ಜನರು ಎಷ್ಟೇ ಉಗಿದು ಉಪ್ಪಿನಕಾಯಿ ಹಾಕಿದ್ರೂ ರಸ್ತೆಯಲ್ಲಿ ಗುಂಡಿ ನಿರ್ಮಿಸುವುದನ್ನ ಮಾತ್ರ ಇವರು ಬಿಡುವ ತರ ಕಾಣುತ್ತಿಲ್ಲ. ಇದೀಗ ದೇರಳಕಟ್ಟೆಯಲ್ಲಿ ಒಂದು ವಾರದ ಹಿಂದೆ ಅಷ್ಟೇ ಹಾಕಿದ್ದ ಇಂಟರ್ ಲಾಕ್ನ್ನು ತೆರವುಗೊಳಿಸಲಾಗಿದೆ.

ಹೌದು, ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇರಳಕಟ್ಟೆ ಸಿಟಿ ವಾರ್ಡಿನ ದೇರಳಕಟ್ಟೆ ಜಂಕ್ಷನ್ ಮುಖ್ಯ ರಸ್ತೆಯ ಬದಿಯಲ್ಲಿ ಇತ್ತೀಚೆಗೆ ಇಂಟರ್ಲಾಕ್ ಹಾಕಿ ಸುಂದರಗೊಳಿಸಲಾಗಿತ್ತು. ಇದೀಗ ಪುನಃ ಕುಡಿಯುವ ನೀರಿನ ಪೈಪ್ ಲೈನ್ ಗಾಗಿ ಈಗಾಗಲೇ ಹಾಕಿದ್ದ ಇಂಟರ್ಲಾಕ್ ಅನ್ನು ಅಗೆದು ಹೊಂಡಗಳು ನಿರ್ಮಾಣಗೊಂಡಿದೆ.

ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಿದ ಬಳಿಕ ಇಂಟರ್ಲಾಕ್ ಹಾಕುವುದನ್ನು ಬಿಟ್ಟು ತರಾತುರಿಯಲ್ಲಿ ಇಂಟರ್ಲಾಕ್ ಹಾಕುವ ಪ್ರಮೇಯವೇನಿತ್ತು? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇದರ ಜೊತೆಗೆ ತೆರಿಗೆ ಹಣವನ್ನು ಪೋಲು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.


