ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ನಾಟೆಕಲ್: ನಾಟೆಕಲ್ ಬಳಿ ರಿಕ್ಷಾ ಚಾಲಕ ಉಳ್ಳಾಲ ಅಳೇಕಲ ನಿವಾಸಿ ಹಿದಾಯತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಸೇರಿದಂತೆ ಇಬ್ಬರ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಹಿದಾಯತ್‍ನನ್ನು ಆ.28ರಂದು ರಾತ್ರಿ ಕಿನ್ಯ ಗ್ರಾಮದ ಸಂಕೇಶ ರಸ್ತೆಯ ಮಾಂಗಟ್ಟೆ (ಕುಕ್ಕುದಕಟ್ಟೆ) ಬಳಿ ಸೋಂಟೆಯಿಂದ ಬಡಿದು ಕಲ್ಲಿನಿಂದ ಜಜ್ಜಿ ಕೊಲೆ ನಡೆಸಿದ್ದು ಆ. 29ರಂದು ಬೆಳಗ್ಗೆ ರಿಕ್ಷಾದ ಚಾಲಕನ ಸೀಟಿನಲ್ಲಿ ಕುಳ್ಳಿರಿಸಿದ ಸ್ಥಿತಿಯಲ್ಲೇ ಶವ ಪತ್ತೆಯಾಗಿತ್ತು.

ಬಂಧಿತ ಆರೋಪಿಗಳನ್ನು ಹಿದಾಯತ್‍ನ ಮೊದಲ ಪತ್ನಿ ಉಳ್ಳಾಲ ಪೇಟೆ ನಿವಾಸಿಗಳಾದ ಫಾಝಿಲ (28) ಆಕೆಯ ಸಹೋದರ ಫಾಝಿಲ್(25), ಮದನಿನಗರದ ನಿವಾಸಿಗಳಾದ ಲುಕ್ಮಾನ್, ಇರ್ಫಾನ್, ಖುರ್ಷಿದ್, ಜಂಶೀರ್, ತನ್ವಿಝ್ ಎಂಬವರಾಗಿದ್ದು ಪ್ರಧಾನ ಆರೋಪಿಗಳಾದ ಮದನಿನಗರ ನಿವಾಸಿ ನಿಸಾರ್ ಮತ್ತು ನೌಫಾಲ್ ತಲೆಮರೆಸಿಕೊಂಡಿದ್ದಾರೆ.
ಮೂರನೇ ಮದುವೆಯಾಗಿದ್ದ ಹಿದಾಯತ್‍ನ ಪ್ರಥಮ ಪತ್ನಿ ಫಾಝಿಲ ಈ ಕೊಲೆಗೆ ಪ್ರಮುಖ ಕಾರಣವಾಗಿದ್ದು, ಫಾಝಿಲಳಿಗೆ ಎರಡನೇ ಮದುವೆಯಾದ ಬಳಿಕವೂ ಹಿದಾಯತ್ ಫಾಝಿಲಳ ಮನೆಗೆ ಬಂದು ಮಗುವಿಗೆ ಚಾಕಲೇಟ್ ನೀಡುವ ನೆಪದಲ್ಲಿ ಕಿರುಕುಳ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಹಿದಾಯತ್‍ನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಕೊಲೆ ನಡೆದ ದಿನವೂ ಫಾಝಿಲಳ ಸಹೋದರ ತನ್ನ ಸಂಬಂಧಿ ನಿಸಾರ್‍ನ ಜೊತೆಗೂಡಿ ಹಿದಾಯತ್‍ನಿಗೆ ಹೊಡೆದು ಎಚ್ಚರಿಕೆ ನೀಡುವ ಉದ್ಧೇಶದಿಂದ ಕಿನ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಥಳಿಸಿ ತೆರಳಿದ್ದರು. ಆದರೆ ಹೊಡೆತದ ಪರಿಣಾಮವಾಗಿ ಹಿದಾಯತ್ ಗಂಭೀರ ಗಾಯಗೊಂಡು ಸಾವಿಗೀಡಾಗಿದ್ದನು.
ಪೂರ್ವ ನಿಯೋಜಿತ :
ತೊಕ್ಕೊಟ್ಟು ಒಳಪೇಟೆಯ ರಿಕ್ಷಾ ಸ್ಟ್ಯಾಂಡ್‍ನಲ್ಲಿ ನಿಂತಿದ್ದ ಹಿದಾಯತ್‍ನನ್ನು ಆ. 28ರಂದು ರಾತ್ರಿ ಮದನಿನಗರ ತನ್ವೀಝ್ ನಾಟೆಕಲ್‍ಗೆ ಬಾಡಿಗೆಗೆ ಗೊತ್ತು ಮಾಡಿ ಹೊರಟಿದ್ದರು. ಬಳಿಕ ಕಿನ್ಯ ಗ್ರಾಮದ ಸಂಕೇಶ ಬಳಿಯ ಕುಕ್ಕುದಕಟ್ಟೆ ಬಳಿಯ ನಿರ್ಜನ ಪ್ರದೇಶದಲ್ಲಿ ಹಿದಾಯತ್‍ನನ್ನು ನಿಸಾರ್ ಮತ್ತು ಫಾಝಿಲ್ ನೇತೃತ್ವದ ಎಂಟು ಜನರ ತಂಡ ಸೋಂಟೆ ಮತ್ತು ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದರು.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೆÇಲೀಸ್ ಕಮಿಷನರ್ ಮುರುಗನ್, ಡಿಸಿಪಿಗಳಾದ ಶಾಂತರಾಜ್, ಸಂಜೀವ್ ಪಾಟೀಲ್, ಎಸಿಪಿ ಕಲ್ಯಾಣ ಶೆಟ್ಟಿ ನಿರ್ದೇಶನದಲ್ಲಿ ಉಳ್ಳಾಲ ಇನ್‍ಸ್ಪೆಕ್ಟರ್ ಸವಿತ್ರ ತೇಜ, ಎಸ್‍ಐಗಳಾದ ಭಾರತಿ, ರಾಜೇಂದ್ರ, ಎಎಸ್‍ಐಗಳಾದ ಮೋಹನ್‍ದಾಸ್, ವಿಜಯರಾಜ್, ಸಿಬ್ಬಂದಿಗಳಾದ ಮೋಹನ್, ರಾಜಾರಾಮ್, ದಿನೇಶ್, ರಂಜಿತ್, ಮಹೇಶ್ ಗಟ್ಟಿ, ಪ್ರಶಾಂತ್, ಲಿಂಗರಾಜು, ಶಾಂತಪ್ಪ, ಶೋನ್‍ಷಾ ಸೇರಿದಂತೆ ಇತರ ಸಿಬಂದಿಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು


