Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಮಹಿಳಾ ಪ್ರಾತಿನಿಧ್ಯ – ಸಮಾಜದ ಶಕ್ತಿ : ಶಮೀಮಾ ಕುತ್ತಾರು, ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್‌, ಸೌಹಾರ್ದ ದೀಪಾವಳಿ  

UllalaVaniBy UllalaVaniOctober 20, 2025Updated:October 21, 2025No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ: ಮಹಿಳಾ ಪ್ರಾತಿನಿಧ್ಯ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದೆ. “ಪ್ರಾತಿನಿಧ್ಯ” ಎಂಬ ಹೆಸರಿನಲ್ಲಿ ಕೆಲವೊಮ್ಮೆ ಮಹಿಳೆಯರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ತನ್ನ ಖುಷಿಯನ್ನು ಮುಚ್ಚಿಟ್ಟುಕೊಂಡು ಕುಟುಂಬದ ಖುಷಿಗೆ ವ್ಯಯವಾಗುವವಳು ಮಹಿಳೆ. ಮನೆಯ ಹೆಣ್ಣು ಸಂತೋಷ ಮತ್ತು ಆರೋಗ್ಯಯುತವಾಗಿದ್ದಲ್ಲಿ ಮನೆಯಲ್ಲಿನ ಪ್ರತಿಯೊಂದು ಹಬ್ಬವೂ ಪರಿಪೂರ್ಣವಾಗುತ್ತದೆ ಎಂದು ಅಖಿಲ ಭಾರತ ಬ್ಯಾರಿ ಮಹಿಳಾ ಪರಿಷತ್‌ ಅಧ್ಯಕ್ಷೆ , ಸಾಹಿತಿ ಶಮೀಮಾ ಕುತ್ತಾರ್‌ ಅಭಿಪ್ರಾಯಪಟ್ಟರು,
ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್‌ ವತಿಯಿಂದ ತೊಕ್ಕೊಟ್ಟಿನ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ  ಭಾನುವಾರ ಆಯೋಜಿಸಲಾಗಿದ್ದ  ಸೌಹಾರ್ದ ದೀಪಾವಳಿ  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಹೆಣ್ಣಿನ ಸಂವೇದನೆಗಳು, ಕಷ್ಟಗಳು ಮತ್ತು ಕನಸುಗಳು ಇವುಗಳನ್ನು ಕವಿತೆ, ಕಾದಂಬರಿ ಅಥವಾ ಬೇರೆ ಯಾವ ಕಲಾ ರೂಪದಲ್ಲಾದರೂ ಹೇಳಬಹುದು. ಮಹಿಳೆಯರು ಸಾಮಾಜಿಕ ವೇದಿಕೆಗಳಲ್ಲಿ ಚಲನಶೀಲರಾಗಿರಬೇಕಾಗಿದೆ, ಆದರೆ ಇನ್ನೂ ಕೆಲವು ಸಂಕೋಲೆಗಳು ಅವರನ್ನು ಬಂಧಿಸುತ್ತಿವೆ. ಮಹಿಳೆಯರು ಆರಾಮದಾಯಕ ಜೀವನದಿಂದ ಹೊರಬಂದು ತಮ್ಮ ಶಕ್ತಿಯನ್ನು ತೋರಿಸಬೇಕಾಗಿದೆ. ಸ್ತ್ರೀ ಗೌರವಿಸಲ್ಪಡುವ ಜಾಗದಲ್ಲೇ ದೇವರು ಇರುತ್ತಾನೆ. “ಪ್ರಾತಿನಿಧ್ಯ” ಎಂಬ ಹೆಸರಿನ ಅಡಿಯಲ್ಲಿ ಬಂಧಿಸದೆ, ಅವಕಾಶ ನೀಡುವುದು ಆಕೆಯ ಹಕ್ಕು ಎಂದು ಸಮಾಜ ಒಪ್ಪಿಕೊಳ್ಳಬೇಕು. ಪಿತೃಪ್ರಧಾನ ವ್ಯವಸ್ಥೆಯಡಿ ಮಹಿಳೆಯರು ಒಮ್ಮೆಲೇ ಹೊರಬರುವುದು ಅಸಾಧ್ಯವಾದರೂ, ಪ್ರಗತಿಯ ಹೆಜ್ಜೆ ಇಡುವುದು ಅತ್ಯಗತ್ಯ ಎಂದರು.

ಕೃಷಿ ಮತ್ತು ಹಬ್ಬಗಳ ನಂಟು
ಮಂಗಳೂರು ವಿ.ವಿ.ಯ ವಿಶ್ರಾಂತ ಉಪಕುಲಸಚಿವ ಪ್ರಭಾಕರ ನೀರುಮಾರ್ಗ ಮಾತನಾಡಿ,  “ದೇಶವು ಪ್ರಾಚೀನ ಕಾಲದಿಂದಲೇ ಕೃಷಿಕೇಂದ್ರೀಕೃತ ರಾಷ್ಟ್ರ. ಕೃಷಿಯ ಸುತ್ತ ರೂಪುಗೊಂಡ ಹಬ್ಬಗಳನ್ನು ಇಂದಿಗೂ ವಿವಿಧ ಹೆಸರಿನಲ್ಲಿ ಆಚರಿಸುತ್ತಿದ್ದೇವೆ. ಇವು ಕೃಷಿಯ ಸಂಪತ್ತುಗಳನ್ನು ಸಂರಕ್ಷಿಸುವುದರ ಜೊತೆಗೆ ಎಲ್ಲರೂ ಸೇರಿ ಹರ್ಷದಿಂದ ಆಚರಿಸುವ ಹಬ್ಬಗಳಾಗಿವೆ. ಹಬ್ಬಗಳ ನಿಜವಾದ ಅರ್ಥವನ್ನು ಅರಿತುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಮಹಿಳೆಯ ಶಕ್ತಿ
ಶಾಲಾ ಮುಖ್ಯೋಪಾಧ್ಯಾಯಿನಿ ಜಯವಂತಿ ಸೋನ್ಸ್‌ ಮಾತನಾಡಿ,   ಮಹಿಳೆಯರು ಅಡುಗೆಮನೆಗೆ ಮಾತ್ರ ಸೀಮಿತರಲ್ಲ. ಅಡುಗೆಮನೆಯಿಂದ ಹಿಡಿದು ವಿಮಾನ ಹಾರಿಸುವ ತನಕ ಎಲ್ಲ ಕ್ಷೇತ್ರಗಳಲ್ಲಿಯೂ ಅವರು ಮುಂದಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲೂ ಮಹಿಳೆಯರಿಗೆ ಉತ್ತಮ ಅವಕಾಶಗಳು ದೊರಕಿದರೂ, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ. ಪರಿಸರ ಸಂರಕ್ಷಣೆಯ ಉದ್ದೇಶದಿಂದ ಪರಿಸರಕ್ಕೆ ಪೂರಕವಾದ ಪಟಾಕಿಗಳನ್ನು ಬಳಸುವಂತೆ ಕರೆ ನೀಡಿದರು, .
ಜನಸಹಭಾಗಿತ್ವದ ಹಬ್ಬ
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಶೆಟ್ಟಿ ಬೋಳಿಯಾರ್‌ ಮಾತನಾಡಿ,   ಎಲ್ಲರ ಸಹಕಾರದಿಂದ ಅತ್ಯುತ್ತಮ ಕಾರ್ಯಕ್ರಮ ನಡೆಯಿತು. ಬೋಳಾರ–ಕೋಟೆಪುರ ಸೇತುವೆ ನಿರ್ಮಾಣಕ್ಕೆ ರೂ.೨೦೦ ಕೋಟಿ,  ಅದೇ ಪ್ರದೇಶದಲ್ಲಿ ಶನಿವಾರ, ಭಾನುವಾರ ಪ್ರವಾಸೋದ್ಯಮ ಯೋಜನೆಗೆ “ಕಾಂಡ್ಲಾ ವನ ವೀಕ್ಷಣೆಗೆ ರಸ್ತೆ ನಿರ್ಮಾಣಕ್ಕೆ ₹೬ ಕೋಟಿ ರೂ. ಮಂಜೂರಾಗಿದೆ. ಉಳ್ಳಾಲ ನಗರದ ಭೂಗತ ಕೇಬಲ್ ಯೋಜನೆಗೆ ₹೨೦೦ ಕೋಟಿ ರೂ. ಮೀಸಲಾಗಿದ್ದು, ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ.  ನಗರದ ಜನರು ಯು.ಟಿ. ಖಾದರ್ ಅವರನ್ನು ಮರೆಯುವುದು ಅಸಾಧ್ಯ. ೪೦ ಮಹಿಳೆಯರನ್ನು ವಿಧಾನಸಭೆಯ ಕಲಾಪ ವೀಕ್ಷಣೆಗೆ ಕರೆದೊಯ್ದಿದ್ದಾರೆ. ಶೀಘ್ರದಲ್ಲೇ ಮಹಿಳಾ ಸಮಾವೇಶವೂ ನಡೆಯಲಿದೆ ಎಂದರು,
ಉಳ್ಳಾಲ ನಗರ ಕಾಂಗ್ರೆಸ್‌ ಅಧ್ಯಕ್ಷ ಮುಸ್ತಾಫ ಮಾತನಾಡಿ, ನಗರ ಕಾಂಗ್ರೆಸ್‌ ಅಧ್ಯಕ್ಷೆ   ಅಮಿತಾ ಶಕ್ತಿಮೀರಿ ದುಡಿದಿದ್ದು, ಸ್ವಂತ ಖರ್ಚಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. “ಬರುವ ಬಾಲ್ ಅನ್ನು ಫೇಸ್ ಮಾಡಬೇಕು, ಬಾಲ್ ಹಾಕುವವನನ್ನು ನೋಡುವುದಲ್ಲ” ಅದುವೇ ರಾಜಕೀಯ ಎಂದರು,.
ಉದ್ಯಮಿ ಪ್ರಕಾಶ್‌ ಕುಂಪಲ ಮಾತನಾಡಿ,   ಹಿಂದೂ–ಮುಸ್ಲಿಂ–ಕ್ರೈಸ್ತರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಹಿಳೆಯರು ಖಾದರ್ ಅವರ ಬಲವಾದ ಶಕ್ತಿ ಎಂದು ಹೇಳಲಾಯಿತು. ಮಹಿಳೆಯರು ಮನೆ ಕೆಲಸದಿಂದ ಹೊರಬಂದು ಸಾಮಾಜಿಕವಾಗಿ ತೊಡಗಿಸಿಕೊಳ್ಳುವುದು ಶ್ಲಾಘನೀಯ. “ಮಡದಿ ಮಾತ್ರ ನೆಮ್ಮದಿಯನ್ನು ನೀಡುತ್ತಾಳೆ; ಮಗನೊಬ್ಬ ಮುಂದೆ ಹೋಗಬೇಕಾದರೆ ಬೆಂಬಲಿಸುವುದು ತಾಯಿ ಮಾತ್ರ,” ಎಂದು ಹೇಳಿದರು. ವರಮಹಾಲಕ್ಷ್ಮೀ ಪೂಜೆಯನ್ನು ಆಚರಿಸಿ, ಮಹಿಳಾ ಸಂಘಟನೆಯನ್ನು ಗಟ್ಟಿಗೊಳಿಸಬೇಕೆಂದು ಸಲಹೆ ನೀಡಿದರು.
ಯು.ಟಿ. ಖಾದರ್ ಗುರುಸ್ವರೂಪರಾಗಿದ್ದು, ಅವರ ಆಶೀರ್ವಾದದಿಂದ ಕಾರ್ಯಚಟುವಟಿಕೆಗಳು ನಡೆಯುತ್ತಿವೆ.  ಶಾಂತಿ ಮತ್ತು ಒಗ್ಗಟ್ಟು
ದೇಶದ ಸಂವಿಧಾನ ಮತ್ತು ಸಂಸ್ಕೃತಿಯನ್ನು ಎತ್ತಿಹಿಡಿಯುವಂತಹ ಕಾರ್ಯಕ್ರಮವಾಗಿದೆ. ಪಕ್ಷವನ್ನು ಒಗ್ಗಟ್ಟಿನಿಂದ ಬಲಪಡಿಸುವ ಕಾರ್ಯ ಮಾಡಬೇಕೆಂದು ಕರೆ ನೀಡಲಾಯಿತು. “ಯು.ಟಿ. ಖಾದರ್ ಅವರ ಮಾತುಗಳೇ  ಮಾರ್ಗದರ್ಶನ. ಸಮಾಜದಲ್ಲಿ ಶಾಂತಿ ನೆಲೆಸುವುದು ನಮ್ಮ ಉದ್ದೇಶ. ಏನು ಮಾಡಿದರೂ ಆರೋಪಗಳು ಸಹಜ. ಪಕ್ಷ ಯಾರೊಬ್ಬರ ಆಸ್ತಿಯಲ್ಲ ಎಂದು ಅವರು ಹೇಳಿದರು.

ಧಾರ್ಮಿಕ ಪರಿಷತ್‌ ಸದಸ್ಯ ಸುರೇಶ ಭಟ್ನಗರ ಮಾತನಾಡಿ,   ಬ್ಲಾಕ್ ಸಭೆಗಳಲ್ಲಿ ಖಾಲಿ ಕುರ್ಚಿಗಳಿದ್ದ ದಿನಗಳಿಂದ ಇಂದಿನಂತಹ ಯಶಸ್ವಿ ಮಹಿಳಾ–ಸಮಾವೇಶದ ವಾತಾವರಣ ನಿರ್ಮಾಣವಾಗಿರುವುದು ಸಾರ್ಥಕ ಸಾಧನೆ. ಅಲ್ಪಸಂಖ್ಯಾತರು ಸಹಭಾಗಿಯಾಗಿರುವ ಈ ಕಾರ್ಯಕ್ರಮದಿಂದ ನಗರಸಭೆ ಚುನಾವಣೆಗೆ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ. “ಅಸೂಯೆ ರೋಗದಂತೆ; ಬ್ಯಾಲೆನ್ಸ್ ಮಾಡಿಕೊಂಡು ಮುಂದುವರಿಯಿರಿ,” ಎಂದು ಸಲಹೆ ನೀಡಲಾಯಿತು.

ಮುಡಾ ಅಧ್ಯಕ್ಷ  ಸದಾಶಿವ ಉಳ್ಳಾಲ್‌ ಮಾತನಾಡಿ ಮಹಿಳಾ ಕಾಂಗ್ರೆಸ್‌ನಿಂದ ಅನೇಕರು ನಾಯಕರಾಗಿದ್ದಾರೆ. ಮಹಿಳೆಯರು ಒಗ್ಗಟ್ಟಿನಿಂದ ಮುಂದುವರಿದು ಜಾತ್ಯಾತೀತ ಪಕ್ಷದ ಸಿದ್ಧಾಂತವನ್ನು ಉಳಿಸಿ ಬೆಳೆಸಬೇಕು ಎಂದರು.
ಪ್ರಧಾನ ಕಾರ್ಯದರ್ಶಿ   ರಹಿಮಾನ್ ಕೋಡಿಜಾಲ್ ಮಾತನಾಡಿ ಮಹಿಳೆಯರು ಕೈಗೊಂಡ ಯಾವುದೇ ಕಾರ್ಯಕ್ರಮ ಯಶಸ್ವಿಯೇ ಆಗುತ್ತದೆ. ಉಳ್ಳಾಲ ಭಾಗದಲ್ಲಿ ಇಂತಹ ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿ. ಬಾಂಧವ್ಯ ಭತ್ತದ ಪೈರಿನಂತೆ ಬೆಳೆದು ಮುಂದುವರಿಯಲಿ. ಸೇವೆ ನಿಂತ ನೀರಾಗದೇ ಹರಿಯುವ ನೀರಾಗಲಿ. ಉತ್ತಮ ನಗರಸಭೆ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಬೇಕು.

 ಸಂಘಟಕಿ ನಗರ ಕಾಂಗ್ರೆಸ್‌ ಅಧ್ಯಕ್ಷ ಅಮಿತಾ ಉಳ್ಳಾಲ ಮಾತನಾಡಿ, ಶಿಸ್ತು ಮನುಷ್ಯನನ್ನು ಪರ್ಫೆಕ್ಟ್ ಆಗಿರಿಸುತ್ತದೆ. ಅದನ್ನು ಪಾಲನೆ ಮಾಡಿದರೆ ಜೀವನವೂ ಉತ್ತಮವಾಗುತ್ತದೆ. ಮಹಿಳೆಯ ಪ್ರಾತಿನಿಧ್ಯವು ಕೇವಲ ಹಕ್ಕು ಅಲ್ಲ . ಅದು ಸಮಾಜದ ಶಕ್ತಿಯ ಪ್ರತೀಕ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಲಿ, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿ, ಸಮಾಜದಲ್ಲಿ ಶಾಂತಿ ಮತ್ತು ಸಮಾನತೆ ನೆಲೆಸಲಿ ಎಂಬುದು ಈ ಕಾರ್ಯಕ್ರಮದ ಸಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ  ರಝಿಯಾ ಇಬ್ರಾಹಿಂ  ಹಿಂದುಳಿದ ವರ್ಗಗಳ ಅಧ್ಯಕ್ಷ ವಿವೇಕಾನಂದ ಸನಿಲ್‌, ಉಷಾ ಶೆಟ್ಟಿ, ಯುವ ನಾಯಕ ಯು.ಟಿ. ಫರೀದ್‌, ಮನ್ಸೂರ್‌ ಮಂಚಿಲ, ಶಾಕೀರ್‌, ಉಳ್ಳಾಲ ಬ್ಲಾಕ್ ಉಪಾಧ್ಯಕ್ಷರಾದ ದಿನೇಶ್ ರೈ ಉಳ್ಳಾಲಗುತ್ತು ಉಪಸ್ಥಿತರಿದ್ದರು.
ಅಮಿತಾ ಅಶ್ವಿನ್‌ ಸ್ವಾಗತಿಸಿದರು. ಮುಸ್ತಾಫ ಅಬ್ದುಲ್ಲಾ ವಂದಿಸಿದರು. ಸನ್ನಿಧೀ ನಿರೂಪಿಸಿದರು.” ಎಂದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಅಲ್ಪಕಾಲದ ಅಸೌಖ್ಯದಿಂದ ನಜಾತ್ ಮುಹಮ್ಮದ್ ಹಾಜಿ (87) ನಿಧನ…!!

May 9, 2026

ಹಳೆಕೋಟೆ ಶಾಲೆಯಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ

May 7, 2026

ಉಳ್ಳಾಲ ಪುರಸಭೆ ಮಾಜಿ ಉಪಾಧ್ಯಕ್ಷೆ ಭವಾನಿ ನಿಧನ

May 7, 2026

Comments are closed.

Advertise
ಸಂಪರ್ಕಿಸಿ

13ಗಂಟೆಗಳ ಶಸ್ತ್ರಚಿಕಿತ್ಸೆ; ಯೆನೆಪೋಯ ವೈದ್ಯರ ತಂಡಕ್ಕೆ ಬಿಗ್ ಸೆಲ್ಯೂಟ್

April 28, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025
suddi

ಪಂಚ ರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ಪಕ್ಷ ಪ್ರಚಂಡ ಜಯ; ವಿಜಯೋತ್ಸವ

By UllalaVaniMay 9, 20260

ಮಂಗಳೂರು ಮಂಡಲದ ವತಿಯಿಂದ ಪಂಚ ರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ಪಕ್ಷವು ಪ್ರಚಂಡ ಬಹುಮತದಿಂದ…

ಎಂಸಿಸಿ ಬ್ಯಾಂಕ್ ವತಿಯಿಂದ ಅಂತರರಾಜ್ಯ ಬ್ಯಾಂಕಿಂಗ್ ಸಂವಾದ

May 9, 2026

ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ

May 9, 2026

ಮಂಗಳೂರು ವಿವಿಯಲ್ಲಿ ‘ಕನಕ ಸ್ಮೃತಿ’ ಕಾರ್ಯಕ್ರಮ

May 9, 2026
1 2 3 … 1,904 Next
Automatic YouTube Gallery

ಈ ವಿಚಾರ ನನಗೆ ತಿಳಿಸಿದ್ದರೇ ಈ ರಾದ್ಧಾಂತವಿರುತ್ತಿರಲ್ಲಿಲ್ಲ ಎಂದ ದಿವ್ಯ ಸತೀಶ್ ಶೆಟ್ಟಿ

ಅಧ್ಯಕ್ಷರ ಮುಂದೆಯೇ ಗಲಾಟೆ ಮಾಡಿದ್ರು; ರಸ್ತೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ; ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಲ್ವೀನ್ ಡಿ'ಸೋಜರ ಮಾತಿಗೆ ಕೋಟೆಕಾರ್ ಪ.ಪಂ. ಅಧ್ಯಕ್ಷರಾದ ದಿವ್ಯ ಸತೀಶ್ ಶೆಟ್ಟಿ ಪ್ರತಿಕ್ರಿಯೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಈ ವಿಚಾರ ನನಗೆ ತಿಳಿಸಿದ್ದರೇ ಈ ರಾದ್ಧಾಂತವಿರುತ್ತಿರಲ್ಲಿಲ್ಲ ಎಂದ ದಿವ್ಯ ಸತೀಶ್ ಶೆಟ್ಟಿ
Now Playing
ಈ ವಿಚಾರ ನನಗೆ ತಿಳಿಸಿದ್ದರೇ ಈ ರಾದ್ಧಾಂತವಿರುತ್ತಿರಲ್ಲಿಲ್ಲ ಎಂದ ದಿವ್ಯ ಸತೀಶ್ ಶೆಟ್ಟಿ
ಅಧ್ಯಕ್ಷರ ಮುಂದೆಯೇ ಗಲಾಟೆ ಮಾಡಿದ್ರು; ರಸ್ತೆ ವಿಚಾರದಲ್ಲಿ ರಾಜಕೀಯ ...
ಅಧ್ಯಕ್ಷರ ಮುಂದೆಯೇ ಗಲಾಟೆ ಮಾಡಿದ್ರು; ರಸ್ತೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ; ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಲ್ವೀನ್ ಡಿ'ಸೋಜರ ಮಾತಿಗೆ ಕೋಟೆಕಾರ್ ಪ.ಪಂ. ಅಧ್ಯಕ್ಷರಾದ ದಿವ್ಯ ಸತೀಶ್ ಶೆಟ್ಟಿ ಪ್ರತಿಕ್ರಿಯೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮಡ್ಯಾರ್: ಎರಡು ಬಣಗಳಾದ ಸ್ಥಳೀಯರು; ಆರೋಪ-ಪ್ರತ್ಯಾರೋಪಗಳು
Now Playing
ಮಡ್ಯಾರ್: ಎರಡು ಬಣಗಳಾದ ಸ್ಥಳೀಯರು; ಆರೋಪ-ಪ್ರತ್ಯಾರೋಪಗಳು
ರಾಮಾಶ್ರಯ ಕಾಂಕ್ರೀಟ್ ರಸ್ತೆ ಕಾಮಗಾರಿ ಗೊಂದಲ; ಕೋಟೆಕಾರ್ ಪ.ಪಂ. ಅಧ್ಯಕ್ಷರ ...
ರಾಮಾಶ್ರಯ ಕಾಂಕ್ರೀಟ್ ರಸ್ತೆ ಕಾಮಗಾರಿ ಗೊಂದಲ; ಕೋಟೆಕಾರ್ ಪ.ಪಂ. ಅಧ್ಯಕ್ಷರ ಸಮ್ಮುಖದಲ್ಲೇ ಗಲಾಟೆ-ಗದ್ದಲ
ನಿಜ ಸಂಗತಿ ಬಿಚ್ಚಿಟ್ಟ 11ನೇ ವಾರ್ಡ್ ಕೌನ್ಸಿಲರ್..!!


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version