ಬೆಂಗಳೂರು, ಅ.28: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ 100ಮೀ. ಅಥ್ಲೆಟಿಕ್ಸ್‌ನಲ್ಲಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಎಸ್ ನಾಯ್ಕ್ ದ್ವಿತೀಯ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ.



ಆ ಮೂಲಕ ಹಾಸನದಲ್ಲಿ ನಡೆಯಲಿರುವ ರಾಷ್ಟçಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.


ಮಕ್ಕಳು ಶಿಕ್ಷಣದ ಜೊತೆ ಕ್ರೀಡಾಕ್ಷೇತ್ರದಲ್ಲೂ ತೊಡಗಿಸಿಕೊಳ್ಳುವುದು ಉತ್ತಮ ಬೆಳವಣಿಗೆ. ಓದಿನ ಜೊತೆಗೆ ಆಟಕ್ಕೂ ಒತ್ತು ನೀಡಿದಾಗ ಒಬ್ಬ ವಿದ್ಯಾರ್ಥಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ. ಇದೀಗ ಸಂತೋಷ್ ಕುಮಾರ್ ಮತ್ತು ನಿಶಾ ಎಸ್ ನಾಯ್ಕ್ ದಂಪತಿಯ ಸುಪುತ್ರಿ ಸಾನ್ವಿ ಎಸ್ ನಾಯ್ಕ್ ಮಿಂಚಿನ ಓಟದ ಮೂಲಕ 100ಮೀ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಆ ಮೂಲಕ ಹೆತ್ತವರಿಗೂ, ತಾನು ಶಿಕ್ಷಣ ಪಡೆಯುತ್ತಿರುವ ಸಂಸ್ಥೆಗೂ ಹೆಸರನ್ನು ತಂದುಕೊಟ್ಟಿದ್ದಾರೆ. ಇದೇ ರೀತಿ ಕಲಿಕೆಯಲ್ಲೂ, ಕ್ರೀಡೆಯಲ್ಲೂ ಉತ್ತಮ ಸಾಧನೆಗೈದು ಸಾನ್ವಿ ಇನ್ನಷ್ಟು ಗರಿಮೆಗಳನ್ನ ತಮ್ಮದಾಗಿಸಿಕೊಳ್ಳುವಂತಾಗಲಿ ಎಂಬುವುದು ನಮ್ಮೆಲ್ಲರ ಆಶಯ.



