ದೇರಳಕಟ್ಟೆ, ಅ.24;ಯೆನೆಪೊಯಾ (ಡೀಮ್‌ಡ್ ಟು ಬಿ ಯುನಿವರ್ಸಿಟಿ)ಯ ಅಂಗ ಸಂಸ್ಥೆಯಾದ ಯೆನೆಪೊಯಾ ಮೆಡಿಕಲ್ ಕಾಲೇಜಿನಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ಸಮಾರಂಭವು ದೆರಳಕಟ್ಟೆ ಕ್ಯಾಂಪಸ್‌ನ ಯೆಂಡ್ಯುರನ್ಸ್ ಸಭಾಂಗಣದಲ್ಲಿ ನಡೆಯಿತು.


ಯೆನೆಪೊಯಾ ಡೀಮ್‌ಡ್ ಟು ಬಿ ಯುನಿವರ್ಸಿಟಿ ಕುಲಪತಿ ಡಾ. ಯೆನೆಪೊಯಾ ಅಬ್ದುಲ್ಲಾ ಕುಂಜಿ ಮಾತನಾಡಿ, ವೈಟ್ ಕೋಟ್ ಅನ್ನುವುದು ಶುದ್ಧತೆ, ಕರುಣೆ ಮತ್ತು ಮಾನವ ಸೇವೆಯ ಬದ್ಧತೆಯ ಸಂಕೇತವಾಗಿದೆ. ವಿದ್ಯಾರ್ಥಿಗಳು ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಪಾಲಿಸಲು ವೈದ್ಯಕೀಯ ಅಭ್ಯಾಸದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳುವಂತೆ ಕೋರಿದರು. ಪೋಷಕರಿಗೆ ಕೃತಜ್ಞತೆ ಸಲ್ಲಿಸಿದ ಅವರು ಸಮಾಜ ಸೇವೆಗೆ ತೊಡಗುವ ಭವಿಷ್ಯದ ವೈದ್ಯರನ್ನು ಬೆಳೆಸಿದ ಪೋಷಕರಿಗೆ ಧನ್ಯವಾದಗಳು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ಪರಿಗಣಿಸಲ್ಪಟ್ಟ ಉಪಕುಲಪತಿ ಡಾ. ಎಂ. ವಿಜಯಕುಮಾರ್ ಮಾತನಾಡಿ , ತಮ್ಮ 45 ವರ್ಷಗಳ ಅನುಭವವನ್ನು ಹಂಚಿಕೊAಡು ವಿದ್ಯಾರ್ಥಿಗಳು ಕೇವಲ ಪುಸ್ತಕಗಳಲ್ಲಿ ಮಾತ್ರ ಕಲಿಯಬೇಡಿ, ಜೀವನದಿಂದ ಕಲಿಯಿರಿ. ಕೇಳುವ ಕಲೆ ಕಲಿಯಿರಿ, ಸಂವಾದ ನಡೆಸಿರಿ. ಶಿಕ್ಷಣವು ಕೇವಲ ಪದವಿ ಪಡೆಯುವುದಕ್ಕೆ ಮಾತ್ರವಲ್ಲ, ಒಳ್ಳೆಯ ನಾಗರಿಕರಾಗುವುದಕ್ಕೂ ಸಹಾಯಕವಾಗಬೇಕು ಎಂದು ಹೇಳಿದರು. ಯೆನೆಪೊಯಾ ವಿಶ್ವವಿದ್ಯಾಲಯವು ಈಗ 11 ಅಂಗ ಸಂಸ್ಥೆಗಳನ್ನೊಳಗೊAಡಿದ್ದು, 33 ವರ್ಷಗಳ ಹಿಂದೆ ಸ್ಥಾಪಿತವಾದ ದಂತ ಕಾಲೇಜು ಸೇರಿದಂತೆ ವೈದ್ಯಕೀಯ, ಕಲೆ, ವಿಜ್ಞಾನ ಮತ್ತು ನಿರ್ವಹಣಾ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ 15,000 ವಿದ್ಯಾರ್ಥಿಗಳು ಹಾಗೂ 1,000ಕ್ಕೂ ಹೆಚ್ಚು ಬೋಧಕ ವೃಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಯೆನೆಪೊಯಾ 2012ರ ಎಂ.ಬಿ.ಬಿ.ಎಸ್. ಬ್ಯಾಚ್‌ನ ಹಳೆ ವಿದ್ಯಾರ್ಥಿ ಹಾಗೂ ಜನಪ್ರಿಯ ಆಸ್ಪತ್ರೆ ನಿರ್ದೇಶಕ ಡಾ. ಮೊಹಮ್ಮದ್ ನುಹ್ಮಾನ್, ತಮ್ಮ ಅನುಭವವನ್ನು ಹಂಚಿಕೊ0ಡು, ಯೆನೆಪೊಯಾ ನನ್ನ ಎರಡನೇ ಮನೆ. ಈ ಸ್ಥಳವು ಪೋಷಕರ ಮತ್ತು ಶಿಕ್ಷಕರ ಕನಸು ನನಸಾಗುವ ವೇದಿಕೆ. ವಿದ್ಯಾರ್ಥಿಗಳಿಗೆ, ವೈಟ್ ಕೋಟ್ ಗೌರವವಲ್ಲ, ಅದು ಹೊಣೆಗಾರಿಕೆಯ ಸಂಕೇತ. ವೈದ್ಯಕೀಯವು ಸಮಯಪಾಲನೆ, ಶಿಸ್ತು ಮತ್ತು ಕರುಣೆಯನ್ನು ಕಲಿಸುತ್ತದೆ,” ಎಂದು ನೆನಪಿಸಿದರು.ಶಿಕ್ಷಕರಿಗೂ, ರೋಗಿಗಳಿಗೂ ಗೌರವ ತೋರಬೇಕು ಮತ್ತು ಸದಾ ಕುತೂಹಲ, ಮಮತೆ ಹಾಗೂ ವಿನಯದಿಂದ ಇರಬೇಕು ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಉಪಕುಲಪತಿ ಡಾ. ಬಿ.ಎಚ್. ಶ್ರೀಪತಿ ರಾವ್, ರಿಜಿಸ್ಟ್ರಾರ್ ಹಾಗೂ ಪ್ರೋ -ಉಪಕುಲಪತಿ ಡಾ. ಕೆ.ಎಸ್. ಗಂಗಾಧರ ಸೋಮಯಾಜಿ ಡೀನ್ ಮೆಡಿಕಲ್ ಕಾಲೇಜಿನ ಡಾ. ಎಂ.ಎಸ್. ಮೂಸಬ್ಬ, ಪರೀಕ್ಷಾ ನಿಯಂತ್ರಕರಾದ ಡಾ. ಬಿ.ಟಿ. ನಂದೀಶ್, ಅಕಾಡೆಮಿಕ್ ಡೀನ್ ಡಾ. ಅಶ್ವಿನಿ ದತ್, ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ. ಮಾಜೀ ಜೋಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





