ತಲಪಾಡಿ;ಸೋಷಿಯಾಲ್ ಅಚೀವ್ಮೆಂಟ್ ಫೋರಮ್ ಹಾಗೂ ಪೂಮಣ್ಣು ಫ್ರೆಂಡ್ಸ್ ಕ್ಲಬ್ ತಲಪಾಡಿ ಇದರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಅಬ್ರಾರ್ ಮಸೀದಿ ಬಳಿಯ ಅಬ್ರಾರ್ ಮದ್ರಸ ಹಾಲ್‌ನಲ್ಲಿ ನಡೆಯಿತು.



ಡಾ.ಮಿಸ್ಬಾ ಇಸ್ಮಾಯಿಲ್ ನೇತೃತ್ವದ ತೊಕ್ಕೊಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಕೆ.ಪಿ.ಎನ್ ವೆಲ್ನೆಸ್ಸ್ ಸೆಂಟರ್ ತಂಡದ ವೈದ್ಯರಿಂದ ಆರೋಗ್ಯ ಶಿಬಿರ ಆಯೋಜನೆಗೊಂಡಿತ್ತು. ಶಿಬಿರವನ್ನು ಮುಸ್ತಫಾ ದಾರಿಮಿ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಇವರು, ಆರೋಗ್ಯವನ್ನು ಉತ್ತೇಜಿಸಲು,ನಿರ್ವಹಿಸಲು ಅಥವಾ ಪುನಃಸ್ಥಾಪಿಸಲು ಸಹಾಯ ಮಾಡುವ ಒಂದು ರೀತಿಯ ಚಿಕಿತ್ಸೆಯಾಗಿದೆ. ಎಲ್ಲಾ ಭಾಗಗಳಲ್ಲಿಯೂ ಈ ಚಿಕಿತ್ಸೆಯ ಪ್ರಯೋಜನವನ್ನು ಜನರು ಪಡೆಯುತ್ತಿದ್ದಾರೆ. ಈ ಚಿಕಿತ್ಸೆ ಬಗ್ಗೆ ಹಲವರು ಅರಿತು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

ಚಿಕಿತ್ಸೆಯ ಪ್ರಯೋಜವನ್ನು ಪಡೆದ ಫಲಾನುಭವಿಗಳು ಮಾತನಾಡಿ, ಕಠಿಣವಾದ ಕೆಲಸದಿಂದ ಸೊಂಟ ನೋವು, ಬೆನ್ನು ನೋವು ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳು ಬಾಧಿಸಿದ್ದವು. ಇದೀಗ ಈ ಚಿಕಿತ್ಸೆಯನ್ನು ಪಡೆದ ನಂತರ ಆರಾಮದಾಯಕವೆಂದೆನಿಸತ್ತಿದೆ. ಇಲ್ಲಿ ಲಭ್ಯವಿರುವ ಫಿಸಿಯೋಥೆರಪಿ, ಕೈರೋಪ್ರಾಕ್ಟಿಕ್, ಅಕ್ಯುಪಂಕ್ಚರ್, ಡ್ರೆöÊ ಕಪ್ಪಿಂಗ್ ಥೆರಪಿಗಳು ವ್ಯಾಯಾಮ, ಹಿಗ್ಗಿಸುವಿಕೆ ಮತ್ತು ಚಲನೆಗಳನ್ನು ಒಳಗೊಂಡಿದ್ದು, ದೈಹಿಕ ಚಲನೆಯನ್ನು ಸುಧಾರಿಸಲು, ಬಲವನ್ನು ಹೆಚ್ಚಿಸಲು ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಹಲವರು ಈ ಶಿಬಿರದ ಉಪಯೋಗವನ್ನು ಪಡೆದುಕೊಂಡಿದ್ದಾರೆ. ವಿವಿಧ ತಜ್ಞವಲಯದ ವೈದ್ಯರು ಗಣಮಟ್ಟದ ಚಿಕಿತ್ಸೆ ನೀಡಿ ಶಿಬಿರವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಸೋಶಿಯಲ್ ಅಚೀವ್ಮೆಂಟ್ ಫೋರಮ್ ತಲಪಾಡಿ ಸಂಸ್ಥೆಯ ಅಧ್ಯಕ್ಷರಾದ ಶೇಕ್ ಮಹಮ್ಮದ್, ಪ್ರಧಾನಕಾರ್ಯದರ್ಶಿ ಬಿಎಸ್ ಇಸ್ಮಾಯಿಲ್, ಕೋಶಾಧಿಕಾರಿ ಐಸನ್ ತಲಪಾಡಿ, ಶಬೀರ್ ತಲಪಾಡಿ, ಅಬ್ಬಾಸ್ ಝಕೀರ್,ಟಿ ಕೆ ಜಾಫರ್, ಶಫಿಕ್ ಅಬ್ಬಾಸ್, ಪೂಮಣ್ಣು ಫ್ರೆಂಡ್ಸ್ ಅಧ್ಯಕ್ಷರಾದ ಅಯ್ಯುಬ್ ಡಿ, ಸಿದ್ದಿಕ್, ಮನ್ಸೂರ್, ಮಸ್ಕೂರ್, ಬಿ ಎಸ್ ಸಮೀರ್ ಬಹರೈನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತರಾದ ಸೋಶಿಯಲ್ ಫಾರೂಕ್ ಕಾರ್ಯಕ್ರಮ ನಿರೂಪಿದರು.
ಇನ್ನು ಹೆಸರು ನೊಂದಾಯಿಸಲ್ಪಟ್ಟ ಸುಮಾರು ೪೦ಕ್ಕೂ ಅಧಿಕ ಪುರುಷರು ಮತ್ತು ಮಹಿಳೆಯರ ವಿವಿಧ ರೀತಿಯ ಚಿಕಿತ್ಸಾ ತಪಾಸಣೆ ಮಾಡಲಾಯಿತು. ಹೆಚ್ಚುವರಿಯಾಗಿ ಒಟ್ಟು ೫೦ ಜನರ ಆರೋಗ್ಯ ಚಿಕಿತ್ಸಾ ತಪಾಸಣೆ ಮಾಡಲಾಯಿತು.



