
ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜಕ್ಕೆ ಒಂದು ಮಹಿಳಾ ಅಲ್ಪಸಂಖ್ಯಾತ ವಸತಿ ಕಾಲೇಜು ಮಂಜೂರಾಗಿದೆ. ಈ ಕಾಲೇಜು ವಿಧಾನ ಸಭಾಧ್ಯಕ್ಷರಾದ ಯು. ಟಿ ಖಾದರ್ ಅವರ ಕ್ಷೇತ್ರವಾದ ಉಳ್ಳಾಲದಲ್ಲಿ ನಿರ್ಮಾಣವಾಗಲಿದೆ.
ಅಭಿವೃದ್ಧಿಯ ಹರಿಕಾರ ಯು.ಟಿ ಖಾದರ್ ಅವರ ಪ್ರಯತ್ನದ ಫಲವಾಗಿ ಮಂಜೂರಾದ ಈ ಮಹಿಳಾ ವಸತಿ ಕಾಲೇಜು ಸುಮಾರು 17 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದಕ್ಕೆ ಬೇಕಾದ 2 ಎಕರೆ ಭೂಮಿ ಗುರುತಿಸುವ ಕೆಲಸ ಆರಂಭವಾಗಿದ್ದು ಅತೀ ಶೀಘ್ರವೇ ಕಾಮಗಾರಿಯೂ ಆರಂಭವಾಗಲಿದೆ.
ಈ ಕಾಲೇಜಿನಲ್ಲಿ ವಸತಿ ರಹಿತ ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶವಿದ್ದು ಶೇ 75 ರಷ್ಟು ಸೀಟುಗಳು ಅಲ್ಪಸಂಖ್ಯಾತ ಸಮುದಾಯಗಳಿಗೆ ಮೀಸಲಿಟ್ಟರೆ ಉಳಿದ ಶೇ 25 ಇತರೆ ವಿದ್ಯಾರ್ಥಿಗಳಿಗೆ ಮೀಸಲಿರಲಿದೆ.

