ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಚೆಂಬುಗುಡ್ಡೆ: ಚೆಂಬುಗುಡ್ಡೆ ಬಳಿ ಸಂತೋಷನಗರ ನಿವಾಸಿ ಲ್ಯಾನ್ಸಿ ಡಿಸೋಜ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಪೊಲೀಸರಿಗೆ ಲಭಿಸಿದ್ದು ತೊಕ್ಕೊಟ್ಟು ನಿವಾಸಿ ರಕ್ಷಿತ್ ಮತ್ತು ತಂಡದಿಂದ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಸ್ನೇಹಿತನ ಸಾವಿಗೆ ಪ್ರತೀಕಾರ
ಮಂಗಳೂರಿನಿಂದ ವೆಲ್ಡಿಂಗ್ ಕೆಲಸ ಮುಗಿಸಿ ಸಂತೋಷನಗರದ ಮನೆಗೆ ತನ್ನ ಆಕ್ಟಿವಾ ಸ್ಕೂಟರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಸ್ವಿಫ್ಟ್ ಕಾರಿನಲ್ಲಿ ಬಂದ ಮೂವರ ತಂಡ ಸ್ಕೂಟರಿಗೆ ಡಿಕ್ಕಿ ಹೊಡೆದು ಬಳಿಕ ತಲವಾರಿನಿಂದ ಯದ್ವಾತದ್ವಾ ಕಡಿದಿದ್ದಾರೆ. ಬಳಿಕ ಕಾರನ್ನು ಬಿಟ್ಟು ಮೂವರು ಆರೋಪಿಗಳು ಪರಾರಿಯಾಗಿದ್ದರು.

2014ರ ಆ.14ರಂದು ಸ್ವಾತಂತ್ರೋತ್ಸವದ ದಿನದ ಪ್ರಯುಕ್ತ ತೊಕ್ಕೊಟ್ಟು ಮಾಯಾ ಬಾರಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಲ್ಯಾನ್ಸಿ ಡಿ’ಸೋಜ ಮತ್ತು ಉದಯ ಎಂಬಾತ ಸೇರಿಕೊಂಡು ಹಿಂ.ಜಾ.ವೇ ಮುಖಂಡ ರಿಕ್ಷಾ ಚಾಲಕ ಸೋಮೇಶ್ವರ ಸಾರಸ್ವತ ಕಾಲನಿ ನಿವಾಸಿ ಯತೀಶ್ ಪೂಜಾರಿ ಹತ್ಯೆ ನಡೆಸಿದ್ದರು.
ಇದೇ ರಕ್ಷಿತ್ ಹಾಗೂ ಕೊಲೆಯಾದ ಯತೀಶ್ ಅವರ ಆಪ್ತಸ್ನೇಹಿತರಾಗಿದ್ದವರು ಹಾಗೂ ಆತನ ಹತ್ಯೆಯ ಪ್ರತೀಕಾರವಾಗಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಪೊಲೀಸರು ರಕ್ಷಿತ್ ಗಾಗಿ ವ್ಯಾಪಾಕ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಔಟ್ ಆಪ್ ಡೇಂಜರ್:
ದುಷ್ಕರ್ಮಿಗಳಿಂದ ಗಂಭೀರ ದಾಳಿಗೊಳಗಾಗಿರುವ ಲ್ಯಾನ್ಸಿ ಡಿ’ಸೋಜ ಸದ್ಯ ಚೇತರಿಸಿಕೊಳ್ಳುತ್ತಿರುವುದಾಗಿ ವೈದ್ಯರ ಮೂಲ ತಿಳಿಸಿವೆ.
ತಲೆಗೆ ೭ ತಲವಾರಿನ ಏಟು ಹಾಗೂ ಕೈಗಳಿಗೆ ಗಂಭೀರ ತರವಾದ ತಲವಾರು ದಾಳಿ ನಡೆದಿರುವುದರಿಂದ ರಕ್ತಸ್ರಾವ ಉಂಟಾಗಿದೆ. ಆದರೆ ಯಾವುದೇ ಪ್ರಾಣಾಪಾಯ ಇಲ್ಲ ಎಂಬುವುದನ್ನು ದೇರಳಕಟ್ಟೆ ವೈದ್ಯರ ಮೂಲಗಳು ತಿಳಿಸಿವೆ.













