ಕುತ್ತಾರು : ದಕ್ಷಿಣ ಕನ್ನಡದ ಆಟೋ ರಿಕ್ಷಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಸುಪ್ರೀಮ್ ಬಜಾಜ್, ಇದೀಗ ಕುತ್ತಾರಿನಲ್ಲಿ ತನ್ನ ಹೊಸ ಮಾರಾಟ ಮತ್ತು ಸರ್ವಿಸ್ ಸೆಂಟರ್ ಆರಂಭಿಸುತ್ತಿದೆ.
ಈ ಹೊಸ ಕೇಂದ್ರದ ಆರಂಭದಿಂದ ದೇರಳಕಟ್ಟೆ, ಮುಡಿಪು, ಕೊಣಾಜೆ, ಹರೇಕಳ, ಪಾವೂರು, ಬೀರಿ, ಮಡ್ಯಾರು, ತಲಪಾಡಿ, ತೊಕ್ಕೊಟ್ಟು, ಎಲಿಯಾರು ಪದವು, ಮಂಜನಾಡಿ, ಕಲ್ಕಟ್ಟ, ಕೈರಂಗಳ, ಸಜಿಪು ಹಾಗೂ ಸಜಿಪು ನಡು ಭಾಗದ ರಿಕ್ಷಾ ಚಾಲಕರಿಗೆ ಮಹತ್ತರವಾದ ಅನುಕೂಲ ಸಿಗಲಿದೆ.


ಹಿಂದಿನಂತೆ ಮಂಗಳೂರಿಗೆ ತೆರಳಿ ದಿನಪೂರ್ತಿ ಸಮಯ ಕಳೆಯಬೇಕಾದ ಅವಶ್ಯಕತೆಯಿಲ್ಲದೆ, ಆಟೋ ಖರೀದಿ ಹಾಗೂ ಸರ್ವಿಸ್ ಸೌಲಭ್ಯ ಈಗ ಸ್ಥಳೀಯ ಮಟ್ಟದಲ್ಲೇ ಲಭ್ಯವಾಗಲಿದೆ. ಇದರಿಂದ ಚಾಲಕರು ತಮ್ಮ ಅಮೂಲ್ಯವಾದ ಸಮಯವನ್ನು ಉಳಿಸಿಕೊಂಡು ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗುತ್ತದೆ.
ಸುಪ್ರೀಮ್ ಬಜಾಜ್ ತನ್ನ ಗುಣಮಟ್ಟದ ವಾಹನಗಳು ಹಾಗೂ ವಿಶ್ವಾಸಾರ್ಹ ಸೇವೆಯಿಂದಲೇ ಈಗಾಗಲೇ ಆಟೋ ರಿಕ್ಷಾ ಜಗತ್ತಿನಲ್ಲಿ ಖ್ಯಾತಿ ಪಡೆದಿದೆ. ಕುತ್ತಾರಿನಲ್ಲಿ ಆರಂಭವಾಗುತ್ತಿರುವ ಈ ಶೋರೂಮ್ ಮೂಲಕ ಸ್ಥಳೀಯ ಚಾಲಕರು ಹೊಸ ಮಾದರಿಯ ಬಜಾಜ್ ಆಟೋ ರಿಕ್ಷಾ ಮಾದರಿಗಳನ್ನು ನೇರವಾಗಿ ವೀಕ್ಷಿಸಿ ಖರೀದಿಸುವ ಅವಕಾಶವಿದೆ. ತ್ವರಿತ ಹಾಗೂ ನಿಖರವಾದ ತಾಂತ್ರಿಕ ಸೇವೆ, ಮೂಲ ಬಜಾಜ್ ಸ್ಪೇರ್ ಪಾರ್ಟ್ಸ್ ಲಭ್ಯತೆ, ಗ್ರಾಹಕ ಸ್ನೇಹಿ ಮಾರಾಟ ಹಾಗೂ ಸೇವಾ ವ್ಯವಸ್ಥೆ, ಎಲ್ಲವನ್ನು ಒಂದೇ ಛಾವಣಿಯಲ್ಲಿ ಪಡೆಯಲಿದ್ದಾರೆ. ಸುಪ್ರೀಮ್ ಬಜಾಜ್ ಕುತ್ತಾರು ಕೇವಲ ಶೋರೂಮ್ ಆಗಿರದೆ, ಆಟೋ ರಿಕ್ಷಾ ಚಾಲಕರಿಗೆ ತಾಂತ್ರಿಕ ಬೆಂಬಲ, ಮಾರ್ಗದರ್ಶನ ಮತ್ತು ವಿಶ್ವಾಸದ ಕೇಂದ್ರವಾಗಿಯೂ ಪರಿಣಮಿಸಲಿದೆ.




