ಉಳ್ಳಾಲ: ಕ್ರೈಸ್ತರು ಬೈಬಲ್ ಓದುತ್ತಾರೆ, ಮುಸ್ಲಿಮರು ಕುರಾನ್ ಓದುತ್ತಾರೆ. ಆದರೆ ನಮ್ಮ ಹಿಂದೂ ಮಕ್ಕಳು ಏನು ಓದಬೇಕು? ಅವರಿಗೆ ಮೌಲ್ಯಾಧಾರಿತ ಜ್ಞಾನ ನೀಡುವುದು ಜವಾಬ್ದಾರಿ. ಅದಕ್ಕಾಗಿ ಮಹಾಸಂಗಮದoತಹ ವೇದಿಕೆಗಳು ಜ್ಞಾನ, ಸಂಸ್ಕೃತಿ ಮತ್ತು ಸಮಾಜೋದ್ಧಾರದ ಸಮ್ಮಿಲನವಾಗಬೇಕು ಎಂದು ಕೇರಳ ತಿರುವನಂತಪುರ ಶಿವಗಿರಿ ಮಠ ವರ್ಕಳದ ಜ್ಞಾನತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶ್ರೀ ನಾರಾಯಣ ಗುರುಗಳ ಮತ್ತು ಮಹಾತ್ಮ ಗಾಂಧೀಜಿಯವರ 1924ರ ವರ್ತುಲ ಸಂವಾದದ ಶತಮಾನೋತ್ಸವ ಮತ್ತು ಶ್ರೀ ನಾರಾಯಣ ಗುರುಗಳ ಮಹಾ ನಿರ್ವಾಹಣ ಶತಮಾನೋತ್ಸವದ ಅಂಗವಾಗಿ ಡಿ.3 ರಂದು ಕೊಣಾಜೆ ಮೈದಾನದಲ್ಲಿ ಆಯೋಜಿಸಲಾಗಿರುವ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನಾ ಸಮಾರಂಭದ ಯಶಸ್ವಿಗೊಳಿಸುವ ಸಲುವಾಗಿ ಕೊಲ್ಯ ಬಿಲ್ಲವ ಸಭಾಭವನದಲ್ಲಿ ಆಯೋಜಿಸಲಾದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠಕ್ಕೆ ಎದ್ದಿರುವ ಕಟ್ಟಡ ಸಮಾಧಾನಕರವಾಗಿಲ್ಲ. ಕನಿಷ್ಠ ಎರಡು ಎಕರೆ ಜಾಗದಲ್ಲಿ ದೊಡ್ಡ ಮಟ್ಟದ, ದೃಷ್ಟಾಂತವಾಗುವAತೆ ಜ್ಞಾನ ಮಂದಿರ. ದೇಗುಲದಂತೆ ಕಾಣುವ ಕಟ್ಟಡ ನಿರ್ಮಾಣವಾಗಬೇಕು. ಈ ಯೋಜನೆಗೆ ಸುಮಾರು 1.4 ಕೋಟಿ ರೂಪಾಯಿ ವೆಚ್ಚ ನಿರೀಕ್ಷಿಸಲಾಗಿದೆ. ಕರ್ನಾಟಕದಲ್ಲಿ ಸನ್ಯಾಸಿನಿ ಮಠ ಸ್ಥಾಪನೆ ಅಗತ್ಯವಾಗಿದೆ. ಇದು ನಾರಾಯಣ ಗುರುಗಳ ಆದರ್ಶಗಳನ್ನು ಮಹಿಳಾ ಕ್ಷೇತ್ರದಲ್ಲೂ ವಿಸ್ತರಿಸುವ ಮಹತ್ವದ ಹೆಜ್ಜೆ. ಇದಕ್ಕಾಗಿ ರಾಜ್ಯ ಸರ್ಕಾರದಿಂದ ಅನುಮತಿ ಮತ್ತು ಸಹಕಾರ ಬರಬೇಕೆಂದು ಮನವಿ ಮಾಡುತ್ತೇವೆ. ಜ್ಞಾನವೇ ಪರಮ ದೇಗುಲ. ಜ್ಞಾನ ದೇಗುಲದ ನಿರ್ಮಾಣದ ಮೂಲಕ, ಮುಂದಿನ ತಲೆಮಾರಿಗೆ ಗುರುತತ್ತ್ವದ ಬೆಳಕನ್ನು ನೀಡುವುದು ನಮ್ಮ ಗುರಿ. ಎಂದರು.
ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠದ ಪೀಠಾಧಿಪತಿಗಳಾದ ಶ್ರಿ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿ ಮಾತನಾಡಿ , ಎಸ್‌ಎನ್‌ಡಿಪಿ ವಿರೋಧಿಸಿದ್ದ ಕಾಲದಲ್ಲೂ, ನಾರಾಯಣ ಗುರುಗಳ ಹಠ, ಧೈರ್ಯ, ನಂಬಿಕೆ.ಇವೆಯಿAದಲೇ ಪರಿವರ್ತನೆ ಸಾಧ್ಯವಾಯಿತು. ಗುರುಗಳ ಪ್ರತಿಯೊಂದು ವಿಚಾರಧಾರೆಯೂ ಅರ್ಥಪೂರ್ಣ, ಸಮಾಜಮುಖಿ, ಮಾನವೀಯತೆಯ ಬೆಳಕಿನಿಂದ ತುಂಬಿದೆ. ಶೋಷಿತ ವರ್ಗಕ್ಕೂ ಗುರುಪರಂಪರೆಯ ಸಂಬAಧ ಇರಬೇಕು. ಗುರುಮಾರ್ಗ ಎಲ್ಲರಿಗೂ ಸೇರಿದದ್ದು; ಅದನ್ನು ಮನೆ ಮನೆಗೆ ತಲುಪಿಸುವುದು ನಮ್ಮ ಕರ್ತವ್ಯ. ಇದು ಕೇವಲ ಕಾರ್ಯಕ್ರಮವಲ್ಲ ಸಮಾಜದ ಅಸ್ತಿತ್ವ ಮತ್ತು ಗೌರವವನ್ನು ಉಳಿಸುವ ಕಾರ್ಯ. ಪ್ರತಿ ಮನೆಯಲ್ಲೂ ಒಬ್ಬನಾದರೂ ಬರಬೇಕು, ಭಾಗವಹಿಸಬೇಕು. ಸಂಘಟನೆಯ ಬಲದಿಂದ ಮಾತ್ರ ದೊಡ್ಡ ಚಳವಳಿ ಯಶಸ್ವಿ ಎಂದು ಹೇಳುತ್ತಾ ಆಸುಪಾಸಿನವರನ್ನು ಕರೆ ಮಾಡಿ, ನೆನಪಿಸಿ, ಕೈಹಿಡಿದು ಕಾರ್ಯಕ್ರಮಕ್ಕೆ ತಂದರೆ ನಾರಾಯಣ ಗುರುಗಳ ಆತ್ಮಸಾಕ್ಷಿಗೆ ಇದು ದೊಡ್ಡ ಗೌರವ. ಇದು ಕೇವಲ ಹಾಜರಾತಿಯ ವಿಷಯವಲ್ಲ; ಗುರು ತತ್ವವನ್ನು ಜೀವಂತವಾಗಿಡುವ ಜವಾಬ್ದಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ ಮಾತನಾಡಿ , ಸಮುದಾಯದ ಗೌರವ, ಒಗ್ಗಟ್ಟು ಮತ್ತು ಗುರುತಿನ ಸಂಕೇತ. ಆದ್ದರಿಂದ ಪ್ರತಿಯೊಬ್ಬ ಸಂಘದವರೂ ಕೈಜೋಡಿಸಬೇಕು, ನಿಮ್ಮ-ನಿಮ್ಮ ಪ್ರದೇಶಗಳಲ್ಲಿ ಕಟೌಟ್‌ಗಳನ್ನು ಹಾಕಿ, ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸುವ ಕೆಲಸವನ್ನು ಕೈಗೊಳ್ಳಿರಿ. ಇದು ನಮ್ಮ ಉಪಸ್ಥಿತಿಯನ್ನೂ, ನಮ್ಮ ಒಗ್ಗಟ್ಟನ್ನೂ, ಕಾರ್ಯಕ್ರಮದ ಮಹತ್ವವನ್ನೂ ಹೊರಲೋಕಕ್ಕೆ ತೋರಿಸುತ್ತದೆ.ಹಿರಿಯರು ಕಟ್ಟಿದ ಸಂಘದ ಪರಂಪರೆ, ನಾರಾಯಣ ಗುರುಗಳ ಆದರ್ಶ, ಕೋಟಿಚೆನ್ನಯ್ಯರ ಸ್ವಾಭಿಮಾನ. ಇವೆಲ್ಲವನ್ನೂ ಜೀವಂತವಾಗಿಡಲು ಪ್ರತಿಯೊಬ್ಬರ ಸಣ್ಣ ಕೊಡುಗೆಯೂ ಅನಿವಾರ್ಯ. ಕಟೌಟ್ ಹಾಕುವುದು ಕೇವಲ ಪ್ರಚಾರವಲ್ಲ; ಇದು ಗುರುಗಳಿಗೆ ಮಾಡಿದ ಗೌರವದ ನಮನ. ಸಂಘಗಳು ಒಂದಾಗಿ ನಿಂತರೆ, ಯಾವ ಗುರಿಯೂ ಅಸಾಧ್ಯವಲ್ಲ. ಆದ್ದರಿಂದ ಕಟೌಟ್ ಹಾಕಿ, ಜನರನ್ನು ಕರೆಸಿ, ದಿನಾಂಕ ನೆನಪಿಸಿ. ನಮ್ಮ ಒಗ್ಗಟ್ಟು ಮತ್ತು ಶಕ್ತಿಯ ಪ್ರದರ್ಶನವಾಗಲಿ ಎಂದರು.
ಮಂಗಳೂರು ವಿ.ವಿ ಮಾಜಿ ಸಿಂಡಿಕೇಟ್ ಸದಸ್ಯರು ಪಿ ವಿ ಮೋಹನ್ , ಬೆಸ್ಟ್ ಫೌಂಡೇಶನ್ ಅಧ್ಯಕ್ಷರು ಬೆಳ್ತಂಗಡಿ ಬಿ.ಕೆ. ರಕ್ಷಿತ್ ಶಿವರಾಮ್ , ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಡಾ. ಜಯರಾಜ್ ಎನ್. ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರುಗಳಾದ ಸತೀಶ್ ಕರ್ಕೇರ, ನಮಿತಾ ಶ್ಯಾಮ್, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷರು ರವಿ ಪೂಜಾರಿ ಚಿಲಿಂಬಿ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಟ್ರಸ್ಟೀ ಚಂದ್ರಶೇಖರ್ ಉಚ್ಚಿಲ್, ಶ್ರೀ ನಾರಾಯಣ ವಿಚಾರ ವೇದಿಕೆಯ ರಾಜ್ಯಾಧ್ಯಕ್ಷರು ಸತ್ಯಜಿತ್ ಸುರತ್ಕಲ್, ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರು ಎ.ಜೆ.ಶೇಖರ್, ಕೊಲ್ಯ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಅಧ್ಯಕ್ಷರು ವೇಣುಗೋಪಾಲ್ ಕೊಲ್ಯ, ಮಾಡೂರು ಶ್ರೀ ಸಾಯಿ ಮಂದಿರದ ಅಧ್ಯಕ್ಷರು ಕೆ.ಪಿ ಸುರೇಶ್ ಮಾಡೂರು, ಸಜಿಪ ಬಾಲಗಣಪತಿ ದೇವಸ್ಥಾನದ ಅಧ್ಯಕ್ಷರು ಯಶವಂತ ದೇರಾಜೆ , ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಅಂಬ್ಲಮೊಗರು ಗೌರವಾಧ್ಯಕ್ಷರು ದೇವಪ್ಪ ಅಂಬ್ಲಮೊಗರು , ಕೊಲ್ಯ ಬಿಲ್ಲವ ಸೇವಾ ಸಮಾಜ ಅಧ್ಯಕ್ಷ ಗೋಪಾಲ ಕೊಂಡಾಣ, ಬೋಳಿಯಾರು ಬಿಲ್ಲವ ಸೇವಾ ಸಮಾಜದ ಅಧ್ಯಕ್ಷರು ಗಣೇಶ್ ಪೂಜಾರಿ ಬೋಳಿಯಾರ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ವಿಜೇತ್ ಪಜೀರು , ಸ್ಥಾಪಕಾಧ್ಯಕ್ಷರು ಬ್ರಹ್ಮಶ್ರೀ ಯುವಸಂಚಲನ ಕಿನ್ಯಾ ಬೆಳರಿಂಗೆ ಜಯಂತ್ ಪಿ ಕಿನ್ಯಾ, ಆಡಳಿತ ಮೊಕ್ತೇಸರರು ಆಧಿಶಕ್ತಿ ದೇವಸ್ಥಾನ ದಡಸ್ ಬೇಬಿಯಣ್ಣ, ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮುಡಿಪು ವಲಯದ ಅಧ್ಯಕ್ಷ ಲೋಕೇಶ್ ಬಾಳೆಪುಣಿ , ಬೆಳ್ಮ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮಾಜಿ ಅಧ್ಯಕ್ಷ ರಾಜೀವ ಪೂಜಾರಿ, ಬಿಲ್ಲವ ಬ್ರಿಗೇಡ್ ಮಂಗಳೂರು ಅಧ್ಯಕ್ಷರು ಸುಖಾನಂದ ಪೂಜಾರಿ, ಕೊಲ್ಯ ಬಿಲ್ಲವ ಸೇವಾ ಸಮಾಜ ಮಾಜಿ ಅಧ್ಯಕ್ಷರು ಹರೀಶ್ ಮುಂಡೋಳಿ , ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷರು ನಿತಿನ್ ಕರ್ಕೇರ , ಯುವವಾಹಿನಿ ಗ್ರಾಮಚಾವಡಿ ಕೊಣಾಜೆ ಘಟಕದ ಅಧ್ಯಕ್ಷರು ಬಾಬು ಬಂಗೇರ, ಯುವವಾಹಿನಿ ಗ್ರಾಮಚಾವಡಿ ಕೊಣಾಜೆ ನಿಕಟಪೂರ್ವ ಅಧ್ಯಕ್ಷರು ಹರೀಶ್ ಪೂಜಾರಿ , ಕಾಂಗ್ರೆಸ್ ಮುಖಂಡೆ ಅಮಿತಾ ಅಶ್ವಿನ್ ಉಳ್ಳಾಲ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ನಿಕಟಪೂರ್ವ ಅಧ್ಯಕ್ಷರು ರವೀಂದ್ರ ಬಂಗೇರ ಸ್ವಾಗತಿಸಿ ನಿರೂಪಿಸಿದರು. ವೇಣುಗೋಪಾಲ್ ಕೊಲ್ಯ ವಂದಿಸಿದರು. ಪುರುಷೋತ್ತಮ ಅಡ್ಕ ಪ್ರಾರ್ಥಿಸಿದರು.
ಇದೇ ಸಂದರ್ಭ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಯಾತ್ರಿನಿವಾಸ ಶಿಲನ್ಯಾಸದ ಆಮಂತ್ರಣ ಪತ್ರ ಬಿಡುಗಡೆ ಮಾಡಲಾಯಿತು.
`50 ಕ್ಕೂ ಹೆಚ್ಚು ಯತಿವರ್ಯರಿಂದ ಗುರುಪೂಜೆ’ : ರಕ್ಷಿತ್ ಶಿವರಾಂ
ನಾರಾಯಣ ಗುರುಗಳ ಹಾಗೂ ಮಹಾತ್ಮ ಗಾಂಧಿ ಮಹಾತ್ಮರ ಭೇಟಿ ಮುಂದಿನ ಪೀಳಿಗೆಗೆ ತಿಳುವಂತಹ ಕಾರ್ಯದ ನಿಮಿತ್ತ ಕಾರ್ಯಕ್ರಮ. ಡಿ.3 ಬೆಳಿಗ್ಗೆ 8.30 ಕ್ಕೆ ಶಿವಗಿರಿ ಮಠದ 50 ಕ್ಕೂ ಹೆಚ್ಚು ಯತಿವರ್ಯರಿಂದ ಗುರುಪೂಜೆ ಜರಗಲಿದೆ. ಕೇರಳ ಹಾಗೂ ಕರ್ನಾಟಕದ ಯತಿವರ್ಯರು ಭಾಗವಹಿಸಲಿದ್ದಾರೆ. ಕೇರಳದ 8 ಮುಖ್ಯಮಂತ್ರಿಗಳು ಬಿಲ್ಲವ ಸಮಾಜದವರಾಗಿದ್ದಾರೆ. ವಿಶ್ವದಾದ್ಯಂತ ಖ್ಯಾತಿಯನ್ನು ಪಡೆದ ಮೆಡಿಮಿಕ್ಸ್ ಸೋಪ್ ಸಂಸ್ಥೆ ಮಾಲೀಕರು, ಮಲಪ್ಪುರಂ ಗೋಲ್ಡ್ , ಗೋಕುಲಂ ಚಿಟ್ಸ್ ಮಾಲೀಕರೆಲ್ಲರೂ ಬಿಲ್ಲವ ಸಮಾಜದವರೇ ಆಗಿದ್ದಾರೆ. ಕೇವಲ ಒಂದು ಸಮುದಾಯದ ವಿಚಾರವಲ್ಲ ಹಿಂದುಳಿದ ವರ್ಗಗಳ ಎಲ್ಲರ ಸರ್ವಮತ ಸಮ್ಮೇಳನವಾಗಿದೆ. ಈ ಸಂದರ್ಭ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಕಟ್ಟಡ ಉದ್ಘಾಟನೆಗೊಳ್ಳಲಿದೆ, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠಕ್ಕೆ ಅನುದಾನ ಮೀಸಲಿಡಬೇಕು, ಮಂಗಳೂರು ವಿ.ವಿ.ಗೆ ನಾರಾಯಣ ಗುರು ವಿ.ವಿ ಹೆಸರನ್ನಿಡಬೇಕು ಅನ್ನುವ ಒತ್ತಾಯವನ್ನು ಮುಖ್ಯಮಂತ್ರಿಗಳಲ್ಲಿ ಮಾಡಲಿದ್ದೇವೆ. ಎಲ್ಲಾ ತಾಲೂಕಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುವಂತೆ ಕರೆ ನೀಡಲಾಗಿದ್ದು, ಉಳ್ಳಾಲ ಭಾಗದಿಂದಲೂ ದೊಡ್ಡ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕಿದೆ. 10 ರಿಂದ 15,000 ಮಂದಿಯನ್ನು ಸೇರುವ ಉದ್ದೇಶವನ್ನು ಹೊಂದಿರುವುದರಿAದ ಪ್ರತೀ ತಾಲೂಕುಗಳಲ್ಲಿ ಸಂಚಾರಿ ಕಾರ್ಡಿನೇಟರ್ ಗಳನ್ನು ನೇಮಿಸಲಾಗಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಎಲ್ಲ ಜಾತಿ-ಧರ್ಮದ ಜನರು ಒಟ್ಟಾಗಿ ಗುಡಿಬೇಕೆಂದು ಧೈರ್ಯ ತುಂಬಿದ ನರಾಯಣ ಗುರುಗಳ ಬಲಿಕೆ ಅಪಾರ. ಅಹಿಂಸೆ ಮಾರ್ಗದಿಂದ ಸ್ವಾತಂತ್ರ‍್ಯ ಬರುವುದು ಎಂಬ ತತ್ವವನ್ನು ಜನರಿಗೆ ತಲುಪಿಸಿದ ಮಹಾತ್ಮರು ನಾರಾಯಣ ಗುರುಗಳು. ಅವರ ಆದರ್ಶಗಳನ್ನು ಯುವ ಸಮುದಾಯಕ್ಕೆ ತಲುಪಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶ. ಇದು ರಾಜಕೀಯ ಕಾರ್ಯಕ್ರಮವಲ್ಲ, ಹಿಂದೊಡ್ಡಲ್ಪಟ್ಟ ಸಮುದಾಯಗಳ ಶಕ್ತಿಕರಣಕ್ಕಾಗಿ ನಡೆಯುತ್ತಿರುವ ಸಾಮಾಜಿಕ-ಶೈಕ್ಷಣಿಕ ಚಳವಳಿ. ಪ್ರಧಾನಮಂತ್ರಿಗಳವರು ಸ್ಟಾಂಪ್ ಬಿಡುಗಡೆ ಮಾಡುವ ಮೂಲಕ ಗುರುಗಳ ಸಂದೇಶಕ್ಕೆ ರಾಷ್ಟ್ರಮಟ್ಟದ ಚಾಲನೆ ನೀಡಿದ್ದಾರೆ. ಆಸ್ಟ್ರೇಲಿಯಾ, ವಾಟಿಕನ್ ಸಿಟಿ ಸೇರಿದಂತೆ ಅನೇಕ ದೇಶಗಳಲ್ಲಿ ಗುರು ತತ್ವಕ್ಕೆ ಗೌರವ ದೊರೆತಿದೆ. ಭಾರತದ ರಾಷ್ಟ್ರಪತಿಗಳು ಸಹ ಶಿವಗಿರಿ ಮಠಕ್ಕೆ ಭೇಟಿ ನೀಡಿ ಗೌರವಾರ್ಪಣೆ ಮಾಡಿದ್ದಾರೆ. ನಾರಾಯಣ ಗುರು ಅಧ್ಯಯನ ಪೀಠ ಇರುವ ಸ್ಥಳದಲ್ಲಿಯೇ ಈ ಕಾರ್ಯಕ್ರಮ ನಡೆಯಲಿದೆ. ಉಳ್ಳಾಲ್ ಬಿಲ್ಲವ ಸಂಘದ ಆತಿಥ್ಯದಲ್ಲಿ ಕಾರ್ಯಕ್ರಮವು ವೈಭವದಿಂದ ಸಾಗಲಿದೆ. ಅಸ್ಪೃಶ್ಯ ವರ್ಗಕ್ಕೆ ಸೇರಿಸಿ ದಮನಿಸಿದ ಕಾಲದಲ್ಲಿ, ಶ್ರೇಣೀಕೃತ ಜಾತಿವ್ಯವಸ್ಥೆಯ ವಿರುದ್ಧ ಧೈರ್ಯವಾಗಿ ಹೋರಾಡಿದವರು ಭಗವಾನ್ ನಾರಾಯಣ ಗುರು. ವೈಕಂ ಸತ್ಯಾಗ್ರಹದ ಮೂಲಕ, ಯಾವುದೇ ಆಯುಧ ಹಿಡಿಯದೇ, ಅಹಿಂಸೆಯ ಮಾರ್ಗದಲ್ಲೇ ದೇವಾಲಯಗಳ ರಥಬೀದಿಗೆ ಎಲ್ಲರಿಗೂ ಪ್ರವೇಶ ಕಲ್ಪಿಸಿದ ಮಹಾನ್ ಸತ್ಯಾಗ್ರಹಿ ಅವರು. ಅವರ ಶಾಂತಿಯುತ ಸಾಮಾಜಿಕ ಕ್ರಾಂತಿಯನ್ನು ಇಡೀ ವಿಶ್ವವೇ ಕಂಡಿತ್ತು.
`ದೈವ ನಿರ್ಧಾರವಲ್ಲ, ಗುರು ನಿರ್ಧಾರ’ : ಪಿ.ವಿ.ಮೋಹನ್
ಇದು ದೈವ ನಿರ್ಧಾರವಲ್ಲ, ಗುರು ನಿರ್ಧಾರ. ರವೀಂದ್ರನಾಥ ಠಾಗೂರ್ , ಪೆರಿಯಾರ್, ಗಾಂಧೀಜಿ ಮೂವರು ಮಹಾತ್ಮರೂ ನಾರಾಯಣ ಗುರುಗಳನ್ನು ಭೇಟಿ ಮಾಡಲು ಊರಿಗೆ ಬಂದಿರುವುದು ಅವರ ಕ್ರಾಂತಿಯ ಮಹತ್ವವನ್ನೇ ತೋರಿಸುತ್ತದೆ. ಗುರುಗಳ ಹೋರಾಟ ಸಾಮಾಜಿಕ ಕ್ರಾಂತಿಗೆ ಮುನ್ನುಡಿ, ಸರ್ವಮತ ಸಮಾರಂಭಗಳ ಮೂಲಕ ಮಾನವೀಯತೆಯ ಸೇತುವೆ. ಇಂದಿನ ಸಭೆ ಪ್ರತಿ ಮನೆಯಲ್ಲೂ ಚರ್ಚೆಯಾಗುವ ವಿಷಯವಾಗಬೇಕು. ರಾಜಕೀಯಕ್ಕೆ ಹಿಂದೆ ನಡೆದರೂ, ಬಿಲ್ಲವರು ಎದ್ದರೆ ಸಣ್ಣ ಜಾತಿಗಳಿಗೂ ಶಕ್ತಿ ಬರುತ್ತದೆ; ಈ ಚಳವಳಿ ಉತ್ತರ ಕನ್ನಡದಿಂದ ಉಡುಪಿ, ಮಡಿಕೇರಿ ತನಕ ಹರಡಬೇಕು ಎಂದು ಹೇಳಿದ ಅವರು ಆಮಂತ್ರಣ ಪತ್ರಿಕೆ ಕೈ ಸೇರಲಿದ್ದು, 27 ಗ್ರಾಮಗಳಿಗೆ ತಲುಪುವ ವ್ಯವಸ್ಥೆ ಮಾಡುತ್ತೇವೆ. ಪುತ್ತೂರಿನಲ್ಲಿ , ಬೆಳ್ತಂಗಡಿ ಭಾಗಗಳಲ್ಲಿ ಸಭೆಗಳು ಮನೆಭೇಟಿ ಮೂಲಕ ಜನರನ್ನು ಸೇರಿಸುವ ಕೆಲಸ ನಡೆಯುತ್ತಿದೆ. ಉಳ್ಳಾಲದಿಂದಲೇ ಹೆಚ್ಚು ಮಂದಿ ಸೇರಬೇಕು ಎಂದರು.
`ಪೊಲೀಸ್- ಕೋರ್ಟ್ ಇಲ್ಲದಾಗ ಸಾಮರಸ್ಯ ತಂದುಕೊಟ್ಟವರು ಗುರುಗಳು’ ಸತೀಶ್ ಕುಂಪಲ
ನಾರಾಯಣ ಗುರುಗಳು ಸಾಮರಸ್ಯ ಮಾಡಬೇಕೆಂದು ಹೇಳಿದವರು. ಪೊಲೀಸರೂ , ಕೋರ್ಟ್ಗಳೂ ಇಲ್ಲದ ಸಂದರ್ಭದಲ್ಲಿ ಸಾಮರಸ್ಯ, ಮಾನವೀಯತೆ, ಪರಸ್ಪರ ಗೌರವ ಇವುಗಳೇ ಸಮಾಜದ ಆಧಾರವಾಗಬೇಕು ಎಂಬ ಸಂದೇಶ ನೀಡಿದವರು. ಗುರುಗಳು ಸಮಾಜದಲ್ಲಿ ನಿಜವಾದ ಪರಿವರ್ತನೆಯನ್ನು ತಂದವರು. ನ್ಯಾಯ ಯಾರಿಗಾದರೂ ಗೌರವದಿಂದ ಸಿಗಬೇಕು. ಬೃಹತ್ ಪ್ರಮಾಣದಲ್ಲಿ ಬೆಳೆಯಲು, ಗುರುಗಳಿಗೆ ಯೋಗ್ಯ ಗೌರವ ನೀಡುವುದು ನಮ್ಮ ಕರ್ತವ್ಯ. ಬಿ.ಕೆ. ಹರಿಪ್ರಸಾದ್ ಅವರ ಅಧ್ಯಯನ ವೇದಿಕೆ ಎಂಬುದು ಸಮುದಾಯದ ಎಲ್ಲರಿಗೂ ಸಮಾನ ಅವಕಾಶ ನೀಡುವ ವೇದಿಕೆ ಎಂಬುದು ನಿಜ ವಿಚಾರ . ಉಳ್ಳಾಲ ತಾಲೂಕು ಬಿಲ್ಲವ ಸಂಘದಲ್ಲಿ 7000 ಸದಸ್ಯರಿದ್ದು, 23 ಗ್ರಾಮಗಳಿಂದ ಸೋಮೇಶ್ವರ–ಕೋಟೆಕಾರು ಭಾಗಗಳಿಂದ 400–500 ಜನರು ಕೂಡಿಸಬಹುದಾದ ಶಕ್ತಿ ಇದೆ ಎಂದರು.
`ಉಳ್ಳಾಲ ಕ್ಷೇತ್ರದಲ್ಲಿ 10% ಜನರೂ ಬಂದರೆ 4,000 ಜನ ಆಗುತ್ತಾರೆ’ ಸತ್ಯಜಿತ್ ಸುರತ್ಕಲ್
ಚುನಾವಣೆ ಬಂದಾಗ ಮಾತ್ರ ಬೊಬ್ಬೆ ಹಾಕುತ್ತೇವೆ, ಆದರೆ ಸಮಾಜಕ್ಕಾಗಿ ಒಂದು ದಿನ ಕೊಡುವುದೇಕೆ ಕಷ್ಟ? ಎಂದು ಪ್ರಶ್ನಿಸಿದ ಅವರು ಸಮಾಜಕ್ಕಾಗಿ ನಿಲ್ಲುವುದಕ್ಕೆ ಮರೆಮಾಚಿದಲ್ಲಿ ಯಾಕೆ ಗೌರವ ಕೊಡುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಪ್ರಜಾಪ್ರಭುತ್ವ ಕಾಲದಲ್ಲಿ ಹಣಬಲ ಮತ್ತು ಜನಬಲ ಅವಶ್ಯಕ. ನಮ್ಮ ಜನರ ಶಕ್ತಿಯನ್ನು ತೋರಿಸುವ ಕಾಲ ಬಂದಿದೆ. ಉಳ್ಳಾಲ ಕ್ಷೇತ್ರದಲ್ಲಿ 50,000 ಜನ ಇದ್ದಾರೆ. ಅದರ 10% ಜನರೂ ಬಂದರೆ 4,000 ಜನ ಆಗುತ್ತಾರೆ. ಚಿಂತನೆ, ನಿರ್ಧಾರ ಮತ್ತು ದೃಢ ವಿಶ್ವಾಸ ಇದ್ದರೆ ಈ ಸಂಖ್ಯೆಯನ್ನು ಮೀರಿಸುವುದು ಕಷ್ಟವಲ್ಲ ಎಂದರು. ಮೂರು ಲಕ್ಷ ಜನಸಂಖ್ಯೆಯಿರುವ ಜಿಲೆಯಲ್ಲಿ 25-30 ಸಾವಿರ ಜನರು ಸೇರಿದ್ದ ಉದಾಹರಣೆಯನ್ನು ನೀಡಿದ ಅವರು, ನ್ಯಾಯಯುತವಾಗಿ ಸಿಗಬೇಕಾದ ಅವಕಾಶಗಳನ್ನು ನಾವು ಪಡೆದುಕೊಳ್ಳಬೇಕು. ಅಪಮಾನಕ್ಕೆ ತುತ್ತಾದಾಗ ಗುರುಗಳು ಬಂದoತೆ, ನಾವುಲ್ಲಾ ಒಂದಾಗಿ ನಿಲ್ಲಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ದೂರವಿಟ್ಟು, ಸಮಾಜದ ಭವಿಷ್ಯ ಮತ್ತು ಗೌರವ ಮೊದಲ ಆದ್ಯತೆಯಾಗಬೇಕೆಂದರು.ಮಕ್ಕಳಿಗೆ ಸಿಗಬೇಕಾದ ಗೌರವ, ಗುರುಗಳ ಹೆಸರಿನ ಗೌರವ, ಇವೆಲ್ಲವೂ ನಮ್ಮ ಪಾಲ್ಗೊಳ್ಳುವಿಕೆಯ ಮೇಲೆ ಅವಲಂಬಿತ. ಕೋಟಿ-ಚೆನ್ನಯ್ಯರ ಸ್ವಾಭಿಮಾನದ ಬದುಕಿನ ಆದರ್ಶ ನಮ್ಮ ಮಾರ್ಗವಾಗಬೇಕು. ಈ ಸಲ ಬಿಲ್ಲವ ಸಂಘದವರು ಮನೆ ಮನೆಗೆ ತೆರಳಿ ಜನರನ್ನು ಸೇರಿಸುವುದು ಅಗತ್ಯ ಎಂದು ಕರೆ ನೀಡಿದರು.




