Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

“ವೈದ್ಯ ಸಿಂಧೂರ” ಪ್ರಶಸ್ತಿಗೆ ಡಾ.ಎಂ. ಅಣ್ಣಯ್ಯ ಕುಲಾಲ್ ಆಯ್ಕೆ

UllalaVaniBy UllalaVaniDecember 3, 2025No Comments9 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ) ಮಂಗಳೂರು ಇದರ ಸಹಯೋಗದಲ್ಲಿ “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾಯ೯ಕ್ರಮ ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ಜ. 04ರಂದು ನಡೆಯಲಿದೆ.

ಬೆಳಿಗ್ಗೆ 09 ಗಂಟೆಗೆ ಪದಗ್ರಹಣ ನಡೆಯಲಿದ್ದು, ಬಳಿಕ ಮಧ್ಯಾಹ್ನ 12.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನದ ಧಮ೯ದಶಿ೯ ಡಾ. ರವಿ.ಎನ್ ದೀಪ ಪ್ರಜ್ವಲಿಸಿ ಈ ಕಾರ್ಯಕ್ರಮ ಉದ್ಘಾಟಿಸಲಿದ್ದು ಮುಳಿಯ ಶ್ರೀ ವೈಷ್ಣವಿ ಕ್ಷೇತ್ರದ ಶ್ರೀ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ ದಿವ್ಯ ಉಪಸ್ಥಿತಿವಹಿಸಲಿದ್ದಾರೆ. ಶ್ರೀ ಧಾಮ ಮಾಣಿಲ, ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀಶ್ರೀಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಯಧುವೀರ್ ಒಡೆಯರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗದ ಕುಲಾಲ-ಕುಂಬಾರ ಸಮುದಾಯದಲ್ಲಿ ಹುಟ್ಟಿ, ಜಾತ್ಯಾತೀತ, ಧರ್ಮಾತೀತ, ಮಾನವೀಯ ಚಿಂತನೆಗಳಿಂದ, ಮೇಲ್ವರ್ಗ ಕೆಳವರ್ಗ ಎಂಬ ಭೇದ ಇಲ್ಲದೇ ನೊಂದ ಬೆಂದ ಬಡವರ ನಿರ್ಗತಿಕರ ಸೇವೆ ಮಾಡಿ, ವೈದ್ಯರ, ಪ್ರಾಧ್ಯಾಪಕರ, ಶಿಕ್ಷಣ ತಜ್ಞರ, ಸಾಹಿತಿಗಳ, ಚಿಂತಕರ, ಸಂಘಟಕರ, ಸಮಾಜ ವಿಜ್ಞಾನಿಗಳ ಗುಂಪಿನ ಗಟ್ಟಿ ಧ್ವನಿ ಆಗಿ, ಅಶಕ್ತರ ಆಶಾಕಿರಣವಾಗಿ, ಸಮಾಜ ಮುಖೀ ಸೇವೆಗೆ ಪ್ರತಿಷ್ಠಿತ ಡಿ. ದೇವರಾಜ್ ಅರಸು ರಾಜ್ಯ ಪುರಸ್ಕಾರ, ಜೀವಮಾನದ ವೈದ್ಯಕೀಯ ಸೇವೆಗಾಗಿ ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಶಾಖೆಯಿಂದ ಪ್ರತಿಷ್ಠಿತ ಡಾ ಬಿ ಸಿ ರಾಯ್ ಸಮಾಜ ಸೇವಾ ಪುರಸ್ಕಾರ ಪಡೆದು, ಪ್ರಸ್ತುತ ಪ್ರತಿಷ್ಠಿತ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯ ಉಪಾಧ್ಯಕ್ಷರಾಗಿ ಆಯ್ಕೆ ಆಗಿ, ಬಡ ರೋಗಿಗಳಿಗೆ ಉಚಿತ ಸೇವೆ ಸಾಂತ್ವನ ನೀಡುತ್ತಾ,ವೈದ್ಯಕೀಯ ಸೇವೆ ಯ ಜೊತೆ ಆರೋಗ್ಯ ಜಾಗೃತಿ ಹಾಗೂ ಸಂಘಟನೆ ಮಾಡುತ್ತಾ ಕರಾವಳಿ ಮಲೆನಾಡಿನ ಉದ್ದಕ್ಕೂ “ಬಡವರ ವೈದ್ಯ” ಎಂಬ ಖ್ಯಾತಿಯ “ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು “ ಅವರಿಗೆ ಅತಿಥಿ ಗಣ್ಯರ ಸಮ್ಮುಖದಲ್ಲಿ “ ವೈದ್ಯ ಸಿಂಧೂರ” ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೋಟಾ-ತೆಕ್ಕಟ್ಟೆ ಸಮೀಪದ , ಉಳ್ತೂರಿನಲ್ಲಿ ಜನಿಸಿದ, ಅಣ್ಣಯ್ಯ ಕುಲಾಲರು, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ, ಮಂಗಳೂರಿನ ಪ್ರತಿಷ್ಠಿತ KMC ಯಲ್ಲಿ MBBS ಮುಗಿಸಿದರು.ಕಳೆದ 25 ವರ್ಷಗಳಿಂದ, ಬೇಗ ಕೆಲಸಕ್ಕೆ ಹೋಗುವವರಿಗೆ, ಕೂಲಿ ಕಾರ್ಮಿಕರಿಗೆ ಸಹಾಯ ಆಗಲೆಂದು, ಬೆಳಿಗ್ಗೆ 7 ಗಂಟೆಗೆ ಕ್ಲಿನಿಕ್ ನಡೆಯಿಸುತ್ತಿರುವವರು ನಮ್ಮ ಡಾಕ್ಟರ್ ಕುಲಾಲ್ ರವರು. ಬಡತನ ಅನುಭವಿಸಿದವರಿಗೆ ಮತ್ತು ಮಾನವೀಯತೆಯ ಅರಿವಿರುವ ಮಹಾನ್ ವ್ಯಕ್ತಿಗಳಿಂದ ಮಾತ್ರ, ಇಂತಹ ಕೈಂಕರ್ಯ ಸಿಗುತ್ತದೆ.
ಸುಮಾರು 16 ವರ್ಷ ದೇವರಾಜ ಅರಸು ಸರಕಾರಿ ಹಾಸ್ಟೆಲ್ ನಲ್ಲಿ ಓದಿ ವೈದ್ಯರಾದವರು. ಪ್ರಸ್ತುತ ಕರ್ನಾಟಕದ ನಿಯೋಜಿತ ರಾಜ್ಯ ಉಪಾಧ್ಯಕ್ಷರು, ಕುಟುಂಬ ವೈದ್ಯರ ಕರ್ನಾಟಕ ರಾಜ್ಯ ಅಧ್ಯಕ್ಷರು. ಶ್ರೀನಿವಾಸ್ ಯೂನಿವರ್ಸಿಟಿ ಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಬಳಿಕ, ಈಗ 5 ವರ್ಷಗಳಿಂದ ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮಂಗಳೂರಿನ , ಮಂಗಳಾದೇವಿ ಹಾಗು ಪಡೀಲ್ ಪರಿಸರದಲ್ಲಿ ಕಳೆದ 28 ವರ್ಷಗಳಿಂದ “ಕುಲಾಲ್ ಹೆಲ್ತ್ ಕೇರ್ ಸೆಂಟರ್” ಮತ್ತು “ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್” ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.
ತುಳು, ಕನ್ನಡ ಭಾಷೆ, ನಾಡು, ಸಂಸ್ಕೃತಿಯ ಬಗ್ಗೆ ಸದಾ ತುಡಿಯುವ ಡಾಕ್ಟರ್ ಮನಸ್ಸು, ಮತ್ತು ಆ ನೆಲೆಯಲ್ಲಿ ಅವರ ಹೋರಾಟ ಎಂತವರನ್ನೂ ಬೆರಗುಗೊಳಿಸುತ್ತದೆ. ನಮ್ಮ ಸ್ಥಳೀಯ ಭಾಷೆಗಳ ಉಳಿವಿಗಾಗಿ, ಕುಂದಾಪ್ರ ಕನ್ನಡ, ಅರೆಕನ್ನಡ, ತುಳು, ಹವ್ಯಕ, ಬ್ಯಾರಿ ಭಾಷೆಗಳ ಸಮಾನ ಮನಸ್ಕರ ಹೋರಾಟಗಾರರ ವೇದಿಕೆ “ಕನ್ನಡ ಕಟ್ಟೆ”ಗೆ ಇವರದೇ ನೇತೃತ್ವ.

ಸರ್ವಜ್ಞ ವೃತ್ತ ಮಂಗಳೂರು, ರಾಷ್ಟ್ರ ಕವಿ “ಗೋವಿಂದ ಪೈ ವೃತ್ತ”, ಕಯ್ಯಾರ ಕಿಂಜಣ್ಣ ರೈ ವೃತ್ತ, ಅಂಪಣ್ಣ ಕಟ್ಟೆ ಬಜಾಲ್ ಪಡೀಲ್ ರೈಲ್ವೆ ಬ್ರಿಡ್ಜ್ ಎಲ್ಲವೂ ಡಾಕ್ಟರ್ ಕುಲಾಲ್ ರವರ ಸಮಾನ ಮನಸ್ಕ ತಂಡದ ಹೋರಾಟದ ಫಲಶ್ರುತಿ. ಇವೆಲ್ಲವುಗಳ ಸ್ಥಾಪನೆಯ ಹಿಂದಿನ ಹೋರಾಟದ ಶಕ್ತಿ “ಅಣ್ಣಯ್ಯ ಕುಲಾಲ್”. ಕೋವಿಡ್ ಸಂಕಷ್ಟದ ಸಮಯದಲ್ಲಿ ಪ್ರತಿಷ್ಠಿತ IMA ಮಂಗಳೂರು, ಇದರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದ್ದು. , IMA ಕರ್ನಾಟಕ ರಾಜ್ಯದ ಸಕ್ರೀಯ ಸದಸ್ಯರಾಗಿ ಕರಾವಳಿ ಮಲೆನಾಡು ಹಾಗು ಮೈಸೂರು, ಬೆಂಗಳೂರು, ಗುಲ್ಬರ್ಗ ವಿಭಾಗಗಳಲ್ಲಿ ಸಂಘಟನೆಯ ಕಿಚ್ಚು ಹಚ್ಚಿದವರು. ಪ್ರಸ್ತುತ ಬೆಳಗಾವಿ ವಿಭಾಗದ ಬೆಳಗಾವಿ, ಬಾಗಲಕೋಟ, ಬಿಜಾಪುರ, ಹುಬ್ಬಳ್ಳಿ ಧಾರವಾಡ, ಗದಗ, ಹಾವೇರಿ, ಉತ್ತರಕನ್ನಡ ಭಾಗದಲ್ಲಿ ವೈದ್ಯರನ್ನ ಸಂಘಟಿಸಿ ಸಮಾಜಮುಖಿ ಕೆಲಸಕ್ಕೆ ತೊಡಗಿಸಿ ಕೊಳ್ಳಲು ಉಸ್ತುವಾರಿಯನ್ನ ಅಣ್ಣಯ್ಯ ಕುಲಾಲ್ ಅವರಿಗೆ ವಹಿಸಲಾಗಿದೆ.

ಮಂಗಳೂರಲ್ಲಿ ಕನ್ನಡಕಟ್ಟೆ, ನೇತ್ರಾವತಿ ಹೋರಾಟ, ಬೈರಾಡಿ ಕೆರೆ ಹೋರಾಟ, necf, “ಕುಡ್ಲಂಗಿಪ್ಪ ಕುಂದಾಪ್ರ” ಬಳಗದ ಕ್ರಿಯಾ ಶೀಲ ವ್ಯಕ್ತಿ ಹಾಗೂ ಶಕ್ತಿ. ಮಂಗಳೂರಿನ ಕುಂದಗನ್ನಡಿಗರನ್ನು ಒಗ್ಗೂಡಿಸಿ, ಮಂಗಳೂರಲ್ಲಿ ಸೇವೆ, ಸಹಕಾರ, ಸಾಮರಸ್ಯ ಬೆಸೆಯುವ ಕೊಂಡಿಯೇ ನಮ್ಮ ಕುಲಾಲ್ ಡಾಕ್ಟರ್.
ಡಾಕ್ಟರ್ ಸಮುದಾಯದವರ ಬರವಣಿಗೆಗೆ ಪ್ರೋತ್ಸಾಹ ಕೊಡುತ್ತಾ, ಹತ್ತಾರು ಪುಸ್ತಕಗಳ ಪ್ರಕಟಣೆಯ ಹಿಂದಿನ ಕ್ರಿಯಾಶೀಲ ಶಕ್ತಿ ಇವರೇ.ರಾಜ್ಯ ವೈದ್ಯ ಬರಹಗಾರರನ್ನು ಒಗ್ಗೂಡಿಸಿ, ರಾಜ್ಯ ವೈದ್ಯಬರಹಗಾರರ ಬಳಗ ವನ್ನ ಹುಟ್ಟುಹಾಕಿ,ಪ್ರಥಮ ವೈದ್ಯ ಬರಹಗಾರರ ಸಮ್ಮೇಳನವನ್ನ ಮಂಗಳೂರಲ್ಲಿ ಜರುಗಿಸಿದ ಹೆಗ್ಗಳಿಕೆ ಡಾ ಕುಲಾಲ್ ಅವರದ್ದು. ವೈದ್ಯ ಬರಹಗಾರರ ಬಳಗದ ಮೂಲಕ ನೂರಾರು ಪುಸ್ತಕ ಪ್ರಕಟಿಸುತ್ತಿರುವ ಅವರ ಕೆಲಸ ಸ್ತುತ್ಯರ್ಹ. ಇವರ ಸಂಪಾದಕತ್ವ ದಲ್ಲಿ ಹೊರಬಂದ “ಸಿರಿಂಜ್ ಹಿಡಿಯುವ ಕೈ ಪೆನ್ನು ಹಿಡಿದಾಗ” ಎಂಬ ಪುಸ್ತಕ ವೈದ್ಯ ಸಾಹಿತ್ಯ ಲೋಕದಲ್ಲಿ ಸಂಚಲನಮೂಡಿಸಿ, ಹಲವು ಬಾರಿ ಮರು ಮುದ್ರಣ ಕಂಡಿದೆ. ಇವರ ಲೇಖನಗಳು ಕರ್ನಾಟಕದ ಉದ್ದಗಲದಕ್ಕೂ ತಲುಪಿದೆ. ರೇಡಿಯೋ, ದೂರದರ್ಶನಗಳಲ್ಲಿ, ನಾಡು ನುಡಿಯ ಬಗ್ಗೆ ಅವರ ಹೆಮ್ಮೆ ತುಂಬಿದ ಸಾತ್ತ್ವಿಕ ಹೋರಾಟವನ್ನು, ಕನ್ನಡಿಗರು ಗುರುತಿಸಿದ್ದಾರೆ.

ಇವರು ಸ್ಥಾಪಿಸಿದ ಕರ್ನಾಟಕದಲ್ಲಿಯ ಪ್ರಥಮ ಸರ್ವಜ್ಞ ಸೆಕೆಂಡ್ ಅಭಿಪ್ರಾಯ ಸೆಂಟರ್, ರೋಗಿಗಳಿಗೆ ತುಂಬಾ ಉಪಕಾರವಾಗುತ್ತಿದೆ. ತುಳು, ಕನ್ನಡ, ಕೊಂಕಣಿ , ಬ್ಯಾರಿ ಕುಂದಗನ್ನಡಿಗರಿಗೆ, ಅರೆಗನ್ನಡ, ಮಂಗಳೂರಲ್ಲಿ ಸರ್ವ ರೀತಿಯಲ್ಲಿ ಸಹಕಾರಗಳನ್ನು ಕೊಡುತ್ತಾ ಬಂದಿದ್ದಾರೆ.
ಅವರೇ ಹೇಳುವಂತೆ, ಅವರ ತಂದೆಯವರು, ಸಾರಾಯಿ ಅಂಗಡಿಯಲ್ಲಿ ನಡೆಸುತ್ತಿದ್ದ, ಚಕ್ಕುಲಿ ಅಂಗಡಿಯಲ್ಲಿ ಚಕ್ಕುಲಿ ಮಾರಿ, ಕಡು ಬಡತನದಲ್ಲಿ ಬೆಳೆದು , ಆರ್ಥಿಕ ಸಮಸ್ಯೆಗಳಿಂದ ಹಲವಾರು ಬಾರಿ ಶಿಕ್ಷಣ ವನ್ನ ನಿಲ್ಲಿಸುವ ಪರಿಸ್ಥಿತಿ ಬಂದಾಗ ದೃತಿ ಗೆಡದೆ, ಡಾಕ್ಟರ್ ಆದ ಹುಡುಗ, ಇಂದು ತನ್ನ ತನು ಮನಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ.

ಅವರ ನೇತ್ರಾವತಿ ಉಳಿಸಿ ಹೋರಾಟ, ಪರಿಸರ ಹೋರಾಟ, ಕನ್ನಡ ಪ್ರೀತಿ, ಬರಹ ಗಾರ ವೇದಿಕೆ, ಬರವಣಿಗೆ, ಸಮಾಜಮುಖಿ ಚಿಂತನೆ, ಅವರನ್ನು ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯುಕ್ತಗೊಳಿಸಿದೆ.
ಇವರು, ಪ್ರತಿಷ್ಠಿತ “ದೇವರಾಜು ಅರಸು” ಪ್ರಶಸ್ತಿ ಪಡೆದ ಕರಾವಳಿಯ ಏಕಮೇವ ವೈದ್ಯ 2025ರ ಮೇ 4 ರಂದು, ಕೋಟಾದ “ಕಾರಂತ ಥೀಮ್ ಪಾರ್ಕ್” ನಲ್ಲಿ ನಡೆಯುವ, “ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ” ದ ಅಧ್ಯಕ್ಷ ಪಟ್ಟ, ನಮ್ಮೂರ “ಕುಂದಾಪ್ರ ಕನ್ನಡ”ದ ನೈಜ ಪ್ರತಿಭೆ, ಹೋರಾಟಗಾರರಾದ ಡಾಕ್ಟರ್ ಅಣ್ಣಯ್ಯ ಕುಲಾಲ್ ರವರಿಗೆ ಸಿಕ್ಕಿರುವುದು ಹೆಮ್ಮೆ. ಈ ಬಾರಿ ವೈದ್ಯಕೀಯ ಹಾಗು ಸಮಾಜ ಸೇವೆಗೆ ಪ್ರತಿಷ್ಠಿತ ಡಾ ಬಿ ಸಿ ರಾಯ್ ರಾಷ್ಟ್ರೀಯ ಪುರಸ್ಕಾರ ಪಡೆದ ಕರಾವಳಿಯ ಅತಿ ಕಿರಿಯ ವೈದ್ಯ. ಜೊತೆಗೆ ಜಿಲ್ಲಾ ರಾಜ್ಯ ಮಟ್ಟದ ಡಾ ಬಿ ಸಿ ರಾಯ್ ಪುರಸ್ಕಾರ, ಜಿಲ್ಲಾ ರಾಜ್ಯೋತ್ಸವ,ಸಹಿತ ವೈದ್ಯಕೀಯ ಸೇವೆ, ಶಿಕ್ಷಣ, ಸಂಘಟನೆಗೆ ನೂರಾರು ಗೌರವ ಪುರಸ್ಕಾರ ಪಡೆದ ಸಮಾಜ ವಿಜ್ಞಾನಿ.ಮದ್ದಲ್ಲ ಕಷಾಯ, ಮುಗುಳ್ನಕ್ಕು ಮುಂದೆ ಸಾಗು, ಸದ್ದಿಲ್ಲದೇ ಸುದ್ದಿಯಾಗು ಎಂಬ ಬರಹಗಳಿಂದ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಡಾ ಕುಲಾಲ್ ಸಮಾಜಕ್ಕೆ ಒಂದು ಆಸ್ತಿ.

ಇವರಿಗೆ ಈ ಬಾರಿಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಯ ಒಕ್ಕೂಟದ ಕುಂಭ ಕಲಾವಳಿ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ದಲ್ಲಿ “ವೈದ್ಯ ಸಿಂಧೂರ” ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಿದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಹರೇಕಳ: ತಡರಾತ್ರಿ ಕಾಡುಕೋಣ ಪ್ರತ್ಯಕ್ಷ ಸ್ಥಳೀಯರಲ್ಲಿ ಮನೆಮಾಡಿದ ಆತಂಕ

May 1, 2026

ಮಾಲೀಕನ ಮೇಲೆ ಆ್ಯಸಿಡ್ ದಾಳಿ ನಡೆಸಿದ ವ್ಯಕ್ತಿಗೆ 10 ವರ್ಷ ಜೈಲು ಶಿಕ್ಷೆ….!!

May 1, 2026

ಎಸ್ ವೈ ಎಸ್ ಹಿದಾಯತ್ ನಗರ ಶಾಖೆ ನೂತನ ಪಧಾಧಿಕಾರಿಗಳ ಆಯ್ಕೆ

May 1, 2026

Comments are closed.

Advertise
ಸಂಪರ್ಕಿಸಿ

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025
All News

ಹರೇಕಳ: ತಡರಾತ್ರಿ ಕಾಡುಕೋಣ ಪ್ರತ್ಯಕ್ಷ ಸ್ಥಳೀಯರಲ್ಲಿ ಮನೆಮಾಡಿದ ಆತಂಕ

By UllalaVaniMay 1, 20260

ಹರೇಕಳ: ದೊಡ್ಡ ಗಾತ್ರದ ಕಾಡುಕೋಣವೊಂದು ಹರೇಕಳ ಶಾಲೆ ಬಳಿ ತಡರಾತ್ರಿ ವೇಳೆ ಪತ್ತೆಯಾಗಿದ್ದು , ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ .…

ಮಾಲೀಕನ ಮೇಲೆ ಆ್ಯಸಿಡ್ ದಾಳಿ ನಡೆಸಿದ ವ್ಯಕ್ತಿಗೆ 10 ವರ್ಷ ಜೈಲು ಶಿಕ್ಷೆ….!!

May 1, 2026

ಎಸ್ ವೈ ಎಸ್ ಹಿದಾಯತ್ ನಗರ ಶಾಖೆ ನೂತನ ಪಧಾಧಿಕಾರಿಗಳ ಆಯ್ಕೆ

May 1, 2026

ಅತ್ಯಾಚಾರ ಕೇಸಲ್ಲಿ ಅಪ್ರಾಪ್ತೆಯ ಗರ್ಭಪಾತದ ಕಾನೂನು ಬದಲಾಯಿಸಿ- ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

April 30, 2026
1 2 3 … 1,892 Next
Automatic YouTube Gallery

|| ULLALA TALUK HIGHLIGHTS || 01.05.2026

|| ULLALA TALUK HIGHLIGHTS

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted ...
and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More

Now Playing

|| ULLALA TALUK HIGHLIGHTS 📍 Ullal | Dakshina Kannada | Coastal ...

"ಅಕ್ರಮ ಮಣ್ಣು ದಂಧೆಗೆ ಯಾರ ಬೆಂಬಲ..?ಅಧಿಕಾರಿಗಳ ಮೌನದ ಹಿಂದಿನ ಕಾರಣ..?
Now Playing
"ಅಕ್ರಮ ಮಣ್ಣು ದಂಧೆಗೆ ಯಾರ ಬೆಂಬಲ..?ಅಧಿಕಾರಿಗಳ ಮೌನದ ಹಿಂದಿನ ಕಾರಣ..?
ಉಳ್ಳಾಲದ ಬೆಲ್ಮಾ ಗ್ರಾಮದಲ್ಲಿ ಅಕ್ರಮ ಮಣ್ಣು ದಂಧೆ...!;ಸ್ಥಳದಲ್ಲಿದ್ದ ದೈವದ ಕಲ್ಲು ...
ಉಳ್ಳಾಲದ ಬೆಲ್ಮಾ ಗ್ರಾಮದಲ್ಲಿ ಅಕ್ರಮ ಮಣ್ಣು ದಂಧೆ...!;ಸ್ಥಳದಲ್ಲಿದ್ದ ದೈವದ ಕಲ್ಲು ತೆರವು

ಗ್ರಾಮಸ್ಥರ ಅಳಲು; ಅಧಿಕಾರಿಗಳ ಮೌನ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #Belma #Ullala
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version