ಕರ್ನಾಟಕ ಸರ್ಕಾರದ ಇಂಧನ ಸಚಿವರಾದ ಕೆ ಜೆ ಜಾರ್ಜ್ ರವರು ಬೋಂದೆಲ್ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು. ವಂದನೀಯ ಧರ್ಮ ಗುರು ಪೀಟರ್ ಗೊನ್ಸಲ್ವಿಸ್ ಸ್ವಾಗತತಿಸಿ ಅವರಿಗೆ ವಿಶೇಷ ಪ್ರಾಥನೆ ಸಲ್ಲಿಸಲಾಯಿತು. ವಂದನೀಯ ಧರ್ಮ ಗುರು ಲಾರೆನ್ಸ್ ಕುತಿನ್ಹ ಪಾಲನ ಮಂಡಳಿ ಉಪಾಧ್ಯಕ್ಷ ಜಾನ್ ಡಿಸಿಲ್ವ ಮತ್ತು ಸದಸ್ಯರಾದ ರೂಡಿ ಪಿಂಟೋರವರು ಅವರಿಗೆ ಶಾಲೂ, ಹೂ ಗುಚ್ಚ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐ ವನ್ ಡಿಸೋಜಾ, ಮಾಜಿ ಶಾಸಕರಾದ ಜೆ ಆರ್ ಲೋಬೊ, ಮಂಗಳೂರು ವಿದ್ಯುತ್ ನಿಗಮ ಮಂಡಳಿ ಅಧ್ಯಕ್ಷ ಹರೀಶ್ ಕುಮಾರ್, ರಚನಾ ಅಧ್ಯಕ್ಷ ಜಾನ್ ಮೊಂತೆರೋ ಮತ್ತು ಇನ್ನಿತರು ಉಪಸ್ಥಿತರಿದ್ದರು


