ಸೋಮೇಶ್ವರ; ಶ್ರೀ ಅಯ್ಯಪ್ಪ ಮಂದಿರ ಸೋಮೇಶ್ವರ ಇದರ 51ನೇ ವಾರ್ಷಿಕೋತ್ಸವವು ನವೆಂಬರ್ 30ರಂದು ವಿಜೃಂಭಣೆಯಿ0ದ ನಡೆಯಲಿದೆ.


ಶ್ರೀ ಅಯ್ಯಪ್ಪ ಮಂದಿರ ಟ್ರಸ್ಟ್ (ರಿ.) ಹಾಗೂ ಶ್ರೀ ಅಯ್ಯಪ್ಪ ಸೇವಾ ಸಮಿತಿ ಸೋಮೇಶ್ವರ ಸಹಯೋಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಿಗ್ಗೆ 6;30ಕ್ಕೆ ಗಣಹೋಮ, ಬಿಂಬಶುದ್ಧಿ, ಕಲಶಪೂಜೆ ನಡೆಯಲಿದೆ. ಬೆಳಿಗ್ಗೆ ಗಂಟೆ 8;30ರಿಂದ ಮಾತೆಯರಿಂದ `ಲಲಿತ ಸಹಸ್ರನಾಮ’ಪಠಣ, ಕಲಶಾಭಿಷೇಕ, ತುಪ್ಪಾಭಿಷೇಕ, ಮಹಾಪೂಜೆ ನೆರವೇರಲಿದೆ. ಮಧ್ಯಾಹ್ನ 12;30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ2;30ರಿಂದ ಭಜನಾ ಸಂಕೀರ್ತನೆ ಮೊಳಗಲಿದ್ದು, ರಾತ್ರಿ 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 6;30ರಿಂದ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ಹಾಗೂ ಸ್ಥಳೀಯ ಪ್ರತಿಭೆಗಳಿಂದ “ನೃತ್ಯ ಕಾರ್ಯಕ್ರಮ’ ನಾಟ್ಯ ಶಿಕ್ಷಕಿಯಾದ ಸುಶ್ಮಿತಾ ಬ್ರಿಜೇಶ್ ಶೆಟ್ಟಿ ಇವರ ಶಿಷ್ಯರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಪ್ರಖ್ಯಾತ ಗಾಯಕಿ ಶ್ರೀಮತಿ ಗುರುಪ್ರಿಯಾ ಶಿವಾನಂದ ಕಾಮತ್” ಇವರ ಬಳಗದವರಿಂದ ಭಕ್ತಿ ಗಾನಮೃತ “ಪ್ರಿಯಾ ಮ್ಯೂಸಿಕಲ್ ಮೆಲ್ಕಾರ್” ಮೇಳೈಸಲಿದೆ. ಇನ್ನು ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಅಭಿನಂದಿಸಿ ಗೌರವಿಸಲಾಗುವುದು.





