ಉಳ್ಳಾಲ : ಶ್ರೀ ಉಮಾಮಹೇಶ್ವರಿ ದೇವಸ್ಥಾನ ಉಮಾಪುರಿ ಕಾಪಿಕಾಡ್ ಕ್ಷೇತ್ರದಲ್ಲಿ ಸೆ. 22 ಸೋಮವಾರದಿಂದ ಅ.1 ಬುಧವಾರದ ವರೆಗೆ ಕುಂಟಾರು ರವೀಶ್ ತಂತ್ರಿಗಳ ಮಾರ್ಗದರ್ಶನದಲ್ಲಿ ನವರಾತ್ರಿ ಉತ್ಸವವು ಅತ್ಯಂತ ಸಂಭ್ರಮದಿಂದ ನಡೆಯಲಿದೆ . ಸೆ 22 ಸೋಮವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ನವರಾತ್ರಿ ಉತ್ಸವದ ನಂದಾದೀಪ ಪ್ರಜ್ವಲನೆ , ಗಣಪತಿ ಹವನ, ನಾಗತಂಬಿಲ, ಪರಿವಾರ ದೈವಗಳಿಗೆ ತಂಬಿಲ, ಧಾನ್ಯಲಕ್ಷ್ಮೀ ಪೂಜೆ, ಭಕ್ತಾದಿಗಳಿಗೆ ತೆನೆ ವಿತರಣೆ, ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ 8 ಗಂಟೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.


ಸೆ. 26 ಶುಕ್ರವಾರ ಬೆಳಿಗ್ಗೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ಸಾಮೂಹಿಕ ಆಶ್ಲೇಷ ಬಲಿ ಪೂಜೆ, ಸಾಮೂಹಿಕ ಆಶ್ಲೇಷ ಪೂಜೆ ಸೆ .29 ರ ಸೋಮವಾದಂದು ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಸಾಮೂಹಿಕ ಚಂಡಿಕಾಯಾಗ ಜರಗಲಿದೆ. ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಅ.1 ಬುಧವಾರ ಆಯುಧ ಪೂಜಾ ದಿವಸದಂದು ಬೆಳಿಗ್ಗೆ ಶ್ರೀ ದೇವರಿಗೆ ರಂಗ ಪೂಜೆ 8.00ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ. 7.30ರಿಂದ ಸಾಮೂಹಿಕ ವಾಹನ ಪೂಜಾ ಸೇವೆ ಜರಗಲಿರುವುದು. ಅ. 2 ಗುರುವಾರ ಬೆಳಿಗ್ಗೆ ಗಂಟೆ 9.00 ರಿಂದ ವಿದ್ಯಾರಂಭ ನಡೆಯಲಿದೆ.
ಸೆ. 22.ರಿಂದ-ಅ.1 ಪ್ರತಿನಿತ್ಯ ಬೆಳಿಗ್ಗೆ 7.30ಕ್ಕೆ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ,
ಶ್ರೀ ದೇವರಿಗೆ ರಂಗ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

