ಕೋಟೆಕಾರು; ಉಳ್ಳಾಲ ತಾಲೂಕಿನ ಕೋಟೆಕಾರ್-ಸಂಕೋಳಿಗೆ ಮಾರ್ಗದ ಸರ್ವಿಸ್ ರಸ್ತೆಯ ವಿಭಜಕಗಳನ್ನು ವ್ಯಾಪಾರಸ್ಥರು ಅಕ್ರಮವಾಗಿ ತೆಗೆದು ಹಾಕಿದ್ದಾರೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.


ಕೋಟೆಕಾರ್ ಪ್ರದೇಶದ ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಗಂಭೀರ ಸಮಸ್ಯೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಪ್ರದೇಶದ ಜನರ ಸುರಕ್ಷತೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬoಧಿಸಿದ0ತೆ
ಉಳ್ಳಾಲ ತಾಲ್ಲೂಕು, ಕೋಟೆಕಾರ್ ಕೊರಗಜ್ಜ ಕಟ್ಟೆಯಿಂದ ಸಂಕೋಳಿಗೆವರೆಗೆ ಇರುವ ಎರಡೂ ಬದಿಯ ಸರ್ವಿಸ್ ರಸ್ತೆಗೆ ವಿಭಜಕಗಳನ್ನು ಆಳವಡಿಸಲಾಗಿತ್ತು. ಆದರೆ ಕೆಲ ವ್ಯಾಪಾರಸ್ಥರು ತಮ್ಮ ಸ್ವಾರ್ಥದ ನಿಮಿತ್ತ ಅವೈಜ್ಞಾನಿಕವಾಗಿ ವಿಭಜಕಗಳನ್ನು ತೆಗೆದು ಹಾಕಿರುವುದು ಬೆಳಕಿಗೆ ಬಂದಿದೆ. ಇದರ ಪರಿಣಾಮವಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪಾದಚಾರಿಗಳಿಗೆ ರಸ್ತೆ ದಾಟುವುದು ಕಷ್ಟವಾಗುತ್ತಿದೆ. ಇದರಿಂದ ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿದೆ. ಈ ಮಾರ್ಗದಲ್ಲಿ ಅಧಿಕಾರಿಗಳು ಪ್ರತಿದಿನ ಸಂಚರಿಸುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳದಿರುವುದು ದುರಾದೃಷ್ಟಕರ ಸಂಗತಿ.

ಹಾಗಾಗಿ ಈ ಗಂಭೀರ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು, ವಿಭಜಕಗಳನ್ನು ಸರಿಪಡಿಸುವಂತೆ ಕೋಟೆಕಾರ್ ಪ್ರದೇಶದ ಸ್ಥಳೀಯ ನಿವಾಸಿಗಳು ಡಿಸಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.




