Site icon Ullalavani

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಉಳ್ಳಾಲದಲ್ಲಿ 17 ಕೋಟಿ ವೆಚ್ಚದಲ್ಲಿ ಮಹಿಳಾ ಅಲ್ಪಸಂಖ್ಯಾತ ವಸತಿ ಕಾಲೇಜು ಸ್ಥಾಪನೆಗೆ ನಿರ್ಧಾರ. ರಾಜ್ಯಕ್ಕೆ ಮಂಜೂರಾದ ಏಕೈಕ ಕಾಲೇಜನ್ನು ಉಳ್ಳಾಲಕ್ಕೆ ತಂದ ಸ್ಪೀಕರ್ ಯು. ಟಿ ಖಾದರ್

ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜಕ್ಕೆ ಒಂದು ಮಹಿಳಾ ಅಲ್ಪಸಂಖ್ಯಾತ ವಸತಿ ಕಾಲೇಜು ಮಂಜೂರಾಗಿದೆ. ಈ ಕಾಲೇಜು ವಿಧಾನ ಸಭಾಧ್ಯಕ್ಷರಾದ ಯು. ಟಿ ಖಾದರ್ ಅವರ ಕ್ಷೇತ್ರವಾದ ಉಳ್ಳಾಲದಲ್ಲಿ ನಿರ್ಮಾಣವಾಗಲಿದೆ.

ಅಭಿವೃದ್ಧಿಯ ಹರಿಕಾರ ಯು.ಟಿ ಖಾದರ್ ಅವರ ಪ್ರಯತ್ನದ ಫಲವಾಗಿ ಮಂಜೂರಾದ ಈ ಮಹಿಳಾ ವಸತಿ ಕಾಲೇಜು ಸುಮಾರು 17 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದಕ್ಕೆ ಬೇಕಾದ 2 ಎಕರೆ ಭೂಮಿ ಗುರುತಿಸುವ ಕೆಲಸ ಆರಂಭವಾಗಿದ್ದು ಅತೀ ಶೀಘ್ರವೇ ಕಾಮಗಾರಿಯೂ ಆರಂಭವಾಗಲಿದೆ.

ಈ ಕಾಲೇಜಿನಲ್ಲಿ ವಸತಿ ರಹಿತ ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶವಿದ್ದು ಶೇ 75 ರಷ್ಟು ಸೀಟುಗಳು ಅಲ್ಪಸಂಖ್ಯಾತ ಸಮುದಾಯಗಳಿಗೆ ಮೀಸಲಿಟ್ಟರೆ ಉಳಿದ ಶೇ 25 ಇತರೆ ವಿದ್ಯಾರ್ಥಿಗಳಿಗೆ ಮೀಸಲಿರಲಿದೆ.

Exit mobile version