Site icon Ullalavani

ಸೈಂಟ್ ಜೋಸೆಫ್ ವಿವಿ, ಬೆಂಗಳೂರು ಅಡ್ವಾನ್ಸ್ಡ್ ಕಂಪ್ಯೂಟಿ0ಗ್ ವಿಭಾಗ – ಸಿಗ್ಮಾ ಸ್ಕ್ವೇರ್ಡ್ ಮತ್ತು ಅನಾಲಿಟಿಕಾ ಸಂಸ್ಥೆಗಳ ಪದಗ್ರಹಣ ಸಮಾರಂಭ

ಮಂಗಳೂರು: ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಅಡ್ವಾನ್ಸ್ಡ್ ಕಂಪ್ಯೂಟಿ0ಗ್ ವಿಭಾಗದ ವಿದ್ಯಾರ್ಥಿ ಸಂಘಟನೆಗಳಾದ ಸಿಗ್ಮಾ ಸ್ಕ್ವೇರ್ಡ್ ಮತ್ತು ಅನಾಲಿಟಿಕಾ ಸಂಸ್ಥೆಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು.

ಡೇಟಾ ವಿಶ್ಲೇಷಣೆಯು ನೈಜ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಬಹಳಷ್ಟು ಸಹಕಾರಿ. ಉತ್ಸಾಹದಿಂದ ಮತ್ತು ಹೊಣೆಗಾರಿಕೆಯೊಂದಿಗೆ ಈ ಕ್ಷೇತ್ರವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಡಾ. ವಿಷ್ಣು ವಿನೇಕರ್ ಹೇಳಿದರು.

ಎಸ್‌ಐಟಿ ನಿರ್ದೇಶಕರಾದ ಫಾ. ಡೆನ್ಸಿಲ್ ಅವರು ಅಧ್ಯಕ್ಷೀಯ ಭಾಷಣದಲ್ಲಿ, ಡೇಟಾ ಅನಾಲಿಟಿಕ್ಸ್ ನ ಯುಗ ಬಹಳಷ್ಟು ಮಹತ್ವವನ್ನು ಹೊಂದಿದೆ. ವಿದ್ಯಾರ್ಥಿ ನಾಯಕರಿಗೆ ಶಿಸ್ತಿನಿಂದ, ನೈತಿಕ ಉದ್ದೇಶದೊಂದಿಗೆ ಕಾರ್ಯನಿರ್ವಹಿಸಬೇಕಿದೆ ಎಂದರು.
ಅಡ್ವಾನ್ಸ್ಡ್ ಕಂಪ್ಯೂಟಿ0ಗ್ ವಿಭಾಗದ ಮುಖ್ಯಸ್ಥೆ ಡಾ. ಜಯತಿ ಭದ್ರಾ ಸ್ವಾಗತಿಸಿದರು. ಐರೆನ್ ಲಾರೆನ್ಸ್ ಡಿ’ಲಿಮಾ ಅತಿಥಿಗಳ ಪರಿಚಯಿಸಿದರು. ಸಿಗ್ಮಾ ಸ್ಕ್ವೇರ್ಡ್ ಅಧ್ಯಕ್ಷ ಅಶ್ವಿನ್ ವಂದಿಸಿದರು.

Exit mobile version