ಕೊಣಾಜೆ: ವಿಶ್ವವಿದ್ಯಾನಿಲಯಗಳು ಕಟ್ಟಡದಿಂದ ಅಲ್ಲ ವಿದ್ಯಾರ್ಥಿಗಳ ಸಾಧನೆಯಿಂದ ಬೆಳೆಯಬೇಕು. ಸ್ನಾತಕೋತ್ತರ ಶಿಕ್ಷಣ ನಮ್ಮ ಜೀವನದಲ್ಲಿ ಮಹತ್ತರ ಜವಬ್ಧಾರಿಯಾಗಿದೆ ಮತ್ತು ಅನೇಕ ಅವಕಾಶಗಳನ್ನು ಸೃಷ್ಟಿಸುತ್ತದೆ. ಮಂಗಳೂರು ವಿವಿಯು ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ರಂಗಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಡಿ ವಿವೇಕ್ ಆಳ್ವ ಅವರು ಹೇಳಿದರು.


ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಣೇಮಪಾಲನಾ ನಿರ್ದೇಶನಾಲಯ ಇದರ ವತಿಯಿಂದ ಮೂರು ದಿನಗಳ ಪ್ರತಿಭಾ ಪ್ರತಿಭಾ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕೀಳರಿಮೆಯ ಬಿಟ್ಟು ಉತ್ತಮ ಪರಿಶ್ರಮದೊಂದಿಗೆ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಸ್ನಾತಕೋತ್ತರ ಶಿಕ್ಷಣಕ್ಕೆ ಇಂದಿಗೂ ಬಹಳ ಬೇಡಿಕೆ ಇದೆ. ವಿವಿಗೆ ಪೂರಕವಾಗಿ ಬೆಳೆದು ಸಮಾಜಕ್ಕೆ ಮಾದರಿಯಾಗಬೇಕಿದೆ ಎಂದರು.
ಮಂಗಳೂರು ವಿವಿ ಕುಲಸಚಿವ ಕೆ.ರಾಜು ಮೊಗವೀರ ಅವರು ಮಾತನಾಡಿ, ಅವಕಾಶಗಳನ್ನು ಬಳಸಿಕೊಳ್ಳುವ ಚಾಕಚಕ್ಯತೆ ನಮ್ಮಲ್ಲಿರಬೇಕು ಜೊತೆಗೆ ಅವಕಾಶಗಳ ಸೃಷ್ಡಿಕರ್ತರಾಗಬೇಕಿದೆ ಎಂದರು
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ .ಧರ್ಮ ಅವರು ಅಧ್ಯಕ್ಷತೆಯ ವಹಿಸಿ ಮಾತನಾಡಿ, ಜೀವನದಲ್ಲಿ ತಾಳ್ಮೆ, ಅನುಕಂಪ, ಮಾನವೀಯ ಮೌಲ್ಯ ಬಹಳ ಮುಖ್ಯವಾಗುತ್ತವೆ. ಈ ನಿಟ್ಡಿನಲ್ಲಿ ವಿದ್ಯಾರ್ಥಿಗಳು ಇಂತಹ ಮೌಲ್ಯಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕಿದೆ ಎಂದರು.
ಹಣಕಾಸು ಅಧಿಕಾರಿ ಪಂಚಲಿಂಗ ಸ್ವಾಮಿ ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಯಶ್ವಿನ್ ಕೆ.ಪಿ, ಪದಾಧಿಕಾರಿಗಳಾದ ಕಾರ್ಯದರ್ಶಿ ನಿಹಾಲ್ ಎನ್, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಶ ಕೆ, ಉಪಾಧ್ಯಕ್ಷರಾದ ಅಪೇಕ್ಷ ಎಚ್ ಆಳ್ವ, ಸಹಕಾರ್ಯದರ್ಶಿ ಮಿಲನ್ ಮುತ್ತಣ್ಣ, ಸಹ ಸಾಂಸ್ಕೃತಿ ಕಾರ್ಯದರ್ಶಿ ಕೇಸರಿ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೆಶಕರಾದ ಪ್ರೊ.ಪ್ರಶಾಂತ್ ನಾಯ್ಕ್ ಅವರು ಸ್ವಾಗತಿಸಿದರು.
ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಅಪೇಕ್ಷ ಎಚ್ ಆಳ್ವ ಅವರು ವಂದಿಸಿದರು. ವೈಷ್ಣವಿ ಯೋಗೀಶ್ ನಿರೂಪಿಸಿದರು.




