ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಸೋಮೇಶ್ವರ : ಕೋಟೆಕಾರ್ ಸಮೀಪದ ಸೋಮೇಶ್ವರ(ಉಳ್ಳಾಲ) ರೈಲ್ವೇ ಸ್ಟೇಷನ್ ಬಳಿಯ ಪಾಳುಬಿದ್ದ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಸೇರಿದಂತೆ ಮೂವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ದಾಳಿ ಸಂದರ್ಭದಲ್ಲಿ ಇಬ್ಬರು ಪರಾರಿಯಾಗಿದ್ದಾರೆ. ದಾಳಿ ವೇಳೆ ಉಳ್ಳಾಲ ಪೊಲೀಸ್ ಕಾನ್‍ಸ್ಟೇಬಲ್ ಮಹೇಶ್ ಗಟ್ಟಿ ಎಂಬವರಿಗೆ ಗಾಯವಾಗಿದೆ.
ಬಂಧಿತರನ್ನು ನ್ಯೂಉಚ್ಚಿಲ ನಿವಾಸಿ ರಾಕೇಶ್(34), ಬೀರಿ ನಿವಾಸಿ ಮಹಮ್ಮದ್ ಸಿರಾಜ್(30) ಹಾಗೂ ಅಸೈಗೋಳಿ ನಿವಾಸಿ 35ರ ಹರೆಯದ ವಿವಾಹಿತೆ ಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ದಾಳಿ ಸಂಬಂಧ ಕೋಟೆಕಾರ್ ಬೀರಿ ನಿವಾಸಿ ಅಬ್ಬಾಸ್ ಮತ್ತು ಉಳ್ಳಾಲ ಮುಕ್ಕಚ್ಚೇರಿಯ ಮುಕ್ಕಚ್ಚೇರಿಯ ಜಾಫರ್ ಎಂಬವರು ಪರಾರಿಯಾಗಿದ್ದಾರೆ.
ಸೋಮೇಶ್ವರದಲ್ಲಿರುವ ಉಳ್ಳಾಲ ರೈಲ್ವೇ ನಿಲ್ದಾಣ ಸಮೀಪದ ಪಾಳುಬಿದ್ದ ಮನೆಯಲ್ಲಿ ಗ್ಲಾಂಬ್ಲಿಂಗ್ ನಡೆಯುತ್ತಿದೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿಯಂತೆ ಉಳ್ಳಾಲ ಎಸ್.ಐ ಭಾರತಿ ಮತ್ತು ಕಾನ್‍ಸ್ಟೇಬಲ್ ಮಹೇಶ್ ಗಟ್ಟಿ ಬಂದಿದ್ದು, ಬಳಿಕ ಇತರ ಪೊಲೀಸರನ್ನು ಕರೆಸಿದ್ದು, ಈ ಸಂದರ್ಭದಲ್ಲಿ ಪೊಲೀಸರನ್ನು ನೋಡಿ ರಾಕೇಶ್ ಓಡಲು ಯತ್ನಿಸಿದಾಗ ಮಹೇಶ್ ಹಿಡಯಲು ಹೋಗಿದ್ದು, ಇತರ ಇಬ್ಬರು ಕಂಪೌಂಡ್ ಹಾರಿ ಪರಾರಿಯಾಗಿದ್ದಾರೆ ಮಹಿಳೆ ಮತ್ತು ಸಿರಾಜ್‍ನನ್ನು ಎಸ್‍ಐ ಭಾರತಿ ಸ್ಥಳೀಯರ ಸಹಕಾರದಿಂದ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾನ್‍ಸ್ಟೇಬಲ್‍ಗೆ ಗಾಯ : ಪ್ರಮುಖ ಆರೋಪಿ ರಾಕೇಶ್ ಪೊಲೀಸರನ್ನು ನೋಡುತಿದ್ದಂತೆ ಪರಾರಿಯಾಗಲು ಯತ್ನಿಸಿ ಕಂಪೌಂಡ್ ಹಾರಿದ್ದು ಮಹೇಶ್ ರಾಕೇಶ್‍ನನ್ನು ಹಿಂಬಾಲಿಸಿ ಹಿಡಿದಿದ್ದು, ಈ ಸಂದರ್ಭದಲ್ಲಿ ಬಲಿಷ್ಠನಾಗಿದ್ದ ರಾಕೇಶ್ ಮಹೇಶ್‍ರಿಂದ ತಪ್ಪಿಸಲು ಹರಸಾಹಸ ನಡೆಸಿದರೂ ಮಹೇಶ್ ಹಿಡಿತದಿಂದ ತಪ್ಪಿಸಿಕೊಳ್ಳಲು ವಿಫಲನಾಗಿದ್ದು, ಬಳಿಕ ಅತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಹೇಶ್ ಕೈಗೆ ಗಾಯವಾಗಿದ್ದು, ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






