
ಪಾವೂರು: ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿ ಅಲ್ಲಿ ತಲುಪಿರುವುದಾಗಿ ಪತ್ನಿಗೆ ಫೋನಾಯಿಸಿದ್ದ ವ್ಯಕ್ತಿ ಈವರೆಗೂ ವಾಪಸ್ಸು ಬಾರದೇ ಇರುವುದರ ಕುರಿತು ಪತ್ನಿ ತಡವಾಗಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಪಾವೂರು ಗ್ರಾಮ ಅಕ್ಷರನಗರ ನಿವಾಸಿ ಅಮೀರ್ ಮಲಾರ್ (46) ನಾಪತ್ತೆಯಾದವರು. ಸುಮಾರು 4 ವರ್ಷಗಳ ಹಿಂದೆ 2022ರ ಜೂ.11 ರಂದು ಫೋನ್ ಮಾಡಿ ಬೆಂಗಳೂರಿಗೆ ತಲುಪಿರುವುದಾಗಿ ತಿಳಿಸಿದ್ದರು. ಬಳಿಕ ಫೋನ್ ಮಾಡದೇ ಇರುವಿಕೆಯ ಕುರಿತು ತಿಳಿಸದೇ ನಾಪತ್ತೆಯಾಗಿದ್ದಾರೆ. ಕುಟುಂಬದ ವಿಷಯ ಇನ್ನೊಬ್ಬರಿಗೆ ತಿಳಿಯುವುದು ಬೇಡ ಎಂಬ ಅಂಜಿಕೆಯಿಂದ ಹಾಗೂ ಪತಿ ಅಮೀರ್ ಇಂದಲ್ಲ ನಾಳೆ ಬರುವರೆಂಬ ವಿಶ್ವಾಸದಿಂದ ಕುಟುಂಬದವರಲ್ಲಿ ವಿಚಾರಿಸಿಕೊಂಡು ತಡವಾಗಿ ದೂರು ನೀಡಿರುವುದಾಗಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



