ಕೊಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಯಶಸ್ವಿ ಜೈಸ್ವಾಲ್, ಫುಲ್ ಡಲ್ ಆಗಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಶತಕಗಳಿಸಿದ್ದ ಜೈಸ್ವಾಲ್, ರಾಜಸ್ಥಾನ್ ವಿರುದ್ಧ ರಣಜಿ ಟ್ರೋಫಿಯಲ್ಲೂ ಘರ್ಜಿಸಿದ್ರು.

ಟೆಸ್ಟ್ ಕ್ರಿಕೆಟ್ನಲ್ಲಿ ಜೈತ್ರಯಾತ್ರೆ ಮುಂದುವರೆಸುತ್ತಿರುವ 24 ವರ್ಷದ ಯಶಸ್ವಿ ಜೈಸ್ವಾಲ್, ದಿಗ್ಗಜ ಕ್ರಿಕೆಟಿಗರ ದಾಖಲೆಗಳನ್ನೇ ಪುಡಿ ಪುಡಿ ಮಾಡಿದ್ದಾರೆ. ದೇಶ-ವಿದೇಶಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿರುವ ಜೈಸ್ವಾಲ್, ತವರಿನಲ್ಲಿ ರನ್ಗಳಿಸೋಕೆ ಪರದಾಡ್ತಿದ್ದಾರೆ. ಅದ್ರಲ್ಲೂ ಎಡಗೈ ವೇಗಿಗಳ ವಿರುದ್ಧ ಜೈಸ್ವಾಲ್ ಪರದಾಡ್ತಿರೋದು ಟೀಮ್ ಮ್ಯಾನೇಜ್ಮೆಂಟ್ಗೆ ದೊಡ್ಡ ಟೆನ್ಶನ್ ಆಗಿದೆ.
ಕೊಲ್ಕತ್ತಾ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಜೈಸ್ವಾಲ್, ಎಡಗೈ ವೇಗಿ ಮಾರ್ಕೊ ಯಾನ್ಸನ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿದ್ರು. ಎರಡನೇ ಇನ್ನಿಂಗ್ಸ್ನಲ್ಲೂ ಜೈಸ್ವಾಲ್, ಯಾನ್ಸನ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡಿ, ಔಟಾದ್ರು. ಯಾನ್ಸನ್ ಎಸೆದ ಒಂದೊಂದು ಎಸೆತವವೂ, ಜೈಸ್ವಾಲ್ಗೆ ಬೆಂಕಿ ಚೆಂಡಿನಂತಿತ್ತು.
ಎಡಗೈ ವೇಗಿಗಳೇ ಜೈಸ್ವಾಲ್ಗೆ ರಿಯಲ್ ವಿಲನ್ಸ್..!
ಯಂಗ್ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್ನಲ್ಲಿ ಎಲ್ಲಾ ಬೌಲರ್ಗಳ ವಿರುದ್ಧ ರನ್ಗಳಿಸಿದ್ದಾರೆ. ಆದ್ರೆ ಮುಂಬೈನ ಈ ಎಡಗೈ ಬ್ಯಾಟರ್, ಲೆಫ್ಟ್ ಆರ್ಮ್ ಪೇಸರ್ಸ್ ವಿರುದ್ಧ ವಿಲ ವಿಲ ಅಂತ ಒದ್ದಾಡಿದ್ದಾರೆ. ಅದ್ರಲ್ಲೂ ಆಫ್ರಿಕನ್ ಲೆಫ್ಟ್ ಆರ್ಮ್ ಪೇಸರ್ಸ್, ಜೈಸ್ವಾಲ್ರನ್ನ ಕಟ್ಟಿಹಾಕಿದ್ದಾರೆ. ಆಫ್ರಿಕಾದ ನಂಡ್ರೆ ಬರ್ಗರ್ 3 ಬಾರಿ ಜೈಸ್ವಾಲ್ರನ್ನ ಡಿಸ್ಮಿಸ್ ಮಾಡಿದ್ರೆ, ಮಾರ್ಕೊ ಯಾನ್ಸನ್ 2 ಬಾರಿ ಔಟ್ ಮಾಡಿದ್ದಾರೆ.ದಕ್ಷಿಣ ಆಫ್ರಿಕಾ ವಿರುದ್ಧ ಯಶಸ್ವಿ 30 ರನ್ ದಾಟಿಲ್ಲ
ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ನಂತಹ ತಂಡಗಳ ವಿರುದ್ಧ ಆರ್ಭಟಿಸಿರುವ ಯಶಸ್ವಿ ಜೈಸ್ವಾಲ್, ಅದ್ಯಾಕೋ ಸೌತ್ ಆಫ್ರಿಕಾ ವಿರುದ್ಧ ಒಂದೊಂದು ರನ್ಗಳಿಸೋಕೂ ಒದ್ದಾಡಿದ್ದಾರೆ. ಆಫ್ರಿಕಾ ವಿರುದ್ಧ ಆಡಿರೋ 6 ಇನ್ನಿಂಗ್ಸ್ಗಳಿಂದ ಗಳಿಸಿರೋದು ಕೇವಲ 62 ರನ್ ಮಾತ್ರ. ಜೈಸ್ವಾಲ್ ಬ್ಯಾಟಿಂಗ್ ಸರಾಸರಿ ಜಸ್ಟ್ 10.33. ಜೈಸ್ವಾಲ್ ಬೆಸ್ಟ್ ಸ್ಕೋರ್ ಏನ್ ಗೊತ್ತಾ? ಕೇವಲ 28 ರನ್.
ಕೊಲ್ಕತ್ತಾ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಜೈಸ್ವಾಲ್ ಫ್ಲಾಪ್ ಆಗಿದ್ದೇ ತಡ. ಜೈಸ್ವಾಲ್ ಟೆಸ್ಟ್ ಬ್ಯಾಟಿಂಗ್ ಸರಾಸರಿ ಕೂಡ ಡ್ರಾಪ್ ಆಗಿದೆ. ಆಫ್ರಿಕಾ ಟೆಸ್ಟ್ ಸರಣಿಗೂ ಮುನ್ನ ಜೈಸ್ವಾಲ್ 60+ ಬ್ಯಾಟಿಂಗ್ ಸರಾಸರಿ ಹೊಂದಿದ್ರು. ಆದ್ರೀಗ ಜೈಸ್ವಾಲ್ ಬ್ಯಾಟಿಂಗ್ ಌವರೇಜ್ 57.47 ಆಗಿದೆ. ಒಂದೇ ಒಂದು ಟೆಸ್ಟ್ ಪಂದ್ಯದ ವೈಫಲ್ಯ, ಜೈಸ್ವಾಲ್ ಸರಾಸರಿಗೆ ಬಾರೀ ಪೆಟ್ಟನ್ನೇ ನೀಡಿದೆ.
ಜೈಸ್ವಾಲ್ ಬ್ಯಾಟಿಂಗ್ ಬಗ್ಗೆ ಮಾಜಿ ಕ್ರಿಕೆಟಿಗ ಚೆತೇಶ್ವರ ಪೂಜಾರ ಆತಂಕ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಬ್ಯಾಟಿಂಗ್ ಗಮನಿಸಿದ ಪೂಜಾರ, ಮುಂಬೈಕರ್ ಬ್ಯಾಟಿಂಗ್ನಲ್ಲಿ ಟೆಕ್ನಿಕಲ್ ಸಮಸ್ಯೆ ಇದೆ ಎಂದಿದ್ದಾರೆ. ಎರಡೂ ಇನ್ನಿಂಗ್ಸ್ಗಳಲ್ಲೂ ಜೈಸ್ವಾಲ್ ಟೆಕ್ನಿಕಲಿ ಎಡವಿದ್ದಾರೆ ಎಂದಿದ್ದಾರೆ. ಅದೇನೆ ಇರಲಿ.. ಯಶಸ್ವಿ ಜೈಸ್ವಾಲ್.. ಯಂಗ್, ಡೈನಾಮಿಕ್ ಌಂಡ್ ಫೈಟರ್. ಇದೀಗ ಕೊಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ಎಡವಿರೋ ಜೈಸ್ವಾಲ್, ಗುವಾಹಟಿಯಲ್ಲಿ ನಡೆಯಲಿರುವ 2ನೇ ಟೆಸ್ಟ್ನಲ್ಲಿ, ಕಮ್ಬ್ಯಾಕ್ ಮಾಡ್ತಾರೆ ಅನ್ನೋ ಭರವಸೆಯಂತೂ ಇದೆ.

