ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ನಿಯಮಿತ .ಕಲ್ಲಡ್ಕ ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾ ಭವನದಲ್ಲಿ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕೆ.ಪದ್ಮನಾಭ ಕೊಟ್ಟಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು 2024-25ನೇ ಆರ್ಥಿಕ ವರ್ಷದಲ್ಲಿ ಲೆಕ್ಕಪರಿಶೋಧನೆಯಂತೆ ರೂ. 486 ಕೋಟಿ ವ್ಯವಹಾರ ನಡೆಸಿ ಆಡಿಟ್ ವರ್ಗೀಕರಣದಲ್ಲಿ “ಎ” ಗ್ರೇಡ್ ಹೊಂದಿ ರೂ.1,55,11,828.70 ಲಾಭಗಳಿಸಿರುತ್ತದೆ ಎಂದು ಹೇಳಿದರು. ಸಂಘದ ಸದಸ್ಯರಿಗೆ 12% ಡಿವಿಡೆಂಡ್ ನೀಡುವುದೆಂದು ಸಂಘವು ಘೋಷಿಸಲಾಯಿತು.

ಸಂಘವು 2024-2025ನೇ ಆರ್ಥಿಕ ವರ್ಷದಲ್ಲಿ 1495 ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ ರೂ. 24.11 ಕೋಟಿ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡು ಸಾಲವನ್ನು ವಿತರಿಸಿದೆ. 164 ಸದಸ್ಯರಿಗೆ 3% ಬಡ್ಡಿಯಲ್ಲಿ ಕೃಷಿ ಅಭಿವೃದ್ಧಿಗಾಗಿ ರೂ 4.97 ಕೋಟಿ ಸಾಲ, ವಾಹನ ಖರೀದಿ ಸಾಲ, 8.2ಲಕ್ಷ.34 ಸದಸ್ಯರಿಗೆ, ಪಶುಗಳ ದೈನಂದಿನ ನಿರ್ವಹಣೆಗಾಗಿ ಶೂನ್ಯ ಬಡ್ಡಿದರದಲ್ಲಿ 25 ಲಕ್ಷ ಸಾಲ, 18 ಸದಸ್ಯರಿಗೆ ರೂ. 1.50 ಕೋಟಿ ಗೃಹ ನಿರ್ಮಾಣ ಸಾಲ ವಿತರಿಸಿರುತ್ತದೆ. 5372 ಸದಸ್ಯರಿಗೆ ಆಭರಣ ಈಡಿನ ಸಾಲ ರೂ. 26.42 ಕೋಟಿ ವಿತರಿಸಿರುತ್ತದೆ. ಪ್ರಸ್ತುತ ಸಂಘದಲ್ಲಿ ವಿವಿಧ ಉದ್ದೇಶಗಳಿಗಾಗಿ ಹಾಗೂ ಇತರ ಸಾಲವಾಗಿ 1711 ಸದಸ್ಯರಿಗೆ 23.36 ಕೋಟಿ ಸಾಲ ವಿತರಿಸಲಾಗಿದೆ.. ಒಟ್ಟು 8796 ಸದಸ್ಯರಿಗೆ 81ಕೋಟಿ ಸಾಲ ವಿತರಿಸಿದೆ. ಹವಾಮಾನ ಆಧಾರಿತ ಬೆಳೆವಿಮೆ 1543 ಸದಸ್ಯರಿಗೆ 57.50ಲಕ್ಷ ಮೊತ್ತ ಸಂಘದಿಂದ ಪಾವತಿಸಲಾಗಿದೆ.ಯಶಸ್ವಿನಿ ವಿಮಾ ಯೋಜನೆ 834 ಕುಟುಂಬದ 3267 ಸದಸ್ಯರಿಗೆ 4 ಲಕ್ಷ ವಿಮಾ ಮೊತ್ತ ಪಾವತಿಸಿ ನೋಂದಣಿ ಮಾಡಲಾಗಿದೆ.
ಸಂಘದ ವ್ಯವಹಾರ ಹಾಗೂ ಕಾರ್ಯಯೋಜನೆಯ ಅನುಷ್ಠಾನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದ್ದಕ್ಕಾಗಿ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2015 ರಿಂದ ಸತತವಾಗಿ 11 ವರ್ಷದಲ್ಲಿ ಉತ್ತಮ ಸಹಕಾರ ಸಂಘವೆಂದು ಗುರುತಿಸಿ, ಸನ್ಮಾನ, ಪ್ರಶಸ್ತಿ ಪತ್ರ ಹಾಗೂ ಫಲಕ ನೀಡಿ ಗೌರವಿಸಿರುತ್ತಾರೆ. ಸಂಘದ ಅಭಿವೃದ್ಧಿಗೆ ಸಹಕರಿಸಿದ ಆಡಳಿತ ಮಂಡಳಿಯ ಸದಸ್ಯರು , ಮತ್ತು ನೌಕರ ವೃಂದಕ್ಕೆ, SCDCC ಬ್ಯಾಂಕ್ ನ ಅಧ್ಯಕ್ಷರು, SCDCC ಬ್ಯಾಂಕ್ ಕಲ್ಲಡ್ಕ ಶಾಖಾ ವ್ಯವಸ್ಥಾಪಕರು, ಮೇಲ್ವಿಚಾರಕರಿಗೆ, ವಿವಿಧ ಸಹಕಾರಗಳನ್ನು ನೀಡಿದ ಸಂಘದ ಎಲ್ಲಾ ಸದಸ್ಯರಿಗೆ ಹಾಗೂ ಠೇವಣಿದಾರರಿಗೆ, ಆಭರಣ ಈಡಿಟ್ಟ ಸದಸ್ಯರಿಗೆ ಧನ್ಯವಾದ ನೀಡಿದರು.
ಸಂಘದ ಕಾರ್ಯವ್ಯಾಪ್ತಿಯು ಗೋಳ್ತಮಜಲು, ಅಮ್ಟೂರು, ಬಾಳ್ತಿಲ, ವೀರಕಂಭ, ಬೋಳಂತೂರು ಹೀಗೆ 5 ಗ್ರಾಮಗಳನ್ನೊಳಗೊಂಡಿರುತ್ತದೆ. ಕಲ್ಲಡ್ಕ, ವೀರಕಂಭ, ಬೋಳಂತೂರು ಮತ್ತು ಅಮ್ಟೂರುಗಳಲ್ಲಿ ಶಾಖೆಗಳನ್ನು ಹೊಂದಿರುತ್ತದೆ. ಸಂಘವು ತನ್ನ ಕಾರ್ಯವ್ಯಾಪ್ತಿಯ ಅರ್ಹ ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ಎಂ.ಕೆ.ಸಿ.ಸಿ. ಸಾಲ ಹಾಗೂ ಹಸು ಘಟಕ ನಿರ್ವಹಣೆಗಾಗಿ ಸಾಲ, ಕೃಷಿ ಅಭಿವೃದ್ಧಿಗಾಗಿ 3% ಬಡ್ಡಿದರದಲ್ಲಿ ಮಧ್ಯಮಾವಧಿ ಸಾಲ ಹಾಗೂ ಇನ್ನಿತರ ಸಾಲಗಳನ್ನು ನೀಡುತ್ತಿದೆ. ಪಡಿತರ ಕಾರ್ಡುದಾರರಿಗೆ ನ್ಯಾಯಬೆಲೆ ಅಂಗಡಿ ಮುಖಾಂತರ ಆಹಾರ ಸಾಮಾಗ್ರಿಗಳನ್ನು ವಿತರಿಸುತ್ತಿದೆ. ಅಡಿಕೆ ಬೆಳೆಗಾರರ ಅನುಕೂಲಕ್ಕಾಗಿ ವಾರದಲ್ಲಿ ರಜಾ ದಿನಗಳನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಕ್ಯಾಂಪ್ಕೋ ಸಹಯೋಗದೊಂದಿಗೆ ಅಡಿಕೆಯನ್ನು ಖರೀದಿಸಲಾಗುತ್ತಿದೆ. ಅಡಿಕೆ ಬೆಳೆಗಾರ ಸದಸ್ಯರು ಸಂಘದ ಮುಖಾಂತರ ಕ್ಯಾಂಪ್ಕೋ ಸಂಸ್ಥೆಗೆ ಅಡಿಕೆ ಮಾರಾಟ ಮಾಡಿ ಮುಂದೆಯೂ ಇದರ ಸದುಪಯೋಗ ಪಡೆದುಕೊಂಡು ಸಂಘದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ತಿಳಿಸಿದರು.
ಸಂಘದ ಅಭಿವೃದ್ಧಿ ಮತ್ತು ಸದಸ್ಯರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಅಳವಡಿಸಿಕೊಳ್ಳಲಾಗಿದ್ದು ಅದರಂತೆ ಕಾರ್ಯವ್ಯಾಪ್ತಿಯ ಗ್ರಾಮಸ್ಥರನ್ನು ಸದಸ್ಯರನ್ನಾಗಿ ನೋಂದಾಯಿಸಿ, ಜನ ಸಾಮಾನ್ಯರ ಆರ್ಥಿಕ ಅವಶ್ಯಕತೆಗಳಿಗೆ ಸ್ಪಂದಿಸುವ ಕಾರ್ಯಕ್ರಮವನ್ನು ಕೈಗೊಂಡಿರುತ್ತೇವೆ ಎಂದು ತಿಳಿಸಿದರು.
ಎಂ.ಕಾಮ್ ಹಾಗೂ ಎಂ.ಬಿ.ಎ ಯಲ್ಲಿ ರ‍್ಯಾಂಕ್ ವಿಜೇತರಾದ ವಾಣಿ ಶ್ರೀ,ಲಿಖಿತಾ ಜಿ.ಎನ್, ಹಾಗೂ ಅಟಲ್ ಟಿಂಕರಿಂಗ ಪ್ರಯೋಗಲಾಯದ ಸೃಜನಾತ್ಮಕ ವೇದಿಕೆ ಮೂಲಕ ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಾದ ಜಗನ್ ಹಾಗೂ ಶಿವನ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿ.ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಉತ್ತಮ ಅಂಕ ಪಡೆದು ಉನ್ನತ ಶಿಕ್ಷಣ ಪಡೆಯುವ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.
ಆಡಳಿತ ಮಂಡಳಿಯ ನಿರ್ದೇಶಕರಾದ ಚಂದ್ರಶೇಖರ ಟೈಲರ್, ಮಹಾಬಲ ಸಾಲ್ಯಾನ್, ಸುರೇಶ್ ಶೆಟ್ಟಿ, ಕೊರಗಪ್ಪ ಗೌಡ, ಪ್ರಭಾಕರ ಶೆಟ್ಟಿ ಬಿ.ಎನ್, ಜಯರಾಮ ರೈ, , ವಿಜಯಪ್ರಕಾಶ, ಅಜಿತ್ ಎಂ.ಕೊರಗಪ್ಪ ನಾಯ್ಕ, ನೋಣಯ್ಯ ಎಂ.ಆರ್ ಉಪಸ್ಥಿತರಿದ್ದರು. ಮುಖ್ಯನಿರ್ವಹಣಾಧಿಕಾರಿ ಗೋಪಾಲ ಕೆ.ವಾರ್ಷಿಕ ವರದಿ ವಾಚಿಸಿದರು. ನಂದನ್ ರೈ ಅವರು ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು.
ಸಂಘದ ಸಿಬ್ಬಂದಿಗಳಾದ ವನಿತಾ, ಚಿದಾನಂದ ಅಮೀನ್, ಪ್ರಮಿತ್ ಶೆಟ್ಟಿ ಕೆ. ದಿನೇಶ್, ಯೋಗೀಶ್ ಎಸ್, ಪವಿತ್ರ, ರಾಜೇಶ್ ಕೆ.ಓಬಯ್ಯ,ಮೋಹನ್, ಸೇಸಪ್ಪ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಉಪಾಧ್ಯಕ್ಷ ಲೋಕಾನಂದ ಅವರು ಸ್ವಾಗತಿಸಿ, ನಿರ್ದೇಶಕಿ ಅರುಣಾ ವಿ.ಭಟ್ ವಂದಿಸಿದರು
ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿದರು.

