ತಿರುವನಂತಪುರಂ : ರಾಜ್ಯದಲ್ಲಿ ಇಂದು ಸಹ ಸಿಡಿಲು, ಮಿಂಚು ಸಹಿತ ಮಳೆ ಕಾಣಿಸಿಕೊಳ್ಳಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪತ್ತನಂತಿಟ್ಟ ಇಡುಕ್ಕಿ ಪಾಲಕ್ಕಾಡ್, ಮಲಪ್ಪುರಂ, ವಯನಾಡ್ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯ ಜತೆ ಸಿಡಿಲು, ಮಿಂಚು, 30 ರಿಂದ 40 ಕಿ.ಮೀ.ವೇಗದ ಗಾಳಿಯೂ ಕಾಣಿಸಿಕೊಳ್ಳಲಿದೆ. ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ, ಮಳೆ ಇರಲಿದೆ.


