ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೆ.ಸಿ. ರೋಡ್ ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಸಂಘದ ಕೆ.ಸಿ. ರೋಡ್ ಶಾಖೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಸಂಘದ ಗ್ರಾಹಕರಾದ ಸಿಸ್ಟರ್ ಐಲಿನ್ ಮಥಾಯೀಸ್, ಕೆ. ಶಿವಪ್ರಸಾದ್ ಆಚಾರ್ಯ ಹಾಗೂ ಅಬ್ಬಾಸ್ ಉಚ್ಚಿಲರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.


ಸಂಘದ ಗ್ರಾಹಕರಾದ ಸಿಸ್ಟರ್ ಐಲಿನ್ ಮಥಾಯೀಸ್ ರವರು ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ತನ್ನ ಗ್ರಾಹಕ ಸ್ನೇಹಿ ಸೇವೆಯೊಂದಿಗೆ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ. ಈ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಿದ್ದಲ್ಲಿ ಸ್ಥಳಾವಕಾಶವನ್ನು ಮಾಡಿಕೊಡುವುದಾಗಿ ತಿಳಿಸಿದರು.
ಕೆ. ಶಿವಪ್ರಸಾದ್ ಆಚಾರ್ಯ ರವರು ಮಾತನಾಡಿ “ಕೆ.ಸಿ. ರೋಡ್ ಶಾಖೆಯಲ್ಲಿ ಸಿಬ್ಬಂದಿಗಳ ಗ್ರಾಹಕ ಸ್ನೇಹಿ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅಬ್ಬಾಸ್ ಉಚ್ಚಿಲ ರವರು ಮಾತನಾಡಿ “ಕೆ.ಸಿ. ರೋಡ್ ಶಾಖೆಯು ಎರಡು ವರುಷದಲ್ಲಿ ಈ ಭಾಗದ ಜನತೆಗೆ ತನ್ನ ಕಾರ್ಯವೈಖರಿಯಿಂದ ತುಂಬಾ ಹತ್ತಿರವಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡುವಂತೆ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರಲ್ಲಿ ಮನವಿಯನ್ನು ಮಾಡಿದರು.
ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ “ಸಂಘದ ಬೆಳವಣಿಗೆಗೆ ಕೇವಲ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಮಾತ್ರವಲ್ಲದೆ ಗ್ರಾಹಕರು ಕೂಡ ಕಾರಣೀಭೂತರು. ಈ ನಿಟ್ಟಿನಲ್ಲಿ ಸಂಘದ ಎಲ್ಲಾ ಶಾಖೆಗಳಲ್ಲಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗ್ರಾಹಕ ಸಭೆಯನ್ನು ನಡೆಸಿ, ಗ್ರಾಹಕರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಕಾರ್ಯರೂಪಕ್ಕೆ ತರಲಾಗುತ್ತಿದೆ. ಸಂಘವು ಪ್ರಸ್ತುತ 33 ಶಾಖೆಗಳೊಂದಿಗೆ ಕಾರ್ಯಚರಿಸುತ್ತಿದ್ದು, ಈ ಸಾಲಿನಲ್ಲಿ ಇನ್ನೂ ಎರಡು ನೂತನ ಶಾಖೆಗಳನ್ನು ಆರಂಭಿಸುವುದಾಗಿ ತಿಳಿಸಿದರು. ಸಂಘವು ಪ್ರತಿ ವರ್ಷದಂತೆ ಈ ವರ್ಷವೂ ಉತ್ತಮ ಲಾಭವನ್ನು ಗಳಿಸಿದ್ದು, ಗ್ರಾಹಕರಿಗೆ ಒಳ್ಳೆಯ ಡಿವಿಡೆಂಡ್ ನೀಡುವುದಾಗಿ ತಿಳಿಸಿದರು. ಮತ್ತು ಶಾಖೆಯ ಕಟ್ಟಡ ಉದ್ಘಾಟಣೆ ಸಮಯದಲ್ಲಿ ಮಾಲೀಕರಾದ ಅಬ್ಬಾಸ್ ಉಚ್ಚಿಲರವರ ಪ್ರೋತ್ಸಾಹವನ್ನು ನೆನಪಿಸಿದರು. ಕೆ.ಸಿ. ರೋಡ್ ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಸದಸ್ಯ ಗ್ರಾಹಕರಿಗೆ ಚಿನ್ನಾಭರಣಗಳಿಗೆ ಅಧಿಕ ಮೌಲ್ಯದೊಂದಿಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲಗಳನ್ನು ನೀಡುತ್ತಿದ್ದೇವೆ. ಸಂಸ್ಥೆಯು ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ ಜೀವ ವಿಮೆ, ಆರೋಗ್ಯ ವಿಮೆ, ಮತ್ತು ವಾಹನ ವಿಮಾ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಸುಮಾರು 86ಕ್ಕೂ ಮಿಕ್ಕಿ ಉಚಿತ ಆರೋಗ್ಯ ಶಿಬಿರಗಳನ್ನು ಸಂಘವು ಆಯೋಜಿಸಿ ಜನರ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸುವಂತೆ ಮಾಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಆನಂದ್ ಎಸ್ ಕೊಂಡಾಣ, ಮುಖ್ಯ ಕಾರ್ಯನಿರ್ವಹಣಾದಿಕಾರಿ ಶ್ರೀಮತಿ ಸೌಮ್ಯ ವಿಜಯ್ ಮತ್ತಿತ್ತರರು ಉಪಸ್ಥಿತರಿದ್ದರು.
ಸಂಘದ ಕೆ.ಸಿ. ರೋಡ್ ಶಾಖೆಯ ಸಿಬ್ಬಂದಿಯಾದ ಕು. ಮೇಘಶ್ರೀ ಪಿ. ಎನ್. ಸ್ವಾಗತಿಸಿ , ಶ್ರೀಮತಿ ವಿದ್ಯಾ ಹರೀಶ್ ರವರು ವಂದಿಸಿದರು. ಶಾಖಾಧಿಕಾರಿ ಶಿವರಾಮ ಕಾರ್ಯಕ್ರಮ ನಿರೂಪಿಸಿದರು.





