ಉಳ್ಳಾಲ: ಬೀರಿ ಜಂಕ್ಷನ್, ಕೊಲ್ಯದಲ್ಲಿ ಶಾಶ್ವತವಾಗಿ ಸಂಚಾರಿ ಪೊಲೀಸ್ ಅಧಿಕಾರಿಯನ್ನು ನೇಮಿಸುವಂತೆ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಸೋಮೇಶ್ವರ ಪುರಸಭೆ ಮತ್ತು ಕೋಟೆಕಾರ್ ಪಟ್ಟಣ ಪಂಚಾಯತ್ ನ ವ್ಯಾಪ್ತಿಯಲ್ಲಿನ 13 ಕ್ಕೂ ಹೆಚ್ಚು ಸಂಘ ಸಂಸ್ಥೆಗಳ 350 ಕ್ಕೂ ಹೆಚ್ಚು ಜನಗಳ ಸಹಿ ಸಂಗ್ರಹಿಸಿ ಮನವಿ ಸಲ್ಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೀರಿಯಲ್ಲಿ ವಾಹನದಟ್ಟಣೆ ಹೆಚ್ಚಿದ್ದು, ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು, ಸಾರ್ವಜನಿಕರಿಗೆ ರಸ್ತೆ ದಾಟುವುದಕ್ಕೂ ಕಷ್ಟಕರವಾಗುತ್ತಿದೆ. ಶಾಲಾ ಕಾಲೇಜುಗಳು, ವಾಣಿಜ್ಯ ಸಂಕೀರ್ಣಗಳು, ಮಳಿಗೆಗಳು, ಬ್ಯಾಂಕ್ ಸೇರಿದಂತೆ ಧಾರ್ಮಿಕ ಕೇಂದ್ರಗಳಿರುವ ಪ್ರದೇಶವಾಗಿರುವ ಬೀರಿಯಲ್ಲಿ ಸಂಚಾರಿ ಪೊಲೀಸ್ ಅಧಿಕಾರಿ ನೇಮಿಸಿದಲ್ಲಿ ಸಾರ್ವಜನಿಕರಿಗೆ ಸಹಕಾರಿಯಾಗಬಹುದು. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರನ್ನು ಕೇಳಿಕೊಂಡರು.
ಈ ಸಂದರ್ಭ ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷರಾದ ರವಿ ಶಂಕರ್ ಸೋಮೇಶ್ವರ, ಕೋಟೆಕಾರ್ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಪ್ರವೀಣ್ ಬಗಂಬಿಲ, ಶ್ರೀ ಗಣೇಶ ಭಜನಾ ಮಂದಿರ ಬೀರಿ ಇದರ ಗೌರವಾಧ್ಯಕ್ಷರಾದ ನಾರಾಯಣ ಕುಂಪಲ, ಕಾರ್ಯದರ್ಶಿ ಆಶಿಕ್ ಗೋಪಾಲಕೃಷ್ಣ, ಸದಸ್ಯರಾದ ಅಶೋಕ್ ಉಚ್ಚಿಲ್, ಲತೀಶ್ ಉಚ್ಚಿಲ್, ಮಿತೇಶ್ ಮಾಡೂರು, ಹರ್ಷಿತ್ ಸೋಮೇಶ್ವರ, ಮಾಜಿ ಯೋಧರಾದ ಸುಧಾಕರ ಕುಂಪಲ ಮತ್ತು ಜಿ ಎಸ್ ಪ್ರಸಾದ್ ಉಪಸ್ಥಿತರಿದ್ದರು.

