ತಿಶೇಷ ದಾಮೋದರ ಆರ್ ಸುವರ್ಣ ಅವರ 101ನೇ ಜನ್ಮ ಜಯಂತಿ ಸಂಭ್ರಮ, ವಿದ್ಯಾರ್ಥಿ ವೇತನ ವಿತರಣೆ

UllalaVaniBy UllalaVaniDecember 22, 2025No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು : ಸಂಘಟನೆಯನ್ನು ಬಲಪಡಿಸಿ, ಪರಸ್ಪರ ವಿಶ್ವಾಸ ಮತ್ತು ಸಹಕಾರವನ್ನು ಹೆಚ್ಚಿಸಿಕೊಂಡು, ಸಮಾಜದಲ್ಲಿ ದೊರಕುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡು ಶ್ರಮಪಟ್ಟು ದುಡಿದರೆ, ವ್ಯಕ್ತಿಗತ ಬೆಳವಣಿಗೆಯ ಜೊತೆಗೆ ಸಮೂಹದ ಪ್ರಗತಿಗೂ ದಾರಿ ತೆರೆದು, ಸಮಾಜವು ಒಗ್ಗಟ್ಟಿನ ಶಕ್ತಿಯಾಗಿ ಗಟ್ಟಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಭಾನುವಾರ ನಗರದ ಶ್ರೀಗೋಕರ್ಣನಾಥ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ದಾಮೋದರ್ ಆರ್ ಸುವರ್ಣ ಎಜುಕೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಕೀರ್ತಿಶೇಷ ದಾಮೋದರ ಆರ್ ಸುವರ್ಣ ಅವರ 101ನೇ ಜನ್ಮ ಜಯಂತಿ ಸಂಭ್ರಮ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲರಂತೆ ಬದುಕಬೇಕು ಅಂತ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲುತ್ತೇನೆ ಅಂತ ಒಂದು ಕುಟುಂಬ ಯೋಜನೆ ಮಾಡಿದರೆ, ಆ ಕುಟುಂಬ ಬದುಕಲಿಕ್ಕೆ ಪೂರ್ಣ ಅವಕಾಶಗಳಿರುವಂತಹ ವ್ಯವಸ್ಥೆಗಳು ಇವತ್ತು ಸಮಾಜದಲ್ಲಿದೆ. ಅದಕ್ಕೆ ಕೀಳರಿಮೆಯನ್ನು ಬಿಟ್ಟು ಈ ಸಮಾಜದಲ್ಲಿ ನಾನೊಬ್ಬ ಸ್ಪರ್ಧಿ, ಎಲ್ಲರಂತೆ ನಾನು ತಲೆ ಎತ್ತಿ ಬದುಕಬೇಕು ಅಂತ ಯೋಜನೆ ಮಾಡಿದರೆ ಅವನ ಹಂಬಲ ಈಡೇರಲಿಕ್ಕೆ ಪರ್ಯಾಯ ಸರಿಯಾದ ಅವಕಾಶಗಳು ಇವತ್ತು ಸಮಾಜದಲ್ಲಿದೆ ಎಂದರು.


ಈ ಸಂದರ್ಭ ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಈ ಹಿಂದೆ ಹಿಂದೂ ಸಮಾಜದಲ್ಲೂ ಕೂಡ ಸಾಕಷ್ಟು ಸಮಸ್ಯೆಗಳು ವೈರುಧ್ಯಗಳು ಇತ್ತು. ಆದರೆ ಸಮಾಜದೊಳಗೆ ಹುಟ್ಟಿದ ದಾರ್ಶನಿಕರು ಸಮಾಜಕ್ಕೆ ಸರಿಯಾದ ಗುರಿ, ದೆಸೆ ನೀಡುವ ಕಾಯಕವನ್ನು ಮಾಡಿದರು. ವಿಶೇಷವಾಗಿ ದಕ್ಷಿಣ ಕನ್ನಡದ ಹಿಂದೂ ಸಮಾಜ ಎಲ್ಲರನ್ನು ಒಟ್ಟು ಸೇರಿಸಿಕೊಂಡು ಮುಂದೆ ಸಾಗುವ ಗುಣ ಇಡೀ ದೇಶದಲ್ಲಿಯೇ ಭಿನ್ನ ಸ್ಥಾನವನ್ನು ಪಡೆದುಕೊಂಡಿದೆ. ಈಗಲೂ ಸಮಸ್ಯೆ ಇದ್ದಾಗ ಇಲ್ಲಿನ ಹಿಂದೂ ಸಮಾಜ ಒಟ್ಟು ಸೇರಿಸುವ ಶಕ್ತಿಯನ್ನು ಬೆಳೆಸಿಕೊಂಡಿದೆ ಎಂದರು.

ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ , ವಿದ್ಯಾರ್ಥಿಗಳನ್ನು ವಿದ್ಯಾವಂತರಾಗಿ ರೂಪಿಸಿ, ಟ್ರಸ್ಟ್ ಮುಖಾಂತರ ಸಾರ್ಥಕವಾಗಿ ನಡೆಸುತ್ತಿರುವ ಕಾರ್ಯ ನಿಜಕ್ಕೂ ಮಹತ್ತರವಾದದ್ದು. ವಿದ್ಯಾರ್ಥಿ ವೇತನ ನೀಡುವ ಉದ್ದೇಶದಿಂದ 60 ಲಕ್ಷಕ್ಕೂ ಮಿಕ್ಕಿದ ಹಣವನ್ನು ಮೀಸಲಿಟ್ಟು, ಕೀರ್ತಿಶೇಷ ದಾಮೋದರ ಸುವರ್ಣ ಅವರ ಸ್ಮರಣಾರ್ಥವಾಗಿ ಈ ವಿಶೇಷ ಚಿಂತನೆ ಕೈಗೊಳ್ಳಲಾಗಿದೆ. ಸಮಾಜವನ್ನು ಮುಖ್ಯವಾಹಿನಿಗೆ ತರಬೇಕೆಂಬ ದೃಢ ಉದ್ದೇಶದಿಂದ ವಿದ್ಯಾರ್ಥಿಗಳ ಶಿಕ್ಷಣದತ್ತ ಹೆಚ್ಚಿನ ಗಮನ ನೀಡಲಾಗಿದೆ. ತಮ್ಮ ಜೀವನಕ್ಕೆ ಯಶಸ್ಸು ತಂದುಕೊಟ್ಟವರು ಯಾರು ಎಂಬುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಸಹಕಾರ ನೀಡಿದ ಸಂಸ್ಥೆಗಳು ಹಾಗೂ ಹೆತ್ತವರನ್ನು ಸದಾ ಗೌರವದಿಂದ ಸ್ಮರಿಸಬೇಕು. ಋಣವನ್ನು ಮರೆಯದೇ ನೆನಪಿನಲ್ಲಿಟ್ಟರೆ ಸದಾ ಆಶೀರ್ವಾದ ದೊರೆಯುತ್ತದೆ. ವರ್ಷಕ್ಕೆ 5 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಯಿಂದ ಹಿಡಿದು ವೈದ್ಯಕೀಯ ಶಿಕ್ಷಣದವರೆಗೆ ಅಲ್ಪಸಂಖ್ಯಾತ ನಿಗಮದ ಮುಖೇನ ಸರಕಾರದಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಆದರೆ ನಾರಾಯಣ ಗುರು ಅಭಿವೃದ್ಧಿ ನಿಗಮವಾಗಲಿ, ಕುಲಾಲ ನಿಗಮವಾಗಲಿ , ವಿಶ್ವಕರ್ಮ ನಿಗಮಗಳಿಗೆ ಕಳೆದ ಎರಡೂವರೆ ವರ್ಷಗಳಿಂದ ಅನುದಾನವೇ ಬಾರದೇ ಇರುವುದು ಬೇಸರ ತರುತ್ತದೆ. ಈ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತಲೇ ಬಂದಿದ್ದೇನೆ. ವಿದ್ಯಾರ್ಥಿಗಳಿಗೆ ನಿಗಮದಿಂದ ಕೇವಲ ನಿಗಮಗಳನ್ನು ರಚಿಸಿ, ಅಧ್ಯಕ್ಷರನ್ನು ಘೋಷಿಸಿ, ಕಾರು ನೀಡುವುದರಿಂದ ಸಮಾಜ ಅಭಿವೃದ್ಧಿಯಾಗುವುದಿಲ್ಲ ಎಂಬುದನ್ನು ಸರಕಾರ ಅರಿಯಬೇಕಿದೆ ಎಂದರು.

ಅಧ್ಯಕ್ಷರಾದ ನವೀನ್ ಚಂದ್ರ ಡಿ ಸುವರ್ಣ ಅವರು ಮಾತನಾಡಿ, ಕೀರ್ತಿಶೇಷ ದಾಮೋದರ ಆರ್. ಸುವರ್ಣರು ಮಾಡಿದಂತಹ ಸಾಧನೆ ಸಮಾಜದ ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕಾದದ್ದು. ಅಖಿಲ ಭಾರತ ಬಿಲ್ಲವರ ಯೂನಿಯನ್ ಮುಖೇನ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಕಳೆದ ಏಳು ವರ್ಷಗಳಿಂದ ದಾಮೋದರ ಸುವರ್ಣ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಈ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಶೇಕಡಾ 75ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುತ್ತಾರೆ. ಮುಂದಿನ ದಿನಗಳಲ್ಲಿ ರೂ. 1 ಕೋಟಿವರೆಗೆ ವಿದ್ಯಾರ್ಥಿವೇತನ ಮೊತ್ತವನ್ನು ಹೆಚ್ಚಿಸುವ ಚಿಂತನೆ ಮಾಡಲಾಗಿದೆ ಎಂದರು.

ಈ ಸಂದರ್ಭ ದಾಮೋದರ್ ಆರ್ ಸುವರ್ಣ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ನವೀನ್ ಚಂದ್ರ ಡಿ ಸುವರ್ಣ, ಟ್ರಿಸ್ಟಿ ಆಶಾ ಸುವರ್ಣ, ಶಾಸಕ ವೇದವ್ಯಾಸ ಕಾಮತ್, ಸುಮಲತಾ ಸುವರ್ಣ, ವಿನಯಚಂದ್ರ ಸುವರ್ಣ, ಜಗದೀಪ ಸುವರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ದಾಮೋದರ್ ಆರ್ ಸುವರ್ಣ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಮ್ಯಾನೇಜಿಂಗ್ ಟ್ರಸ್ಟಿ ಉದಯಚಂದ್ರ ಡಿ ಸುವರ್ಣ ಸ್ವಾಗತಿಸಿ, ಟ್ರಸ್ಟ್ನ ಮೂಲಕ ನಾನಾ ಸಾಮಾಜಿಕ ಸೇವೆಗಳನ್ನು ಮಾಡಲು ಯೋಜನೆ ರೂಪಿಸಲಾಗಿದೆ. ಸುವರ್ಣ ಎಜುಕೇಶನ್ ಲೋನ್ ಮೂಲಕ ಬಡ್ಡಿರಹಿತ ಶಿಕ್ಷಣ ಸಾಲ ನೀಡುವ ಚಿಂತನೆ ಕೂಡ ಮಾಡಲಾಗಿದೆ ಎಂದರು.
ಕೇಶವ ಬಂಗೇರ , ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಸೀತಪ್ಪ ಕೂಡೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮೀನಾ ದಿನೇಶ್ ಪ್ರಾರ್ಥಿಸಿದರು.


Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಹರೇಕಳ: ತಡರಾತ್ರಿ ಕಾಡುಕೋಣ ಪ್ರತ್ಯಕ್ಷ ಸ್ಥಳೀಯರಲ್ಲಿ ಮನೆಮಾಡಿದ ಆತಂಕ

May 1, 2026

ಉಳ್ಳಾಲ ತಾಲೂಕಿನ ಬೆಲ್ಮಾ ಗ್ರಾಮದ ಸರ್ವೇ ನಂ. 54ರಲ್ಲಿ ಅಕ್ರಮ ಮಣ್ಣು ದಂಧೆ: ದೇವರ ಕಲ್ಲು ತೆರವು ಆರೋಪ – PDO, ತಹಶೀಲ್ದಾರ್ ಮೇಲೂ ಸಂಶಯ; ಲೋಕಾಯುಕ್ತ, ಸಿಎಂಗೆ ದೂರು…!!

April 30, 2026

ಅಕ್ರಮ ಮರಳು ಸಾಗಣೆ ವಿರುದ್ಧ ಪೊಲೀಸರ ಕಾರ್ಯಾಚರಣೆ – 13 ಲಾರಿಗಳು ವಶಕ್ಕೆ

April 27, 2026

Comments are closed.

Advertise
ಸಂಪರ್ಕಿಸಿ

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025
suddi

ಬಗಂಬಿಲದಲ್ಲಿ “ವೀರಮ್ಮ ನಿಲಯ” ಗೃಹಪ್ರವೇಶ: ಮೇ 3ರಂದು ಪೂಜೆ ಹಾಗೂ ಸಮಾರಂಭ

By UllalaVaniMay 2, 20260

ಮಂಗಳೂರು ಸಮೀಪದ ಬಗಂಬಿಲ ಅಮೃತನಗರದಲ್ಲಿ ನೂತನವಾಗಿ ನಿರ್ಮಿಸಲಾದ “ವೀರಮ್ಮ ನಿಲಯ” ಮನೆಯ ಗೃಹಪ್ರವೇಶ ಕಾರ್ಯಕ್ರಮವು ಮೇ 3, 2026ರ ಆದಿತ್ಯವಾರ…

ಮಂಗಳೂರು: ವಿಶ್ವ ಕಾರ್ಮಿಕರ ದಿನದ ಅಂಗವಾಗಿ ಪೌರ ಕಾರ್ಮಿಕರಿಗೆ ಕಾಯಕ ಗೌರವ

May 2, 2026

ಕೇರಳದಲ್ಲಿ ಬಿಜೆಪಿ ಡಬಲ್ ಡಿಜಿಟ್ ಗೆಲುವು ಖಚಿತ: ಕೆ. ಸುರೇಂದ್ರನ್ ವಿಶ್ವಾಸ ವ್ಯಕ್ತ

May 2, 2026

ಸಯ್ಯಿದ್ ಮದನಿ ಶರೀಅತ್ ಕಾಲೇಜು ಉದ್ಘಾಟನೆ , ಸನದುದಾನ ಮಹಾ ಸಮ್ಮೇಳನ

May 2, 2026
1 2 3 … 1,893 Next
Automatic YouTube Gallery

|| ULLALA TALUK HIGHLIGHTS || 02.05.2026

|| ULLALA TALUK HIGHLIGHTS || 02.05.2026

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for ...
trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
|| ULLALA TALUK HIGHLIGHTS || 02.05.2026
Now Playing
|| ULLALA TALUK HIGHLIGHTS || 02.05.2026
|| ULLALA TALUK HIGHLIGHTS || 02.05.2026 📍 Ullal | Dakshina Kannada | ...
|| ULLALA TALUK HIGHLIGHTS || 02.05.2026

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for ...
trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮಂಗಳೂರು-ಮುಡಿಪು-ಬಿ.ಸಿ.ರೋಡ್ ಶಾರದಾ ಬಸ್ ದುಸ್ಥಿತಿ ನೋಡಿ ಸ್ವಾಮಿ..?
Now Playing
ಮಂಗಳೂರು-ಮುಡಿಪು-ಬಿ.ಸಿ.ರೋಡ್ ಶಾರದಾ ಬಸ್ ದುಸ್ಥಿತಿ ನೋಡಿ ಸ್ವಾಮಿ..?
ಬಸ್ಸಿನ ಡೈಮಂಡ್ ಪ್ಲೇಟ್ ತುಂಡಾಗಿ ಅಪಾಯದ ಸ್ಥಿತಿ; ಫಿಟ್ನೆಸ್ ನೀಡಿದ ಆರ್‌ಟಿಒ ...
ಬಸ್ಸಿನ ಡೈಮಂಡ್ ಪ್ಲೇಟ್ ತುಂಡಾಗಿ ಅಪಾಯದ ಸ್ಥಿತಿ; ಫಿಟ್ನೆಸ್ ನೀಡಿದ ಆರ್‌ಟಿಒ ವಿರುದ್ಧ ಆಕ್ರೋಶ

ಮಂಗಳೂರು-ಮುಡಿಪು-ಬಿ.ಸಿ.ರೋಡ್ ಶಾರದಾ ಬಸ್ಸಿನ ಅವಸ್ಥೆ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version