ಮೂಡುಬಿದಿರೆ,ನ.04: ಪ್ರೇರಣಾ ಸೇವಾ ಟ್ರಸ್ಟ್ ಮೂಡುಬಿದಿರೆ (ರಿ.) ಇದರ ನೂತನ ಪ್ರೇರಣಾ ಕಾರ್ಯಾಲಯದ ಭೂಮಿಪೂಜೆ ಮತ್ತು ಸಭಾಕಾರ್ಯಕ್ರಮದಲ್ಲಿ ಮುಲ್ಕಿ-ಮೂಡಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ಭಾಗವಹಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ – ಮಧ್ಯ ಕ್ಷೇತ್ರದ ಮಾನ್ಯ ಕ್ಷೇತ್ರಿಯ ಸಂಘಚಾಲಕರಾದ ಡಾ.ವಾಮನ್ ಶೆಣೈ ಅವರು ಕಾರ್ಯಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಶಶಿಧರ್ ಶೆಟ್ಟಿ ಬರೋಡ ಹಾಗೂ ಪ್ರೇರಣಾ ಸೇವಾ ಟ್ರಸ್ಟ್ ಇದರ ಅಧ್ಯಕ್ಷರಾದ ವಿವೇಕಾನಂದ ಕಾಮತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


