ಮಂಗಳೂರು: ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಅಡ್ವಾನ್ಸ್ಡ್ ಕಂಪ್ಯೂಟಿ0ಗ್ ವಿಭಾಗದ ವಿದ್ಯಾರ್ಥಿ ಸಂಘಟನೆಗಳಾದ ಸಿಗ್ಮಾ ಸ್ಕ್ವೇರ್ಡ್ ಮತ್ತು ಅನಾಲಿಟಿಕಾ ಸಂಸ್ಥೆಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು.



ಡೇಟಾ ವಿಶ್ಲೇಷಣೆಯು ನೈಜ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಬಹಳಷ್ಟು ಸಹಕಾರಿ. ಉತ್ಸಾಹದಿಂದ ಮತ್ತು ಹೊಣೆಗಾರಿಕೆಯೊಂದಿಗೆ ಈ ಕ್ಷೇತ್ರವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಡಾ. ವಿಷ್ಣು ವಿನೇಕರ್ ಹೇಳಿದರು.
ಎಸ್‌ಐಟಿ ನಿರ್ದೇಶಕರಾದ ಫಾ. ಡೆನ್ಸಿಲ್ ಅವರು ಅಧ್ಯಕ್ಷೀಯ ಭಾಷಣದಲ್ಲಿ, ಡೇಟಾ ಅನಾಲಿಟಿಕ್ಸ್ ನ ಯುಗ ಬಹಳಷ್ಟು ಮಹತ್ವವನ್ನು ಹೊಂದಿದೆ. ವಿದ್ಯಾರ್ಥಿ ನಾಯಕರಿಗೆ ಶಿಸ್ತಿನಿಂದ, ನೈತಿಕ ಉದ್ದೇಶದೊಂದಿಗೆ ಕಾರ್ಯನಿರ್ವಹಿಸಬೇಕಿದೆ ಎಂದರು.
ಅಡ್ವಾನ್ಸ್ಡ್ ಕಂಪ್ಯೂಟಿ0ಗ್ ವಿಭಾಗದ ಮುಖ್ಯಸ್ಥೆ ಡಾ. ಜಯತಿ ಭದ್ರಾ ಸ್ವಾಗತಿಸಿದರು. ಐರೆನ್ ಲಾರೆನ್ಸ್ ಡಿ’ಲಿಮಾ ಅತಿಥಿಗಳ ಪರಿಚಯಿಸಿದರು. ಸಿಗ್ಮಾ ಸ್ಕ್ವೇರ್ಡ್ ಅಧ್ಯಕ್ಷ ಅಶ್ವಿನ್ ವಂದಿಸಿದರು.


