ಉಳ್ಳಾಲ : ಬೀದಿ ದೀಪಗಳು ಇಲ್ಲದೇ ತಲಪಾಡಿ ಭಾಗದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ಮುಂದಿಟ್ಟು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೋಷಿಯಲ್ ಅಚ್ಚೀವ್ಮೆಂಟ್ ಫಾರಮ್ ತಲಪಾಡಿ ಇದರ ವತಿಯಿಂದ ಮನವಿ ಸಲ್ಲಿಸಲಾಯಿತು.
ಹತ್ತು ವರ್ಷವಾದರೂ ಅಳವಡಿಸದ ಬೀದಿ ದೀಪ ಇಲ್ಲದೆ ನಿರಂತರವಾಗಿ ಅಫಘಾತಗಳು ಸಂಭವಿಸುತ್ತಲೇ ಇದೆ. ಈಗಾಗಲೇ ಮೂರು ಜೀವಗಳು ಬಲಿಯಾಗಿದೆ. ಈ ಕೂಡಲೇ ಬೀದಿ ದೀಪ ಅಳವಡಿಸಿ ತಲಪಾಡಿಯ ನಾಗರಿಕರ ಜೀವಗಳನ್ನು ಉಳಿಸಬೇಕಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಅಧ್ಯಕ್ಷರಾದ ಶೇಕ್ ಮಹಮ್ಮದ್, ಪ್ರ.ಕಾರ್ಯದರ್ಶಿ ಬಿ.ಎಸ್.ಇಸ್ಮಾಯಿಲ್, ಕೋಶಾಧಿಕಾರಿ ಐಸನ್ ತಲಪಾಡಿ, ಝಾಕಿರ್ ತಲಪಾಡಿ.ಟಿ.ಎಸ್, ಹನೀಫ್, ಶಬೀರ್ ತಲಪಾಡಿ ಉಪಸ್ಥಿತರಿದ್ದರು.

