ಉಳ್ಳಾಲ, ನ; 12: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾಗಿರುವ ಉಳ್ಳಾಲದ ಮಾರುತಿ ಜನಸೇವಾ ಸಂಘ (ರಿ.),ಮಾರುತಿ ಯುವಕ ಮಂಡಲ (ರಿ) ವತಿಯಿಂದ ಮಾರುತಿ ಮಾಣಿಕ್ಯ ಮಹೋತ್ಸವ -2025ರ ಅಂಗವಾಗಿ ಉಳ್ಳಾಲದ ಭಾರತ್ ಪ್ರೌಢ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಅತಿಥಿ ಗಣ್ಯರು, ಸಂಘದ ಪದಾಧಿಕಾರಿಗಳು ಸೇರಿದಂತೆ ಸದಸ್ಯರು ವಿವಿಧ ರೀತಿ ಗಿಡಗಳನ್ನು ನೆಟ್ಟು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಮಾತನಾಡಿ, ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಮಕ್ಕಳಿಗೆ ಇದೆ. ವನಮಹೋತ್ಸವದ ಅರಿವು ವಿದ್ಯಾರ್ಥಿಗಳಲ್ಲಿ ಮೂಡಿಸಲು ಈ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಮಾತನಾಡಿ, ಒಂದು ಸಂಸ್ಥೆಯ ಬೆಳವಣಿಗೆ ಇಡೀ ವಿಶ್ವಕ್ಕೆ ತಿಳಿಯುವುದು ಪ್ರಕೃತಿಯ ಜೋಡಣೆಯಿಂದ ಮಾತ್ರ. ಮುಂದಿನ ದಿನಗಳಲ್ಲಿ ನಾವು ನೆಟ್ಟ ಗಿಡಗಳು ಫಲವನ್ನು ಕೊಡಲು ಆರಂಭಿಸುತ್ತದೆ. ಇಂದು ಇಡೀ ವಿಶ್ವಕ್ಕೆ ಬೇಕಾಗಿರುವುದು ಪ್ರಕೃತಿ. ಹಾಗಾಗಿ ಮಾರುತಿ ಮಾಣಿಕ್ಯ ತಂಡದ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭ ಫುಟ್ಬಾಲ್ ತರಬೇತಿದಾರ ಸಮಾಜ ಸೇವಕ ಸಾಜಿದ್ ಉಳ್ಳಾಲ್ ಮಾತನಾಡುತ್ತಾ, ಮಾರುತಿ ಯುವಕ ಮಂಡಲ ಸರ್ವಧರ್ಮದವರನ್ನು ಸಮಾನವಾಗಿ ಕಾಣುವಂತಹ ಸಂಸ್ಥೆ. ಕೇವಲ ಕ್ರೀಡಾಕ್ಷೇತ್ರದಲ್ಲಿ ಮಾತ್ರವಲ್ಲದೇ ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಯನ್ನು ಮಾರುತಿ ಯುವಕ ಮಂಡಲ ನೀಡಿದೆ. ಇವರ ಕಾರ್ಯ ಹೀಗೆ ಮುಂದುವರೆಯಲಿ ಎಂದರು.
ಸಭಾ ಕಾರ್ಯಕ್ರಮದಲ್ಲಿ ಉಳ್ಳಾಲ ಮೊಗವೀರ ಸಂಘÀದ ಅಧ್ಯಕ್ಷರಾದ ಯಶವಂತ್ ಪಿ ಅಮೀನ್, ಭಾರತ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ, ಭಾರತ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಯಿನಿ ವಿನಯ, ಭಾರತ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅನುಸೂಯ, ಪದಾಧಿಕಾರಿಗಳಾದ ವರದರಾಜ್ ಬಂಗೇರ, ಸುದೀಪ್ ಸುವರ್ಣ , ಮಹೇಶ್ ಸಾಲ್ಯಾನ್, ಕಿರಣ್ ಪುತ್ರನ್, ಪ್ರಶಾಂತ್, ಅಜಿತ್ ಸುವರ್ಣ, ಅಶ್ವಿನ್ ಕೋಟ್ಯಾನ್, ಪ್ರಕಾಶ್ ತಿಂಗಳಾಯ, ವಾಸುದೇವ ಕರ್ಕೆರ , ತಿಲಕ್ ಬಂಗೇರ, ಪವÀನ್ ಬಂಗೇರ, ಅನಿಲ್ ಚರಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿಯಾದ ಕಪಿಲ್ ಎಸ್ ಬಂಗೇರ ಸ್ವಾಗತಿಸಿ, ನಿರೂಪಿಸಿದರು.



